ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Team Udayavani, Apr 18, 2024, 9:48 AM IST
ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸಂಸ್ಥಾಪಕ ಮತ್ತು ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಬುಧವಾರ ತಮ್ಮ ಪತ್ನಿ ಬುಶ್ರಾ ಬೀಬಿ ಜೈಲುವಾಸಕ್ಕೆ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ನೇರ ಹೊಣೆ ಎಂದು ಆರೋಪಿಸಿದ್ದಾರೆ.
ಪತಿಯೊಂದಿಗಿನ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬುಶ್ರಾ ಬೀಬಿಯೂ ಶಿಕ್ಷೆಗೊಳಗಾಗಿದ್ದು ಪ್ರಸ್ತುತ ಇಸ್ಲಾಮಾಬಾದ್‌ನ ಉಪನಗರದಲ್ಲಿರುವ ಅವರ ಬನಿ ಗಾಲಾ ನಿವಾಸದಲ್ಲಿ ಬಂಧನದಲ್ಲಿದ್ದಾರೆ.
ಇಮ್ರಾನ್ ಖಾನ್ ಅವರ ಅಧಿಕೃತ X ಖಾತೆಯಲ್ಲಿ ಸುಧೀರ್ಘವಾದ ಪೋಸ್ಟ್ ಒಂದನ್ನು ಅಪ್‌ಲೋಡ್ ಮಾಡಲಾಗಿದ್ದು ಪ್ರಸ್ತುತ ಸೆರೆವಾಸದಲ್ಲಿರುವ ಇಮ್ರಾನ್ ಖಾನ್ ಅಡಿಯಾಲಾ ಜೈಲಿನಲ್ಲಿ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಸೇನಾ ಮುಖ್ಯಸ್ಥರ ಮೇಲೆ ಆರೋಪಗಳನ್ನು ಮಾಡಿದ್ದಾರೆ.
ನನ್ನ ಪತ್ನಿಗೆ ನೀಡಲಾದ ಶಿಕ್ಷೆಯಲ್ಲಿ ಜನರಲ್ ಅಸಿಮ್ ಮುನೀರ್ ನೇರವಾಗಿ ಭಾಗಿಯಾಗಿದ್ದಾರೆ, ”ಎಂದು ಖಾನ್ ಹೇಳಿದರು, ಅಲ್ಲದೆ ಆಕೆಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ಮೇಲೆ ಅಸಿಮ್ ಮುನೀರ್ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಹೆಂಡತಿಗೆ ಏನಾದರೂ ಆಯಿತೆಂದರೆ ನಾನು ಅಸೀಂ ಮುನೀರ್‌ನನ್ನು ಬಿಡುವುದಿಲ್ಲ, ನಾನು ಬದುಕಿರುವವರೆಗೂ ಅಸೀಮ್ ಮುನೀರ್‌ನನ್ನು ಬಿಡುವುದಿಲ್ಲ. ಅವರ ಅಸಂವಿಧಾನಿಕ ಮತ್ತು ಕಾನೂನುಬಾಹಿರ ಕ್ರಮಗಳನ್ನು ನಾನು ಬಹಿರಂಗಪಡಿಸುತ್ತೇನೆ, ”ಎಂದು ಅವರು ಬೆದರಿಕೆ ಹಾಕಿದರು.
Founding Chairman PTI Imran Khan’s discussion with journalists in Adiala Jail: pic.twitter.com/OUQZT8NBxK
— PTI (@PTIofficial) April 17, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.