ಫೇಸುಬುಕ್ಕೇ ಜಗತ್ತಿನ 2ನೇ ಅತಿದೊಡ್ಡ ಧರ್ಮ!

Team Udayavani, Aug 29, 2017, 6:10 AM IST

Face-book-28.jpg

ವಾಷಿಂಗ್ಟನ್‌: ಧರ್ಮ ಒಂದು ಭಾವನಾತ್ಮಕ ಬಂಧ. ಜಗತ್ತಿನ ಜನರಿಗೆ ತಮ್ಮ ಧರ್ಮವೇ ದೊಡ್ಡದು. ಸಾಮಾಜಿಕವಾಗಿ ಅಂತರ್ಗತವಾಗಿರುವ ಸಮುದಾಯ, ರಾಜಕೀಯ, ಆಚರಣೆ ಮೊದಲಾದ ವಿಷಯಗಳು ಬಂದಾಗ “ಧರ್ಮ’ ಎಂಬ ದುರ್ಬೀನು ಹಾಕಿ ನೋಡುವ ಜನ, ಆದ್ಯತೆ ನೀಡುವುದು “ಧರ್ಮ’ಕ್ಕೆ, ತಮ್ಮ ಧರ್ಮೀಯರಿಗೆ. ಆದರೆ ಜಗತ್ತಿನ ಎಲ್ಲ ಧರ್ಮಗಳಿಗೂ ಕಂಟಕಪ್ರಾಯವಾಗಿ “ಜಾಲತಾಣ ಧರ್ಮ’ವೊಂದು ಹುಟ್ಟಿಕೊಂಡಿದೆ. ಅದುವೇ ಫೇಸ್‌ಬುಕ್‌!

ಅಂಗೈ ಅಗಲದ ಪರದೆಯಿಂದ ಹಿಡಿದು 21 ಇಂಚಿನ ಮಾನೀಟರ್‌, ಅಷ್ಟೇ ಏಕೆ 42 ಇಂಚಿನಷ್ಟು ದೊಡ್ಡ ಟಿ.ವಿ ಪರದೆಗೂ ಲಗ್ಗೆಯಿಟ್ಟು ರಾರಾಜಿಸುತ್ತಿರುವ ಫೇಸ್‌ಬುಕ್‌, ಕೆಲವೇ ತಿಂಗಳಲ್ಲಿ ಜಗತ್ತಿನ ಅತಿ ದೊಡ್ಡ ಧರ್ಮವಾಗಿರುವ ಕ್ರೈಸ್ತ ಧರ್ಮದ ಅನುಯಾಯಿಗಳಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಲಿದೆ! ಕ್ರೈಸ್ತ ಧರ್ಮ, 230 ಕೋಟಿ (2.3 ಬಿಲಿಯನ್‌) ಅನುಯಾಯಿಗಳನ್ನು ಹೊಂದಿದ್ದು, 2017ರ ಜೂನ್‌ ಅಂತ್ಯದ  ವೇಳೆಗೆ 201 ಕೋಟಿ ಮಾಸಿಕ ಬಳಕೆದಾರರನ್ನು ಹೊಂದಿದ್ದ ಫೇಸ್‌ಬುಕ್‌, ಕ್ರೈಸ್ತ ಧರ್ಮೀಯರ ಸಂಖ್ಯೆಗೆ ಅತಿ ಹತ್ತಿರದಿಂದಲೇ ಟಕ್ಕರ್‌ ನೀಡಿದೆ.

ಇಸ್ಲಾಂ ಹಿಂದಿಕ್ಕಿದ ಎಫ್ಬಿ: ವಿವಿಧ ಧರ್ಮಗಳು, ಅವುಗಳ ಅನುಯಾಯಿಗಳು ಹಾಗೂ ಫೇಸ್‌ಬುಕ್‌ ಬಳಕೆದಾರರನ್ನು ಲೆಕ್ಕ ಹಾಕುವ ನಿಟ್ಟಿನಲ್ಲಿ ಅಮೆರಿಕದ ಪೆವ್‌ ರಿಸರ್ಚ್‌ ಸೆಂಟರ್‌ ಜಗತ್ತಿನಾದ್ಯಂತ ಸಮೀಕ್ಷೆ ನಡೆಸಿ ನೀಡಿರುವ ವರದಿ ಪ್ರಕಾರ, 180 ಕೋಟಿ ಅನುಯಾಯಿಗಳನ್ನು ಹೊಂದುವ ಮೂಲಕ ವಿಶ್ವದ ಎರಡನೇ ದೊಡ್ಡ ಧರ್ಮವಾಗಿರುವ ಇಸ್ಲಾಂ ಅನ್ನು ಫೇಸ್‌ಬುಕ್‌ (201 ಕೋಟಿ) ಈಗಾಗಲೇ ಹಿಂದಿಕ್ಕಿದೆ. 110 ಕೋಟಿ ಅನುಯಾಯಿಗಳನ್ನು ಹೊಂದಿ ಮೂರನೇ ಸ್ಥಾನದಲ್ಲಿರುವ ಹಿಂದೂ ಧರ್ಮ ಕೂಡ ನಾಲ್ಕನೇ ಸ್ಥಾನಕ್ಕೆ ಸರಿದಿದೆ.

