ದಂಗಲ್ ಚಿತ್ರ ನೋಡಿದ್ದೇನೆ; ಚೆನ್ನಾಗಿದೆ: ಮೋದಿಗೆ ಜಿನ್ಪಿಂಗ್
Team Udayavani, Jun 9, 2017, 6:18 PM IST
ಅಸ್ತನಾ, ಕಝಕ್ಸ್ಥಾನ : “ನಾನು ಆಮೀರ್ ಖಾನ್ ನಟನೆಯ ಕ್ರೀಡಾ ಕಥಾ ಚಿತ್ರ “ದಂಗಲ್’ ನೋಡಿ ಮೆಚ್ಚಿಕೊಂಡಿದ್ದೇನೆ’ ಎಂದು ಚೀನದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಭ್ರಮದಿಂದ ಹೇಳಿದ್ದಾರೆ.
ಆಮೀರ್ ಖಾನ್ ನಟನೆಯ ಸೂಪರ್ ಹಿಟ್ ಕ್ರೀಡಾ ಕಥಾ ಚಿತ್ರ ದಂಗಲ್ ಚೀನದಲ್ಲಿ ಕಳೆದ ಮೇ 5ರಂದು ಬಿಡುಗಡೆಗೊಂಡಿದ್ದು ಅಲ್ಲಿಯೂ ಅದು ಸೂಪರ್ ಹಿಟ್ ಆಗಿದೆ. ಈಚೆಗೆ 1,100 ಕೋಟಿ ರೂ.ಗಳ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆಯನ್ನು ದಾಖಲಿಸಿರುವ ದಂಗಲ್ ಚಿತ್ರ, ಚೀನ ಸಿನೇಮಾ ರಂಗದಲ್ಲಿ ಹಲವು ದಾಖಲೆಗಳನ್ನು ಮುರಿದು ಅತ್ಯಂತ ಜನಪ್ರಿಯವಾಗಿದೆ. ಚೀನದಲ್ಲಿ ಒಂದು ಶತಕೋಟಿ ಯುವಾನ್ (14.70 ಕೋಟಿ ಡಾಲರ್) ಗಳಿಸಿರುವ 33ನೇ ಚಿತ್ರ ಎಂಬ ದಾಖಲೆಯನ್ನು ದಂಗಲ್ ಮಾಡಿದೆ. ಚೀನದ ಸುಮಾರು 7,000 ಸಿನೇಮಾ ಮಂದಿಗಳಲ್ಲಿ ದಂಗಲ್ ಪ್ರದರ್ಶನ ಈಗಲೂ ಸಾಗಿದೆ.
ಕಝಕ್ಸ್ಥಾನದ ರಾಜಧಾನಿಯಾಗಿರುವ ಅಸ್ತಾನಾದಲ್ಲಿ ಎರಡು ದಿನಗಳ ಶಾಂಘೈ ಸಹಕಾರ ಶೃಂಗದ ಪಾರ್ಶ್ವದಲ್ಲಿ ಪ್ರಧಾನಿ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭೇಟಿಯಾಗಿದ್ದಾರೆ. ‘ದಂಗಲ್ ಕ್ರೀಡಾ ಕಥಾ ಚಿತ್ರವನ್ನು ನಾನು ನೋಡಿದ್ದೇನೆ; ತುಂಬಾ ಚೆನ್ನಾಗಿದೆ; ಚೀನದಲ್ಲಿ ಅದು ಚೆನ್ನಾಗಿ ಓಡುತ್ತಿದೆ’ ಎಂದು ಚೀನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದಾರೆ ಎಂದು ವಿದೇಶ ಕಾರ್ಯದರ್ಶಿ ಎಸ್ ಜೈಶಂಕರ್ ಮಾಧ್ಯಮಕ್ಕೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
White House; ಎಐ ಹಿರಿಯ ಸಲಹೆಗಾರರಾಗಿ ಭಾರತ ಮೂಲದ ವ್ಯಕ್ತಿ ನೇಮಕ
Syria ಮಾಜಿ ಅಧ್ಯಕ್ಷ ಅಸಾದ್ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.