![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, May 12, 2023, 7:05 AM IST
ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಬಂಧಿ ಸಿದ್ದೇ ಅಕ್ರಮ. ಹೀಗಾಗಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪಾಕಿಸ್ಥಾನ ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ. ಇದರ ಜತೆಗೆ ತತ್‌ಕ್ಷಣವೇ ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಅವರ ವಿರುದ್ಧ ನಡೆಯುತ್ತಿರುವ ಪ್ರಕರಣಗಳ ವಿಚಾರಣೆ ಎದುರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಉಮರ್ ಅತ ಬಂದಿಯಾಲ್ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.
ಅಲ್ ಖಾದಿರ್ ಟ್ರಸ್ಟ್ ಅಕ್ರಮದಲ್ಲಿ ಬಂಧಿತರಾಗಿದ್ದ ಮಾಜಿ ಪ್ರಧಾನಿ ಇಮ್ರಾನ್ ಅವರನ್ನು ತತ್‌ಕ್ಷಣವೇ ತನ್ನ ಎದುರು ಹಾಜರುಪಡಿಸಬೇಕು ಎಂದು ನ್ಯಾಯಪೀಠ ಸರಕಾರಕ್ಕೆ ಆದೇಶ ನೀಡಿತ್ತು. ಅದರ ಅನ್ವಯ ಪಾಕ್ ಸರಕಾರ ತಡಬಡಾಯಿಸಿಕೊಂಡು ಅವರನ್ನು ಕೋರ್ಟ್ ಗೆ ಹಾಜರುಪಡಿಸಿತು. ಬಿಗಿ ಬಂದೋಬಸ್ತ್ನಲ್ಲಿ ಅವರನ್ನು ಕೋರ್ಟ್ ಹಾಲ್‌ಗೆ ಕರೆದುಕೊಂಡು ಬಂದ ತತ್‌ಕ್ಷಣ ಬಾಗಿಲು ಮುಚ್ಚಿ ವಿಚಾರಣೆ ನಡೆಸಲಾಯಿತು. ಖಾನ್ ಬಿಡುಗಡೆ ಆದೇಶ ಪ್ರಕಟವಾಗುತ್ತಿದ್ದಂತೆಯೇ ದೇಶಾದ್ಯಂತ ಅವರ ಪಕ್ಷದ ಕಾರ್ಯಕರ್ತರು ಸಂಭ್ರ ಮಾಚರಣೆ ನಡೆಸಿದ್ದಾರೆ. ಇದರಿಂದಾಗಿ ಪಾಕ್ ಸರಕಾರಕ್ಕೆ ಭಾರೀ ಮುಖಭಂಗವೂ ಆಗಿದೆ.
ಮುಂದುವರಿದ ಉದ್ವಿಗ್ನತೆ: ಇದೇ ವೇಳೆ, ಖಾನ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಗುರುವಾರ ಕೂಡ ಪಾಕಿಸ್ಥಾನದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಪಾಕಿಸ್ಥಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ನಾಯಕ ಮತ್ತು ವಿದೇಶಾಂಗ ಖಾತೆ ಮಾಜಿ ಸಚಿವ ಶಾ ಮೆಹ ಮೂದ್ ಖುರೇಷಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪಕ್ಷದ ಟ್ವಿಟರ್ ಖಾತೆಯಲ್ಲಿ ವೀಡಿಯೋ ಅಪ್‌ಲೋಡ್ ಮಾಡಲಾಗಿದೆ.
ಇಮ್ರಾನ್ ಅವರ ಪಕ್ಷದ ಪ್ರಮುಖರಾಗಿರುವ ಅಸಾದ್ ಉಮರ್, ಫವಾದ್ ಚೌಧರಿ, ಜಮ್ಶೆಡ್ ಇಕ್ಬಾಲ್ ಚೀಮಾ ಸಹಿತ ಪ್ರಮುಖರನ್ನು ಈಗಾಗಲೇ ಬಂಧಿಸಲಾಗಿದೆ. ಅದಕ್ಕೆ ಮಾಜಿ ಸಚಿವ ಶಾ ಮೆಹಮೂದ್ ಖುರೇಷಿ ಸೇರ್ಪಡೆಯಾಗಿದ್ದಾರೆ. ಖುರೇಷಿ ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.
