ಆಟ ಮುಗಿಸಲೊಪ್ಪದ ಇಮ್ರಾನ್‌ ಖಾನ್‌; ಪಾಕ್‌ ಪ್ರಧಾನಿ ಭವಿಷ್ಯ ಡೋಲಾಯ ಮಾನ


Team Udayavani, Apr 10, 2022, 7:00 AM IST

ಆಟ ಮುಗಿಸಲೊಪ್ಪದ ಇಮ್ರಾನ್‌ ಖಾನ್‌; ಪಾಕ್‌ ಪ್ರಧಾನಿ ಭವಿಷ್ಯ ಡೋಲಾಯ ಮಾನ

ಇಸ್ಲಾಮಾಬಾದ್‌: ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಪಾಕ್‌ ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತುಪಡಿಸುವ ಅನಿವಾರ್ಯಕ್ಕೆ ಸಿಲುಕಿದ್ದ ಪ್ರಧಾನಿ ಇಮ್ರಾನ್‌ ಖಾನ್‌ ಶನಿವಾರ ಇಡೀ ದಿನ ಸಂಸತ್ತಿನ ಕಣ್ತಪ್ಪಿಸಿದರು, ರಾತ್ರಿಯ ವರೆಗೂ ಕಣ್ಣಾಮುಚ್ಚಾಲೆ ಆಟ ಆಡಿದರು.

ಇಮ್ರಾನ್‌ “ಆಟ’ಕ್ಕೆ ಸಾಥ್‌ ನೀಡಿದ ಪಾಕ್‌ ಸಂಸತ್ತಿನ ಸ್ಪೀಕರ್‌ ಅಸಾದ್‌ ಖೈಸರ್‌ ಕೂಡ ಬೆಳಗ್ಗೆಯಿಂದ ಮಧ್ಯರಾತ್ರಿಯ ವರೆಗೂ ಒಂದೊಂದೇ ನೆಪ ಹೇಳುತ್ತ ಕಲಾಪವನ್ನು ಮುಂದೂಡುತ್ತಾ ಸಾಗಿದರು. ಹೀಗಾಗಿ ರಾತ್ರಿ 11ರ ವರೆಗೂ ಇಮ್ರಾನ್‌ ಖಾನ್‌ ವಿರುದ್ಧದ ಅವಿಶ್ವಾಸ ಗೊತ್ತುವಳಿ ಸಂಬಂಧ ಮತದಾನ ನಡೆಯಲೇ ಇಲ್ಲ.
ಕಲಾಪ ಆರಂಭವಾದಾಗಿನಿಂದಲೂ ವಿಪಕ್ಷಗಳ ನಾಯಕರು, ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಕೂಡಲೇ ಅವಿಶ್ವಾಸ ಗೊತ್ತುವಳಿ ಪರ ಮತದಾನ ನಡೆಸಿ ಎಂದು ಸ್ಪೀಕರ್‌ ಖೈಸರ್‌ ಅವರನ್ನು ಒತ್ತಾಯಿಸತೊಡಗಿದರು.

ವಿಪಕ್ಷ ನಾಯಕ ಶೆಹಬಾಜ್‌ ಷರೀಫ್ ಅವರು ಸಂಸತ್‌ನಲ್ಲಿ ಮಾತನಾಡುತ್ತಿದ್ದಂತೆ ಆಡಳಿತಾರೂಢ ಪಕ್ಷದ ಸಂಸದರು ಗದ್ದಲವೆಬ್ಬಿಸಿದರು ಎಂಬ ನೆಪ ಹೇಳಿ ಸ್ಪೀಕರ್‌ ಕಲಾಪವನ್ನು ಮುಂದೂಡಿದರು. ಅನಂತರ ಸದನ ಸಮಾವೇಶಗೊಂಡಾಗ ರಮ್ಜಾನ್‌ ಇರುವ ಕಾರಣ ಇಫ್ತಾರ್‌ ಬಳಿಕ ಮತದಾನ ನಡೆಸುತ್ತೇನೆ ಎಂದು ಭರವಸೆ ನೀಡಿ ಮತ್ತೆ ಕಲಾಪವನ್ನು ಮುಂದೆ ಹಾಕಿದರು. ಇಷ್ಟೆಲ್ಲ ಆಗುತ್ತಿದ್ದರೂ ಇಮ್ರಾನ್‌ ಖಾನ್‌ ಮಾತ್ರ ಸದನದಲ್ಲಿ ಉಪಸ್ಥಿತರಿರಲಿಲ್ಲ. ಆದರೆ ಈ ಬೆಳವಣಿಗೆಗಳ ನಡುವೆಯೇ ಅವರು ರಾತ್ರಿ 9ಕ್ಕೆ ಸಂಪುಟ ಸಭೆ ಕರೆದರು.

