ವಿಶಿಷ್ಟ ಸಿದ್ಧಾಂತಿಗಳಿಗೆ ಇಗ್ನೊಬೆಲ್!
Team Udayavani, Sep 15, 2019, 5:55 AM IST
ನ್ಯೂಯಾರ್ಕ್: ಮಕ್ಕಳ ಡೈಪರ್ ಬದಲಾಯಿಸುವ ಯಂತ್ರವನ್ನು ಆವಿಷ್ಕಾರ ಮಾಡಿದವರಿಗೆ, ವೊಂಬ್ಯಾಟ್ಸ್ ಎಂಬ ಸಸ್ತನಿಗಳ ಮಲ ಘನಾಕೃತಿ ಏಕಿರುತ್ತದೆ ಎಂದು ಪತ್ತೆ ಹಚ್ಚಿದವರಿಗೂ ಪ್ರಶಸ್ತಿ!
ಜನಸಾಮಾನ್ಯರು ಮೂಗು ಮುರಿಯಬಹುದಾದ ಇಂಥವುಗಳನ್ನೇ ಆವಿಷ್ಕರಿಸಿದ ವಿಜ್ಞಾನಿಗಳು, ತಂತ್ರಜ್ಞರನ್ನು ಪ್ರೋತ್ಸಾಹಿಸಲು ಹುಟ್ಟಿಕೊಂಡ ಪ್ರಶಸ್ತಿ ಇಗ್ನೊ ಬೆಲ್’. ಪ್ರತಿಷ್ಠಿತ ನೋಬೆಲ್ ಪ್ರಶಸ್ತಿಗಳ ಅಣಕು ಮಾದರಿಯ ಪ್ರಶಸ್ತಿಗಳು ಇವು. ಇತ್ತೀಚೆಗೆ ನಡೆದ ಹಾರ್ವರ್ಡ್ ವಿಶ್ವ ವಿದ್ಯಾನಿಲಯದ ವಾರ್ಷಿಕ ಸಮಾರಂಭದಲ್ಲಿ ಈ ಸಾಲಿನ 10 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಈ ಬಾರಿಯ ಪ್ರಶಸ್ತಿ ವಿಜೇತರು
– ರಸಾಯನಶಾಸ್ತ್ರ ವಿಭಾಗ
5 ವರ್ಷದ ಮಗುವಿನ ಬಾಯಿಯಲ್ಲಿ ದಿನಕ್ಕೆ ಅರ್ಧ ಲೀ. ಜೊಲ್ಲು ಉತ್ಪತ್ತಿಯಾಗುತ್ತದೆ ಎಂದದ್ದು ಜಪಾನ್ ಸಂಶೋಧ ಕರ ತಂಡ.
– ಎಂಜಿನಿಯರಿಂಗ್ ವಿಭಾಗ
ಮಕ್ಕಳ ಡೈಪರ್ ಬದಲಾಯಿಸುವ ಯಂತ್ರ ಆವಿಷ್ಕರಿಸಿ ವಿವರಿಸಿ ಪ್ರಶಸ್ತಿ ಪಡೆದದ್ದು ಇರಾನ್‌ನ ಎಂಜಿನಿಯರಿಂಗ್ ತಂಡ.
“ಕೆರೆತ’ಕ್ಕೆ ಶಾಂತಿ ಪ್ರಶಸ್ತಿ!
ನಮಗೆ ದೇಹದ ಯಾವ ಭಾಗವನ್ನು ಕೆರೆದುಕೊಳ್ಳುವುದರಲ್ಲಿ ಅತಿ ಹೆಚ್ಚು ಸುಖ ಸಿಗುತ್ತದೆ ಎಂಬುದನ್ನು ಸಂಶೋಧಿಸಿರುವ ಬ್ರಿಟಿಷ್ ಪ್ರೊಫೆಸರ್ ಫ್ರಾನ್ಸಿಸ್ ಮ್ಯಾಕ್‌ಗೊÉàನ್‌ಗೆ ಇಗ್ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. ಅವರ ಪ್ರಕಾರ, ಹಿಮ್ಮಡಿಯ ಮೇಲಿನ ಕೀಲಿನ ಕೆರೆತ ಅತಿ ಸುಖ ಕೊಡುತ್ತದೆ!
ಔಷಧ ವಿಜ್ಞಾನ ಪ್ರಶಸ್ತಿ
ಪಿಜ್ಜಾ ಜಂಕ್ ಫುಡ್ ಅಲ್ಲ ಎಂಬುದನ್ನು ಸಂಶೋಧಿಸಿದ ಇಟಲಿಯ ಸಿಲ್ವಾನೋ ಗ್ಯಾಲಸ್ ಎಂಬ ಸಂಶೋಧಕರಿಗೆ ಈ ಪ್ರಶಸ್ತಿ ಸಂದಿದೆ. 507 ಅಕ್ಯೂಟ್ ಮಯೋಕಾರ್ಡಿಯೋ ಇನಾ#ರ್ಕೇಷನ್ (ಎಎಂಐ) ರೋಗಿಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಯಿತು. ಇವರಲ್ಲಿ ಕೆಲವರಿಗೆ ಆಗಾಗ, ಕೆಲವರಿಗೆ ನಿಯಮಿತವಾಗಿ ಮತ್ತೂ ಕೆಲವರಿಗೆ ದಿನಂಪ್ರತಿ ಪಿಜ್ಜಾ ತಿನ್ನಲು ಅನುವು ಮಾಡಲಾಗಿತ್ತು. ಪಿಜ್ಜಾ ಆಹಾರವು ಅವರ ಕಾಯಿಲೆ ಮೇಲೆ ಯಾವುದೇ ದುಷ್ಪರಿಣಾಮ ಬೀರಲಿಲ್ಲ ಎಂಬ ಫಲಿತಾಂಶ ಹೊರಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.