ನಾನು ಗೆದ್ದರೆ ಅಮೆರಿಕ ಜಯ ಗಳಿಸಿದಂತೆ: ಟ್ರಂಪ್
ಬೈಡೆನ್ ಗೆದ್ದರೆ ಚೀನ ಗೆದ್ದಂತೆ
Team Udayavani, Oct 28, 2020, 6:05 AM IST
ವಾಷಿಂಗ್ಟನ್: ಡೆಮಾಕ್ರಾಟ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡೆನ್ ಮತ್ತು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಕಮಲಾ ಹ್ಯಾರಿಸ್ ಅವರು ಅಮೆರಿಕವನ್ನು ಸೋಷಿಯಲಿಸಂನತ್ತ ಕೊಂಡೊಯ್ಯಲಿದ್ದಾರೆ. ಅಮೆರಿಕನ್ನರು ನ.3ರ ಚುನಾವಣೆಯಲ್ಲಿ ಇವರ ಸಿದ್ಧಾಂತ ವನ್ನು ದೂರ ತಳ್ಳುವುದು ಒಳಿತು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ಮಂಗಳವಾರ 3 ಚುನಾವಣಾ ಪ್ರಚಾರ ರ್ಯಾಲಿ ನಡೆಸಿದ ಟ್ರಂಪ್, ಅಮೆರಿಕ ವಿರೋಧಿ ತೀವ್ರಗಾಮಿ ಗಳನ್ನು ನೀವು ತಡೆಯಲೇಬೇಕು. ಡೆಮಾ ಕ್ರಾಟ್‌ಗಳು ಮತ್ತು ಬೈಡೆನ್ ಜಯಿಸದಂತೆ ನೀವೇ ನೋಡಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಜತೆಗೆ, ಬೈಡೆನ್ ಗೆದ್ದರೆ ಚೀನ ಗೆದ್ದಂತೆ. ನಾನು ಗೆದ್ದರೆ ಅಮೆರಿಕ ಗೆದ್ದಂತೆ ಎಂದೂ ಟ್ರಂಪ್ ಹೇಳಿದ್ದಾರೆ.
ಈ ನಡುವೆ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ನಡೆಸದೇ ಇರುವ ತಮ್ಮ ನಿರ್ಧಾರವನ್ನು ಬೈಡೆನ್ ಸಮ ರ್ಥಿಸಿಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಇನ್ನಷ್ಟು ವ್ಯಾಪಿಸುವುದು ನನಗೆ ಇಷ್ಟವಿಲ್ಲ. ಹಾಗಾಗಿ ಹೆಚ್ಚಿನ ರ್ಯಾಲಿಗಳನ್ನು ಹಮ್ಮಿಕೊಂಡಿಲ್ಲ ಎಂದು ಹೇಳಿದ್ದಾರೆ.
ಟ್ರಂಪ್ ಸೂಚಿಸಿದ್ದ ನ್ಯಾ.ಬ್ಯಾರೆಟ್ ಸುಪ್ರೀಂ ಜಡ್ಜ್ ಆಗಿ ನೇಮಕ: ಕನ್ಸರ್ವೇಟಿವ್ ಜೂರಿಸ್ಟ್ ಆ್ಯಮಿ ಕೋನೆ ಬ್ಯಾರೆಟ್ ಅವರು ಮಂಗಳವಾರ ಅಮೆರಿಕ ಸುಪ್ರೀಂ ಕೋರ್ಟ್‌ನ 115ನೇ ನ್ಯಾಯ ಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿ ದ್ದಾರೆ. ನ್ಯಾ. ಬ್ಯಾರೆಟ್ ಅವರನ್ನು ಟ್ರಂಪ್ ಅವರೇ ನಾಮ ನಿರ್ದೇಶನ ಮಾಡಿದ್ದರು. ಡೆಮಾಕ್ರಾಟ್‌ಗಳ ತೀವ್ರ ವಿರೋಧದ ನಡುವೆಯೇ ಇದಕ್ಕೆ ರಿಪಬ್ಲಿಕನ್ ಹಿಡಿತದ ಸೆನೆಟ್ ಅಂಗೀಕಾರ ನೀಡಿದೆ. ಈ ಮೂಲಕ, ಅಧ್ಯಕ್ಷೀಯ ಚುನಾವಣೆಗೂ ಮುನ್ನ ನ್ಯಾಯಮೂರ್ತಿ ನೇಮಕ ವಿಚಾರದಲ್ಲಿ ಟ್ರಂಪ್‌ಗೆ ಗೆಲುವು ದೊರೆತಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.