ಟ್ರಂಪ್ ವಲಸೆ ನೀತಿ ಜಾರಿ; ಅಜ್ಜ-ಅಜ್ಜಿಗೂ ಇಲ್ಲ ಪ್ರವೇಶ
Team Udayavani, Jul 1, 2017, 3:45 AM IST
ವಾಷಿಂಗ್ಟನ್: ಆರು ಮುಸ್ಲಿಂ ರಾಷ್ಟ್ರಗಳ ನಿರಾಶ್ರಿತರು ಮತ್ತು ಪ್ರಯಾಣಿಕರಿಗೆ ನಿಷೇಧ ಹೇರಿ ಅಮೆರಿಕದ ಟ್ರಂಪ್ ಆಡಳಿತ ಹೊರಡಿ ಸಿದ್ದ ಅಧ್ಯಾದೇಶ ಶುಕ್ರವಾರದಿಂದ ಜಾರಿಯಾ ಗಿದೆ. ನಿರ್ಬಂಧ ಜಾರಿಗಿದ್ದ ತಡೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತೆರವುಗೊಳಿ ಸಿದ ಹಿನ್ನೆಲೆಯಲ್ಲಿ ಶುಕ್ರವಾರದಿಂದಲೇ ವಲಸೆ ನೀತಿ ಅನುಷ್ಠಾನ ಮಾಡಲಾಗಿದೆ.
ಅದರಂತೆ, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್‌ನ ನಾಗರಿಕರು 90 ದಿನಗಳ ಕಾಲ, ಇಲ್ಲಿನ ವಲಸಿಗರು 120 ದಿನಗಳ ಕಾಲ ಅಮೆರಿಕ ಪ್ರವೇಶಿಸುವಂತಿಲ್ಲ. ಆದರೆ, ಟ್ರಂಪ್ ಆಡಳಿತದ ಪರಿಷ್ಕೃತ ನೀತಿಯು ಹೊಸದಾಗಿ ವಿವಾದ ಹಾಗೂ ಕೋರ್ಟ್ ಹೋರಾಟಗಳಿಗೆ ನಾಂದಿ ಹಾಡುವ ಸಾಧ್ಯತೆ ಅಧಿಕವಾಗಿದೆ. ಏಕೆಂದರೆ, ಅಮೆರಿಕಕ್ಕೆ ಯಾರೆಲ್ಲ ಭೇಟಿ ನೀಡಬಹುದು ಮತ್ತು ಯಾರು ಭೇಟಿ ನೀಡಬಾರದು ಎಂಬ ಹೊಸ ಮಾನದಂಡವನ್ನು ಸರ್ಕಾರವು ಘೋಷಿಸಿದೆ. ಅದರ ಪ್ರಕಾರ, ಅಮೆರಿಕದಲ್ಲಿ ಹತ್ತಿರದ ಸಂಬಂಧಿಕರಿದ್ದರೆ ಅಂಥವರನ್ನು ಭೇಟಿಯಾಗಲು ಅವಕಾಶವಿದೆ. ಆದರೆ, ಅಜ್ಜ-ಅಜ್ಜಿಯಂದಿರು, ಮೊಮ್ಮಕ್ಕಳು, ಅಂಕಲ್, ಆಂಟಿ, ಸೋದರ ಸಂಬಂಧಿಗಳು ಮತ್ತು ಭಾವೀ ಪತಿ, ಭಾವೀ ಪತ್ನಿ ಮುಂತಾದವರು ಅಮೆರಿಕದಲ್ಲಿನ ಸಂಬಂಧಿಗಳನ್ನು ನೋಡಲು ಬರುವಂತಿಲ್ಲ. ಸೊಸೆಯಂದಿರು, ಅಳಿಯಂ ದಿರು ಮತ್ತು ಮಲಮಕ್ಕಳಿಗೆ ಮಾತ್ರ ಪ್ರವೇಶಾ ವಕಾಶವಿರುತ್ತದೆ. ಸರ್ಕಾರದ ಈ ಪಟ್ಟಿಗೆ ನ್ಯಾಯವಾದಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಧ್ಯಕ್ಷರಾದವರು ಕುಟುಂಬ ಗಳನ್ನು ಕೂಡಿಸುವ ಕೆಲಸ ಮಾಡಬೇಕೇ ಹೊರತು, ದೂರ ಮಾಡುವುದಲ್ಲ ಎಂದು ನ್ಯಾಷನಲ್ ಇರಾನಿಯನ್ ಅಮೆರಿಕನ್ ಕೌನ್ಸಿಲ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.