ಅಕ್ಷತಾ ಪಕ್ಕ ಕೂರಬೇಕು ಎಂದೇ ಎಷ್ಟೋ ತರಗತಿಗಳನ್ನು ಬದಲಿಸಿಕೊಂಡಿದ್ದೆ: ರಿಷಿ ಸುನಕ್
Team Udayavani, Aug 8, 2022, 7:30 AM IST
ಲಂಡನ್: ಬ್ರಿಟನ್‌ನ ಪ್ರಧಾನ ಮಂತ್ರಿ ಸ್ಪರ್ಧೆಯ ರೇಸ್‌ನಲ್ಲಿರುವ ಬ್ರಿಟನ್ ಮಾಜಿ ಆರ್ಥಿಕ ಸಚಿವ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ “ದ ಸಂಡೇ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಪತ್ನಿ ಅಕ್ಷತಾ ಮತ್ತು ಕುಟುಂಬದ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
“ನಾನು ತೀರಾ ಅಚ್ಚುಕಟ್ಟಿನ ಮನುಷ್ಯ. ಅಕ್ಷತಾ ಯಾವಾಗಲೂ ಗೊಂದಲದಲ್ಲೇ ಇರುವವಳು. ನಾನು ಎಲ್ಲವನ್ನೂ ಮೊದಲೇ ಪ್ಲ್ಯಾನ್ ಮಾಡಿಟ್ಟುಕೊಳ್ಳುವವನು, ಆದರೆ ಅವಳು ಎಲ್ಲವನ್ನೂ ಆ ಕ್ಷಣದಲ್ಲೇ ನಿರ್ಧರಿಸುವವಳು. ಅವಳಿದ್ದರೆ ಮನೆ ತುಂಬ ಬಟ್ಟೆ, ಎಲ್ಲೆಂದರಲ್ಲಿ ಶೂಗಳು ಬಿದ್ದಿರುತ್ತೆ’ ಎಂದು ರಿಷಿ ಹೇಳಿದ್ದಾರೆ.
ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುವಾಗ ತರಗತಿಯಲ್ಲಿ ಅವಳ ಪಕ್ಕ ಕೂರಬೇಕು ಎಂದೇ ಎಷ್ಟೋ ತರಗತಿಗಳನ್ನು ಬದಲಿಸಿಕೊಂಡಿದ್ದೆ ಎಂದು ಪತ್ನಿಯ ಬಗೆಗಿನ ಪ್ರೀತಿಯನ್ನು ವರ್ಣಿಸಿದ್ದಾರೆ.
ಹಾಗೆಯೇ ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ಬಗ್ಗೆಯೂ ಮಾತನಾಡಿರುವ ಅವರು, “ನಾನು ನನ್ನದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೂ, ಅವರಿಬ್ಬರ ಜನ್ಮದ ಸಮಯದಲ್ಲೂ ನನಗೆ ಅವರೊಟ್ಟಿಗೆ ಇರಲು ಅವಕಾಶ ಸಿಕ್ಕಿತು. ನಿಜಕ್ಕೂ ನಾನು ಅದೃಷ್ಟವಂತ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.