ರ್ಮ ಮೀರಿದ ನಂಬಿಕೆ!
“ಅಮೆರಿಕದಲ್ಲಿ ಧಾರ್ಮಿಕತೆ ಹಾಗೂ ಧರ್ಮವನ್ನು ಮೀರಿದ ನಂಬಿಕೆ ಅಥವಾ ಸಮುದಾಯವಾಗಿ ಫೇಸ್‌ಬುಕ್‌ ಬೆಳೆಯಲಿದೆ,’ ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಜೂಕರ್‌ಬರ್ಗ್‌ ಹೇಳಿದ್ದರು. ಅದರಂತೆ ಧರ್ಮದ ಮೇಲಿನ ಆಸಕ್ತಿ ಕಳೆದುಕೊಂಡ ಅಮೆರಿಕನ್ನರು, ಚರ್ಚ್‌ಗಿಂತಲೂ ಹೆಚ್ಚಾಗಿ ಫೇಸ್‌ಬುಕ್‌ಗೆ ಭೇಟಿ ನೀಡುತ್ತಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಅಲ್ಲದೆ ಜನರ ನಡುವಿನ ಅಂತರ ಕಡಿಮೆ ಮಾಡುವಲ್ಲೂ ಫೇಸ್‌ಬುಕ್‌ ಯಶಸ್ವಿಯಾಗಿದೆ.

ಕುವೆಂಪು ಕರೆಗೆ ಓಗೊಟ್ಟು…
“ಓ ಬನ್ನಿ ಸೋದರರೆ ಬೇಗ ಬನ್ನಿ… ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ,’ ಎಂಬುದು ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶ. ಈ ಸಂದೇಶವನ್ನು ಇಡೀ ವಿಶ್ವವೇ ಪಾಲಿಸುತ್ತಿರುವಂತಿದೆ. ಆದರೆ ಗುಡಿ, ಚರ್ಚು, ಮಸೀದಿಗಳಿಂದ ಹೊರ ಬಂದು, ಫೇಸ್‌ಬುಕ್‌ ಮಾರ್ಗ ಹಿಡಿದ ಜನ ಸ್ಮಾರ್ಟ್‌ ಸಾಧನದ ಒಳ ಹೊಕ್ಕಿರುವುದು ದುರಂತ. ಪೆವ್‌ ಸಂಸ್ಥೆ ಹೇಳಿರುವ ಪ್ರಕಾರ 132 ಕೋಟಿ ಮಂದಿ ಪ್ರತಿ ವಾರ ಫೇಸ್‌ಬುಕ್‌ ಬಳಸುತ್ತಾರೆ. ಇದೇ ವೇಳೆ ಎಫ್ಬಿ ಮಾಸಿಕ ಬಳಕೆದಾರರ ಸಂಖ್ಯೆ 201 ಕೋಟಿ ಇದೆ. ಎಲ್ಲ ಧರ್ಮಗಳನ್ನು ಗಣನೆಗೆ ತೆಗೆದುಕೊಂಡರೆ ವಾರ ಅಥವ ತಿಂಗಳಿಗೆ ಇಷ್ಟೋಂದು ಸಂಖ್ಯೆಯ ಭಕ್ತರು ಅಥವಾ ಅನುಯಾಯಿಗಳು ಗುಡಿ, ಚರ್ಚ್‌ ಅಥವಾ ಮಸೀದಿಗೆ ಭೇಟಿ ನೀಡುವುದೇ ಇಲ್ಲ. ಹೀಗಾಗಿ ಸಾಮಾಜಿಕ ಜಾಲತಾಣ ಪ್ರಿಯರಿಗೆ ಫೇಸ್‌ಬುಕ್ಕೇ ದೇವಾಲಯ!

