ಬಾಲಿವುಡ್ ನನ್ನು ಅನುಕರಣೆ ಮಾಡುವುದು ಬಿಡಿ: ಪಾಕ್ ನ ಯುವ ಸಿನೆಮೋದ್ಯಮಿಗಳಿಗೆ ಖಾನ್ ಕಿವಿಮಾತು
Team Udayavani, Jun 27, 2021, 8:24 PM IST
ಇಸ್ಲಾಮಾಬಾದ್ : ಸ್ವಂತ ಕಥೆಗಳನ್ನು ಸಿನೆಮಾಗಳಾಗಿ ಮಾಡುವುದಕ್ಕೆ ಲಪ್ರಯತ್ನ ಮಾಡಿ. ಬಾಲಿವುಡ್ ಸಿನೆಮಾಗಳನ್ನು ಅನುಕರಣೆ ಮಾಡಲು ಹೋಗಬೇಡಿ. ಹೊಸ ಹೊಸ ಪ್ರಯತ್ನಗಳು ಆಗಲಿ ಎಂದು ದೇಶದ ಸಿನೆಮೋದ್ಯಮಿಗಳಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಿವಿಮಾತು ಹೇಳಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ನಡೆದ ಕಿರುಚಿತ್ರಗಳ ಉತ್ಸವವನ್ನು ಉದ್ದೇಶಿಸಿ ಮಾತನಾಡಿದ ಖಾನ್, ಪಾಕಿಸ್ತಾನದ ಚಲನಚಿತ್ರೋದ್ಯಮವು ಬಾಲಿವುಡ್ ನಿಂದ ಪ್ರಭಾವಿತವಾದ ಕಾರಣ, ಆರಂಭದಲ್ಲಿ ತಪ್ಪುಗಳು ನಡೆದಿವೆ, ಇದರಿಂದಾಗಿ ಮತ್ತೊಂದು ಸಿನೆಮಾ ನಿರ್ಮಾಣದ ಸಂಸ್ಕೃತಿಯನ್ನು ನಕಲಿಸಲು ಮತ್ತು ಅಳವಡಿಸಿಕೊಳ್ಳುವಂತಾಯಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಒಲಿಂಪಿಕ್ಸ್: ಭಾರತ ಸೇರಿ ಇತರ 5 ದೇಶಗಳ ಕ್ರೀಡಾಳುಗಳಿಗೆ ಹೆಚ್ಚಿನ ಕೋವಿಡ್ ಟೆಸ್ಟ್
ನನ್ನ ದೇಶದ ಯುವ ನಿನೆಮೋದ್ಯಮಿಗಳಿಗೆ ನಾನು ಹೇಳುವುದೇನೆಂದರೇ, ನಾವು ಬಾಲಿವುಡ್ ಶೈಲಿಯನ್ನು ಅನುಕರಣೆ ಮಾಡುವ ಅಗತ್ಯವಿಲ್ಲ. ಹೊಸ ಪ್ರಯತ್ನಗಳು ನಮ್ಮಿಂದಾಗಲಿ. ಪಾಕಿಸ್ತಾನ ಸಿನೆಮಾ ಶೈಲಿ ಒಂದು ನಿರ್ಮಾಣವಾಗಲಿ. ನಕಲು ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಅದು ನಮ್ಮ ಪ್ರಯತ್ನವೂ ಆಗುವುದಿಲ್ಲ ಎಂದು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.
ಸ್ವಂತಿಕೆಗೆ ಪ್ರಾಮುಖ್ಯತೆಯನ್ನು ನೀಡಿದಾಗ ನಮ್ಮಲ್ಲಿ ಹೊಸ ಆಲೋಚನೆಗಳು, ಯೋಜನೆಗಳು ಹುಟ್ಟಿಕೊಳ್ಳುತ್ತವೆ. ಪಾಕಿಸ್ತಾನದ ಸಿನೆಮೋದ್ಯಮ ಹೊಸ ಆಯಾಮವನ್ನು ಕಂಡುಕೊಳ್ಳುತ್ತದೆ. ಸ್ವಂತಿಕೆ ಇಲ್ಲದ ಕಥೆಗಳನ್ನು ನೀವು ಸಾವಿರ ಮಾಡಿದರೂ ಜನ ಅದನ್ನು ಒಪ್ಪುವುದಿಲ್ಲ.
ಇನ್ನು, ಪಾಕಿಸ್ತಾನವನ್ನು ಬಿಂಬಿಸುವ ಚಿತ್ರಗಳು ಹೆಚ್ಚು ಹೆಚ್ಚು ನಿರ್ಮಾಣವಾಗಬೇಕು. ಪಾಕಿಸ್ತಾನವನ್ನು ಇತರೆ ಚಿತ್ರೋದ್ಯಮಗಳಲ್ಲಿ ತೀರಾ ಕೆಟ್ಟದಾಗಿ ಬಿಂಬಿಸಲಾಗಿದೆ. ಪಾಕಿಸ್ತಾನದ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು ಬರಬೇಕು. ತಮ್ಮನ್ನು ಗೌರವಿಸಿಕೊಳ್ಳುವುದನ್ನು ಜಗತ್ತು ಗೌರವಿಸುತ್ತದೆ. ಬಾಲಿವುಡ್ ನನ್ನು ಅನುಕರಣೆ ಮಾಡುವ ಪದ್ಧತಿಯನ್ನು ನಾವು ನಿಲ್ಲಿಸಬೇಕು. ಸ್ವಂತಿಕೆಗೆ ಹೆಚ್ಚು ಆದ್ಯತೆ ನೀಡಬೇಕು ಅವರು ಹೇಳಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ : Mumbaiನ ಸ್ಥಳೀಯರು ಒಗ್ಗಟ್ಟಿನಲ್ಲಿ ‘ಬಲ’ವಿದೆ ಎಂದು ತೋರಿಸಿದ್ದಾರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.