ಇಫ್ತಾರ್‌ ಮುಗಿಯುತ್ತಿದ್ದಂತೆ ಮತದಾನ ಆರಂಭವಾಗುತ್ತದೆ ಎಂದು ನಂಬಿದ್ದ ವಿಪಕ್ಷಗಳಿಗೆ ಮತ್ತೆ ನಿರಾಶೆಯಾಯಿತು. ಸ್ಪೀಕರ್‌ ಮತ್ತೆ ಕಲಾಪವನ್ನು ಮುಂದೂಡಿದರು. ಹೀಗಾಗಿ ರಾತ್ರಿಯಿಡೀ ಪಾಕ್‌ ಸಂಸತ್ತಿನಲ್ಲಿ ಹೈಡ್ರಾಮಾ ಸೃಷ್ಟಿಯಾಗುವ ಲಕ್ಷಣ ಗೋಚರಿಸಿತು.

ಸಂಸತ್ತಿನ ಕಲಾಪ ನಡೆಯುತ್ತಿರುವಂತೆಯೇ ರಾತ್ರಿ 9ಕ್ಕೆ ಸಂಪುಟ ಸಭೆ ಕರೆದ ಇಮ್ರಾನ್‌ ಖಾನ್‌ ನಡೆಯನ್ನು ವಿಪಕ್ಷ ನಾಯಕ ಬಿಲಾವಲ್‌ ಭುಟ್ಟೋ ಜರ್ದಾರಿ ಖಂಡಿಸಿದ್ದಾರೆ.

ಇದನ್ನೂ ಓದಿ:ಲಷ್ಕರ್ ಕಮಾಂಡರ್ ಬಲಿ: ಜನವರಿಯಿಂದ ಕಾಶ್ಮೀರದಲ್ಲಿ ಹತ್ಯೆಯಾದ ಉಗ್ರರೆಷ್ಟು?

ಇತಿಹಾಸ ನಿಮ್ಮನ್ನು ಕ್ಷಮಿಸದು
“ಇಮ್ರಾನ್‌ ಖಾನ್‌ ಮತ್ತು ತಂಡ ನ್ಯಾಯಾಂಗ ನಿಂದನೆಗೆ ಮುಂದಾಗಿರುವುದು ಸ್ಪಷ್ಟವಾಗುತ್ತಿದೆ. ಇತಿಹಾಸ ಯಾವತ್ತೂ ಅವರನ್ನು ಸಂವಿಧಾನವನ್ನು ಉಲ್ಲಂ ಸಿದ ವಂಚಕರು ಎಂದೇ ಸ್ಮರಿಸಿಕೊಳ್ಳಲಿದೆ. ಅವರ ಅಹಂಕಾರವು ದೇಶಕ್ಕಿಂತ ದೊಡ್ಡದೇ’ ಎಂದು ವಿಪಕ್ಷ ನಾಯಕ ಶೆಹಬಾಜ್‌ ಷರೀಫ್ ಪ್ರಶ್ನಿಸಿದ್ದಾರೆ. ರಾಜಕೀಯ ಅನಿಶ್ಚಿತತೆ ಮುಂದುವರಿದಿರುವಂತೆಯೇ ರವಿವಾರ ಎಲ್ಲರೂ ಶಾಂತಿಯುತ ಪ್ರತಿಭಟನೆ ನಡೆಸುವಂತೆ ದೇಶವಾಸಿಗಳಿಗೆ ಇಮ್ರಾನ್‌ ಕರೆ ನೀಡಿದ್ದಾರೆ.

ಪಂದ್ಯದಲ್ಲಿ ಸೋಲುತ್ತೇನೆಂಬ ಭಯದಿಂದ ವಿಕೆಟ್‌ನೊಂದಿಗೆ ಪಿಚ್‌ ನಿಂದಲೇ ಓಡಿ ಹೋದ ಮೊದಲ ಕ್ಯಾಪ್ಟನ್‌ ಇಮ್ರಾನ್‌ ಖಾನ್‌. ಅಧಿಕಾರ ಕಳೆದುಕೊಳ್ಳುವ ಮುನ್ನ ಸ್ವಲ್ಪವಾದರೂ ಕ್ರೀಡಾ ಸ್ಫೂರ್ತಿ ಪ್ರದರ್ಶಿಸಿ.
– ಬಿಲಾವಲ್‌ ಭುಟ್ಟೋ, ಪಿಪಿಪಿ ಮುಖ್ಯಸ್ಥ

 

ಟಾಪ್ ನ್ಯೂಸ್

Supreme Court

Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್‌

Yogi (2)

Maha Kumbh; ಜಾಗ ಕೇಳಿದರೆ ಹುಷಾರ್‌: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

canada

Canada;ನಮ್ಮವರು ಅಮೆರಿಕ ಪ್ರಜೆಗಳಲ್ಲ: ಪ್ರಧಾನಿ ಟ್ರೂಡೋ

musk

Elon Musk ಮಾನಸಿಕ ಸ್ಥಿತಿ ಸರಿಯಿಲ್ಲ: ಲೇಖಕ ಅಬ್ರಾಮ್‌ಸನ್‌

“ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California Wildfire: “ಮನೆಯ ಅಂಗಳದಲ್ಲೇ ಬೆಂಕಿ ಕುಣಿದಂತಿದೆ’

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Supreme Court

Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್‌

Yogi (2)

Maha Kumbh; ಜಾಗ ಕೇಳಿದರೆ ಹುಷಾರ್‌: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.