ನಿಲ್ಲದ ಹಿಂಸೆ: ಪಂಜಾಬ್, ಖೈಬರ್ ಪಖು¤ಂಖ್ವಾ ಪ್ರಾಂತ ಮತ್ತು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ, ಲಾಹೋರ್ ಹಾಗೂ ಪೇಶಾವರಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಅಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ಇನ್ನಿಲ್ಲದಂತೆ ದಾಂಧಲೆ ಎಬ್ಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪ್ರಬಲ ಸೇನೆ ನಿಯೋಜಿಸಲಾಗಿದೆ.
ಎಲ್ಲೆಲ್ಲೂ ಸೇನೆ: ಪಾಕಿಸ್ಥಾನದಾದ್ಯಂತ ಈಗ ಸೈನಿಕರ ಬೂಟುಗಾಲುಗಳ ಸಪ್ಪಳ ಮತ್ತು ಮಿಲಿಟರಿಗೆ ಸೇರಿದ ವಾಹನಗಳ ಸಂಚಾರದ ಸದ್ದು ಕೇಳುತ್ತಿದೆ. ಟ್ವಿಟರ್‌ನಲ್ಲಿ ಸೇನೆ ಇರುವ ಪ್ರದೇಶಗಳು, ಗಲಭೆ ಉಂಟಾಗಿ ಕಟ್ಟಡಗಳು, ವಾಹನಗಳು ಹೊತ್ತಿ ಉರಿಯುತ್ತಿರುವ ಫೋಟೋ, ವೀಡಿಯೋಗಳನ್ನು ಅಪ್‌ಲೋಡ್ ಮಾಡಲಾಗಿದೆ.
ಕಠಿನ ಕ್ರಮ ನಿಶ್ಚಿತ
ಬುಧವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಶೆಹಬಾಜ್ ಶರೀಫ್ ಅವರು ದೊಂಬಿ ಸಹಿತ ಕಿಡಿಗೇಡಿತನದ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಪಿಟಿಐ ಪಕ್ಷದ ಕಾರ್ಯಕರ್ತರು ತತ್‌ಕ್ಷಣವೇ ದೇಶ ವಿರೋಧಿ ಕೃತ್ಯಗಳನ್ನು ಬದಿಗಿಟ್ಟು ಕಾನೂನು ಮತ್ತು ಸುವ್ಯವಸ್ಥೆ ಪಾಲಿಸಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಪ್ಪು ಚುಕ್ಕೆ: ಸೇನೆ
ಪಾಕಿಸ್ಥಾನ ಸೇನೆಯು ಮೇ 9ರ ಘಟನೆಯನ್ನು “ದೇಶದ ಇತಿಹಾಸದಲ್ಲಿಯೇ ಒಂದು ಕಪ್ಪು ಚುಕ್ಕೆR’ ಎಂದು ಬಣ್ಣಿಸಿದೆ. ಆ ದೇಶದ ಸೇನೆಯ ಇಂಟರ್ ಸರ್ವಿಸಸ್ ಪಬ್ಲಿಕ್ ರಿಲೇಶನ್ಸ್ ಮಾಧ್ಯಮ ಹೇಳಿಕೆಯಲ್ಲಿ “ಪ್ರತಿಭಟನಕಾರರು ಸೇನೆಯ ಆಸ್ತಿಯನ್ನು ಗುರುತು ಮಾಡಿ ದಾಳಿ ನಡೆಸಿದ್ದಾರೆ. ಅವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆ. ಮೇ 9 ದೇಶದ ಇತಿಹಾಸದಲ್ಲಿ ಕಪ್ಪು ಚುಕ್ಕೆ’ ಎಂದು ಬಣ್ಣಿಸಿದೆ.
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.