ಕ್ಷಿಪ್ರ ಗತಿ ಬೆಳವಣಿಗೆ
ಈವರೆಗೆ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಧರ್ಮ ಎನಿಸಿರುವುದು ಇಸ್ಲಾಂ. ಈ ಧರ್ಮದ ಅನುಯಾಯಿಗಳ ಸಂಖ್ಯೆಯಲ್ಲಿ ವಾರ್ಷಿಕ ಶೇ.1.4ರಷ್ಟು ಪ್ರಗತಿಯಾಗುತ್ತದೆ. ಆದರೆ ಫೇಸ್‌ಬುಕ್‌ ಈ ಬೆಳವಣಿಗೆ ದಾಖಲೆಯನ್ನು ಪುಡಿಗಟ್ಟಿದ್ದು, ಫೇಸ್‌ಬುಕ್‌ ಬಳಕೆದಾರರ ಸಂಖ್ಯೆಯಲ್ಲಿ ವಾರ್ಷಿಕ ಶೇ.22ರಷ್ಟು ಪ್ರಗತಿ ಕಂಡುಬರುತ್ತಿದೆ. à ಪ್ರಗತಿ ಪ್ರಮಾಣದ ಆಧಾರದಲ್ಲಿ ಎಫ್ಬಿ ಬಳಕೆದಾರರ ಸಂಖ್ಯೆ ಇನ್ನು ಕೆಲವೇ ತಿಂಗಳಲ್ಲಿ ಕ್ರೈಸ್ತ ಧರ್ಮೀಯರ ಸಂಖ್ಯೆಯನ್ನೂ ಹಿಂದಿಕ್ಕಿ ಬೆಳೆಯಲಿದೆ.

ಚೀನಾ ತಾಣಗಳೂ ಹಿಂದೆ
ಇದೇ ವೇಳೆ ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ ರೀತಿಯ ಬೃಹತ್‌ ಸಾಮಾಜಿಕ ಮಾಧ್ಯಮಗಳ ಒಡೆಯನಾಗಿರುವ ಫೇಸ್‌ಬುಕ್‌, ಬಳಕೆದಾರರ ಸಂಖ್ಯೆಯಲ್ಲಿ ಚೀನಾ ಮೂಲದ ವಿಚಾಟ್‌ ಹಾಗೂ ಟೆನ್‌ಸೆಂಟ್‌ ಅನ್ನೂ ಹಿಂದಿಕ್ಕಿದೆ. ಈ ಎರಡೂ ಚೀನಾ ಸಾಮಾಜಿಕ ಮಾಧ್ಯಮಗಳು ಒಟ್ಟಾಗಿ 200 ಕೋಟಿ ಬಳಕೆದಾರರನ್ನು ಹೊಂದಿದ್ದರೆ ಫೇಸ್‌ಬುಕ್‌ ಒಂದೇ 201 ಕೋಟಿ ಬಳಕೆದಾರರನ್ನು ಹೊಂದಿದೆ. ಇನ್ನು ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂ ಬಳಕೆದಾರರನ್ನೂ ಗಣನೆಗೆ ತೆಗೆದುಕೊಂಡರೆ ಸಂಖ್ಯೆ ಲೆಕ್ಕಕ್ಕೇ ಸಿಗದು.

ಟಾಪ್ ನ್ಯೂಸ್

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Kadaba: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ; ತಪ್ಪಿದ ಅನಾಹುತ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Rain; ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

Mangaluru: ದೇವಸ್ಥಾನಕ್ಕೆ ಹೋಗಿದ್ದ ಮಹಿಳೆ ನಾಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

America: ಬೋಯಿಂಗ್‌ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Vivek Ramaswamy: ವಿವೇಕ್‌ಗೆ ಟ್ರಂಪ್‌ ಸರಕಾರದ ಕಾರ್ಯಕ್ಷಮತೆ ಇಲಾಖೆ ಹೊಣೆ

Viral: ಜನಪ್ರಿಯ ಟಿಕ್‌ ಟಾಕ್‌ ತಾರೆಯ ಖಾಸಗಿ ವಿಡಿಯೋ ಲೀಕ್..‌ ಭಾರೀ ವೈರಲ್   

Viral: ಜನಪ್ರಿಯ ಟಿಕ್‌ ಟಾಕ್‌ ತಾರೆಯ ಖಾಸಗಿ ವಿಡಿಯೋ ಲೀಕ್..‌ ಭಾರೀ ವೈರಲ್  

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

ಮಡೋನಾಗೆ ಯೋಗ ಕಲಿಸಿದ್ದ ಅಂತಾರಾಷ್ಟ್ರೀಯ ಯೋಗ ಗುರು ಮೈಸೂರಿನ ಶರತ್‌ ನಿಧನ

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್‌

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ

1-nirmala

Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.