ಸಂಸದರ ಪತ್ನಿಯ ಆಕ್ಷೇಪಾರ್ಹ ವಿಡಿಯೋ ಪ್ರಕರಣ: ದೇಶದ ಪರವಾಗಿ ಕ್ಷಮೆ ಕೇಳಿದ ಇಮ್ರಾನ್ ಖಾನ್
Team Udayavani, Nov 6, 2022, 3:46 PM IST
ಲಾಹೋರ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಪಕ್ಷದ ಸೆನೆಟರ್ (ಎಂಪಿ) ಅವರ ಪತ್ನಿಯ ಖಾಸಗಿತನದ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮುಖ್ಯ ನ್ಯಾಯಮೂರ್ತಿಯವರು ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ.
ಸಂಸದ ಅಜಂ ಸ್ವಾತಿ ಅವರು ತಮ್ಮ ಮತ್ತು ಪತ್ನಿಯ ಆಕ್ಷೇಪಾರ್ಯ ವಿಡಿಯೋ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡ ಬಳಿಕ ಟ್ವೀಟ್ ಮಾಡಿದ ಇಮ್ರಾನ್ ಖಾನ್ ಅವರು ಇಡೀ ಪಾಕಿಸ್ತಾನದ ಪರವಾಗಿ ಸಂಸದರ ಪತ್ನಿಯ ಬಳಿ ಕ್ಷಮೆಯಾಚಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅಜಂ ಅವರು ತಮ್ಮ ಸಂಕಷ್ಟವನ್ನು ವಿವರಿಸುತ್ತಾ ಅಳಲು ತೋಡಿಕೊಂಡರು. ಅವರು ಮತ್ತು ಅವರ ಪತ್ನಿಯ ‘ಆಕ್ಷೇಪಾರ್ಹ ವೀಡಿಯೊ’ ವನ್ನು ಅಪರಿಚಿತ ಸಂಖ್ಯೆಯಿಂದ ತನ್ನ ಹೆಂಡತಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ವಿಕ್ಟೋರಿಯಾ ಸರೋವರಕ್ಕೆ ಬಿದ್ದ 49 ಪ್ರಯಾಣಿಕರನ್ನು ಹೊತ್ತ ವಿಮಾನ: 23 ಪ್ರಯಾಣಿಕರ ರಕ್ಷಣೆ
“ನನ್ನ ದೇಶದ ಹೆಣ್ಣುಮಕ್ಕಳು ನನ್ನ ಮಾತನ್ನು ಕೇಳುತ್ತಿರುವ ಕಾರಣ ವೀಡಿಯೊದಲ್ಲಿ ಏನಿದೆ ಎಂದು ನಾನು ಹೇಳಲಾರೆ” ಎಂದು ಅವರು ಹೇಳಿದರು. ಈ ಘಟನೆಯ ನಂತರ ಅವರ ಪತ್ನಿ ಮತ್ತು ಮೊಮ್ಮಗಳು ದೇಶ ತೊರೆದಿದ್ದಾರೆ’ ಎಂದೂ ಅವರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ದೇಶದ ಪರವಾಗಿ ಅಜಂ ಸ್ವಾತಿ ಅವರಿಗೆ ಕ್ಷಮೆ ಕೇಳಿದ್ದಾರೆ.
Shocking details of what happened last night to Azam Swati and his family being stated by @AzamKhanSwatiPk himself 1/2 pic.twitter.com/gdLpAW30qe
— PTI (@PTIofficial) November 5, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.