ಪಾಕಿಸ್ತಾನ ಸೇನೆಯ ನರಮೇಧ ಬಹಿರಂಗ : ಹಿಂದೂ ಸಂಸ್ಥೆಗೆ ಪಾಕ್ ಬೆದರಿಕೆ ..!
ಪಾಕಿಸ್ತಾನದ ಇಸ್ಲಾಮಿಕ್ ಧೊರಣೆ ಸಾಬೀತಾಗಿದೆ : ದೀಪಾಲಿ ಕುಲಕರ್ಣಿ
ಶ್ರೀರಾಜ್ ವಕ್ವಾಡಿ, May 28, 2021, 3:48 PM IST
ವಾಷಿಂಗ್ಟನ್ : ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರದ (ಪಿಟಿಎ – ಪಾಕಿಸ್ತಾನ ಟೆಲಿಕಮ್ಯನಿಕೇಶನ್ ಅಥಾರಿಟಿ) ಡಿಜಿಟಲ್ ವಿಶ್ಲೇಷಣಾ ವಿಭಾಗದಿಂದ ಬೆದರಿಕೆ ಸಂದೇಶ ಬಂದಿದೆ ಎಂದು ಅಮೆರಿಕಾ ಮೂಲದ ಹಿಂದೂ ಅಮೆರಿಕನ್ ಫೌಂಡೇಶನ್ (ಎಚ್ ಎ ಎಫ್) ತಿಳಿಸಿದೆ.
1971 ರ ಬಂಗಾಳಿ ಹಿಂದೂ ಜನಾಂಗೀಯ ಹತ್ಯೆಗೆ ಸಂಬಂಧಿಸಿದ ಎಚ್ ಎ ಎಫ್ ತನ್ನ ವೆಬ್ ಪೇಜ್ ನನ್ನು ತೆಗೆದುಹಾಕಬೇಕೆಂದು ಪಿಟಿಎ ಒತ್ತಾಯಿಸಿರುವುದಾಗಿ ತಿಳಿಸಿದೆ.
ವಾಷಿಂಗ್ಟನ್ ಮೂಲದ ಹಿಂದೂ ಸಂಸ್ಥೆ ಇತ್ತೀಚೆಗೆ ಬಂಗಾಳಿ ಹಿಂದೂ ಜನಾಂಗೀಯ ಹತ್ಯೆ ಸ್ಮರಣಾರ್ಥ ‘ರಿಮೆಂಬರಿಂಗ್ ದಿ ಲಾಸ್ಟ್, ಸೆಲೆಬ್ರೇಟಿಂಗ್ ಸರ್ವೈವಲ್ವೆಬ್‌ಸೈಟ್ ಅನ್ನು ಪ್ರಾರಂಭಿಸಿತ್ತು.
ಇದನ್ನೂ ಓದಿ : ಅಧಿಕಾರಿಗಳನ್ನು ಟ್ರಾನ್ಸಫರ್ ಮಾಡುವುದೇ ತಾಕತ್ತಾದರೆ, ಆ ತಾಕತ್ತು ನನಗೆ ಬೇಡ: ಪ್ರತಾಪ್ ಸಿಂಹ
1971 ರಲ್ಲಿ ಪಾಕಿಸ್ತಾನದ ಪಡೆಗಳು ಅಂದಿನ ಪೂರ್ವ ಪಾಕಿಸ್ತಾನದಲ್ಲಿ ದೌರ್ಜನ್ಯ ಎಸಗಿದ್ದು ಅಂತರರಾಷ್ಟ್ರೀಯ ಮಾನವೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು. ಪಾಕಿಸ್ತಾನದ ಸೈನ್ಯದ ಕ್ರಮಗಳಿಂದ ಮಿಲಿಯನ್ ನಷ್ಟು ಜನರು ಹತ್ಯೆಗೀಡಾದರು. ಅಂತಿಮವಾಗಿ ಬಾಂಗ್ಲಾದೇಶವು ತನ್ನ ಸ್ವಾತಂತ್ರ್ಯವನ್ನು ಗಳಿಸಿತ್ತು.
