Stop Wars: ನಾನು ಯುದ್ಧ ಆರಂಭಿಸಲ್ಲ… ನಿಲ್ಲಿಸುವೆ: ವಿಜಯೋತ್ಸದಲ್ಲಿ ಟ್ರಂಪ್ ಘೋಷಣೆ
Team Udayavani, Nov 7, 2024, 8:20 AM IST
ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಡೊನಾಲ್ಡ್ ಟ್ರಂಪ್, ಯುದ್ಧದ ನಿಲ್ಲಿಸುವ ಪ್ರಸ್ತಾವವನ್ನು ಮಾಡಿದ್ದಾರೆ.
“ನಾನು ಯುದ್ಧ ಆರಂಭ ಮಾಡಲು ಹೋಗಲಾರೆ, ಯುದ್ಧವನ್ನು ನಿಲ್ಲಿಸಲು ಮುಂದಾಗುತ್ತೇನೆ’ ಎಂದು ಘೋಷಣೆ ಮಾಡಿದ್ದಾರೆ. ಜತೆಗೆ ಜು.13ರಂದು ಪ್ರಚಾರದ ವೇಳೆ ತಮ್ಮ ಮೇಲೆ ನಡೆದಿದ್ದ ದಾಳಿ ಸ್ಮರಿಸಿದ ಅವರು “ಮಹತ್ವವಾಗಿರುವ ಯಾವುದೋ ಉದ್ದೇಶಕ್ಕೆ ದೇವರು ನನ್ನನ್ನು ಬದುಕಿಸಿದ್ದಾನೆ’ ಎಂದರು.
ಫ್ಲೋರಿಡಾದಲ್ಲಿ ವಿಜಯೋತ್ಸವ ಭಾಷಣ ಮಾಡಿದ ಟ್ರಂಪ್, ರಷ್ಯಾ- ಉಕ್ರೇನ್ ಹಾಗೂ ಇಸ್ರೇಲ್-ಹಮಾಸ್-ಲೆಬೆನಾನ್ ನಡುವಿನ ಯುದ್ಧದ ಬಗ್ಗೆ ಪರೋಕ್ಷವಾಗಿ ಪ್ರಸ್ತಾವಿಸಿ,”ನಾನು ಯುದ್ಧವನ್ನು ಆರಂಭಿಸುವುದಿಲ್ಲ, ನಿಲ್ಲಿಸುತ್ತೇನೆ” ಎಂದಿದ್ದಾರೆ. ಇನ್ನು ಅಮೆರಿಕದ ಗಡಿ ಭಾಗವನ್ನು ಕೂಡಲೇ ಬಂದ್ ಮಾಡಲಾಗುವುದು. ಯಾವುದೇ ಕಾರಣಕ್ಕೂ ಅಕ್ರಮ ವಲಸಿಗರು ಪ್ರವೇಶಿಸದಂತೆ ನೋಡಿಕೊಳ್ಳಲಾಗುವುದು. ತೆರಿಗೆಗಳ ಹೊರೆ ಇಳಿಸುತ್ತೇನೆ’ ಎಂದು ಘೋಷಿಸಿದರು.
ಉಸಿರಿರುವರೆಗೂ ಹೋರಾಟ: ಕಳೆದ 4 ವರ್ಷ ದಲ್ಲಾಗಿರುವ ವಿಭಜನೆಯನ್ನು ಸರಿಪಡಿಸುವ ಕಾಲ ಇದಾಗಿದ್ದು, ಒಂದಾಗುವ ಸಮಯ ಬಂದಿದೆ. ಕೆಲವು ಸಮಯದವರೆಗೆ ನಾವು ದೇಶವನ್ನು ಒಟ್ಟಾಗಿ ಮುನ್ನಡೆಸಬೇಕಿದೆ. ನಾವಿಂದು ಇತಿಹಾಸ ವನ್ನು ರಚಿಸಿದ್ದೇವೆ. ಸುರಕ್ಷಿತ-ಸಮೃದ್ಧ ಅಮೆರಿಕವನ್ನಾಗಿ ರೂಪಿಸುವವರೆಗೆ ನಾನು ವಿಶ್ರಮಿಸಲಾರೆ. ನನ್ನ ದೇಹದಲ್ಲಿ ಉಸಿರಿರುವವರೆಗೂ ನಿಮಗಾಗಿ ಹೋರಾಡುತ್ತೇನೆ ಎಂದರು.
ಇದನ್ನೂ ಓದಿ: US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh: ಹಿಂದೂಗಳ ಮೇಲೆ ಬಾಂಗ್ಲಾ ಸೇನೆಯಿಂದ ದಾಳಿ: ವೀಡಿಯೋ ವೈರಲ್
US Election: 1-7ರಿಂದ ಗೆಲುವನ್ನು 7-0ಗೇರಿಸಿಕೊಂಡ ಟ್ರಂಪ್
US Election: ಟ್ರಂಪ್‌ಗೆ ಅಭಿನಂದಿಸುವ ಯೋಜನೆಯಿಲ್ಲ… ರಷ್ಯಾ
US Election: ಸೋಲಿನ ಬೆನ್ನಲ್ಲೇ ಭಾಷಣ ರದ್ದುಪಡಿಸಿದ ಕಮಲಾ ಹ್ಯಾರಿಸ್!
Moo Deng: ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವು… ನೀರಾನೆ ಮರಿಯ ಭವಿಷ್ಯ ನಿಜವಾಯ್ತು
MUST WATCH
ಹೊಸ ಸೇರ್ಪಡೆ
Hubli: ಜನರ ಸಮಸ್ಯೆ ಆಲಿಸಿ ಸಭಾಪತಿಗೆ ವರದಿ: ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್
Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಸಮಸ್ಯೆ
CCTV Footage: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅವಘಡ… ಯುವತಿ ಬದುಕುಳಿದಿದ್ದೇ ಪವಾಡ
Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು
Hubli: ವಕ್ಫ್ ಬೋರ್ಡ್ ಆಸ್ತಿ ಸಿದ್ದು ಸರ್ಕಾರದ ಕಬಳಿಕೆಗೆ ಕುಮ್ಮಕ್ಕು: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.