ಇನ್ನು, ಹಿಂದೂ ಸಂಸ್ಥೆಗೆ ಬೆದರಿಕೆ ಹಾಕಿದ ಇಮ್ರಾನ್ ಖಾನ್ ಸರ್ಕಾರವು ಪಾಕಿಸ್ತಾನದಲ್ಲಿ ಎಚ್ ಎ ಎಫ್ ನ ಬಂಗಾಳಿ ಹಿಂದೂ ಜನಾಂಗೀಯ ವೆಬ್ ಪೇಜ್ ನನ್ನು “ತೆಗೆದುಹಾಕಲಾಗುತ್ತದೆ” ಎಂದು ಪತ್ರದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
“ನಿಮ್ಮ ವೆಬ್ ಸೈಟ್ ವಿಷಯವನ್ನು ಪ್ರಚೋಧಿಸುವ ಉದ್ದೇಶವನ್ನು ಹೊಂದಿದೆ. ರಾಜ್ಯ ವಿರೋಧಿ ಭಾವನೆಗಳನ್ನು ಪ್ರಚೋದಿಸಲು, ಜನಸಾಮಾನ್ಯರಲ್ಲಿ ದ್ವೇಷದ ಭಾವನೆಗಳು ಹುಟ್ಟುವಂತೆ ಕಾರ್ಯ ನಿರ್ವಹಿಸುತ್ತಿದೆ. ಹಾಗೂ ನಿಮ್ಮ ವೆಬ್ ಸೈಟ್ ಸಮಗ್ರತೆ, ಸಾರ್ವಭೌಮತ್ವಕ್ಕೆ ವಿರೋಧವಾಗಿದೆ. ಪೂರ್ವಾಗ್ರಹ ಪೀಡಿತವಾಗಿದೆ ಎಂದು ಪಾಕಿಸ್ತಾನ ಸರ್ಕಾರದ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ ಪತ್ರದ ಮೂಲಕ ಬೆದರಿಕೆ ಹಾಕಿರುವುದಾಗಿ ಎಚ್ ಎ ಎಫ್ ತಿಳಿಸಿದೆ.
ICYMI: This is the website, commemorating the 1971 Bengal Hindu genocide, that so offended the Govt. of Pakistan that they blocked the@HinduAmerican website and threatened to fine HAF.https://t.co/N1gkUUO3bD
— Hindu American Foundation (@HinduAmerican) May 27, 2021
ಪಾಕಿಸ್ತಾನದ ಇಸ್ಲಾಮಿಕ್ ಧೊರಣೆ ಸಾಬೀತಾಗಿದೆ ..!
ಈ ಬಗ್ಗೆ ಪ್ರತಿಕ್ರಿಯಿಸಿದ ಎಚ್ ಎ ಎಫ್ ನ ಮಾನವ ಸಂಪನ್ಮೂಲ ಅಧಿಕಾರಿ ದೀಪಾಲಿ ಕುಲಕರ್ಣಿ, ಪಾಕಿಸ್ತಾನದ ಇಸ್ಲಾಮಿಕ್ ಧೋರಣೆ ಜಗಜ್ಜಾಹೀರಾಗಿದೆ. ಪಾಕಿಸ್ತಾನದ ಹಿಂದೂಗಳು, ಕ್ರಿಶ್ಚಿಯನ್ನರು, ಅಹ್ಮದಿಯಾ ಮುಸ್ಲಿಂ ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರನ್ನು ಹತ್ಯೆ ಮಾಡುವುದು, ಬಲವಂತವಾಗಿ ಮತಾಂತರಗೊಳಿಸುವುದು ಮತ್ತು ಅಲ್ಲಿಂದ ಒಕ್ಕಲೆಬ್ಬಿಸುವ ವಿಚಾರ ಸಾಬೀತಾಗಿದೆ ಎಂದು ಹೇಳಿದ್ದಾರೆ.
ಇನ್ನು, “1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ನಡೆದ ನರಮೇಧಕ್ಕೆ ಪಾಕಿಸ್ತಾನದಿಂದ ಅಧಿಕೃತವಾಗಿ ಕ್ಷಮೆಯಾಚನೆ ಕೇಳುವಂತೆ ಮತ್ತು ಪಾಕಿಸ್ತಾನದೊಂದಿಗೆ ಬಾಕಿ ಇರುವ ದ್ವಿಪಕ್ಷೀಯ ಸಮಸ್ಯೆಗಳನ್ನು ಪರಿಹರಿಸುವಂತೆ ಬಾಂಗ್ಲಾದೇಶ ತನ್ನ 50 ವರ್ಷದ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿರುವ ಪಾಕಿಸ್ತಾನದ ರಾಯಭಾರಿ ಇಮ್ರಾನ್ ಅಹ್ಮದ್ ಸಿದ್ದಿಕಿ ಅವರಿಗೆ ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ಮೂಲಕ ತಿಳಿಸಲಾಗಿತ್ತು.
ಇದನ್ನೂ ಓದಿ : ಕೇಂದ್ರದ 20 ಲಕ್ಷ ಕೋಟಿ ಪ್ಯಾಕೇಜ್ ಎಲ್ಲಿ ಹೋಯ್ತು : ಬಿಜೆಪಿ ವಿರುದ್ಧ ಕೈ ನಾಯಕರ ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.