![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 25, 2021, 11:31 AM IST
ವಾಷಿಂಗ್ಟನ್ : ಶಿಶುವೈದ್ಯೆ ರೆಚೆಲ್ ಲೆವಿನ್ ಅವರನ್ನು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಅವರ ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡಿದೆ. ಈ ಮೂಲಕ ತೃತೀಯ ಲಿಂಗಿಯೋರ್ವರನ್ನು ಅಮೇರಿಕಾದ ಸೆನೆಟ್ ನ ಉನ್ನತ ಹುದ್ದೆಗೆ ಆಯ್ಕೆ ಮಾಡಿಕೊಳ್ಳುವುದರ ಮೂಲಕ ಐತಿಹಾಸಿಕ ಹೆಜ್ಜೆಯಿಟ್ಟಿದೆ.
ಜನವರಿಯಲ್ಲಿ ಜೋ ಬೈಡನ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವಾಗ ಲೆವಿನ್, ಪೆನ್ಸಿಲ್ವೇನಿಯಾದ ಆರೋಗ್ಯ ಕೇಂದ್ರವನ್ನು ಮುನ್ನಡೆಸುತ್ತಿದ್ದರು. ಈಗ ಅಧ್ಯಕ್ಷರ ಆರೋಗ್ಯ ಸಹಾಯಕ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ಅಮೆರಿಕಾದ ಸೆನೆಟ್ ನಲ್ಲಿ ಉನ್ನತ ಹುದ್ದೆಗೇರಿದ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಲೆವಿನ್ ಪಾತ್ರವಾಗಿದ್ದಾರೆ.
ಓದಿ : ನಿವೃತ್ತ ಯೋಧ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್.ಎಲ್ ಡಯಾಸ್ ನಿಧನ
ಈ ಆಯ್ಕೆ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಅವರ ನೀತಿಗೆ ವಿರುದ್ಧವಾಗಿತ್ತು. ಮತ್ತು ಈ ವಿಚಾರ ತಾರತಮ್ಯದ ಧೋರಣೆ ಎಂದು ಪರಿಗಣಿಸಲ್ಪಟ್ಟಿತ್ತು. ಆದರೇ, ಈಗ ನೂತನ ಅಧ್ಯಕ್ಷ ಜೋ ಬೈಡನ್ ತೃತೀಯ ಲಿಂಗಿಯೋರ್ವರನ್ನು ಉನ್ನತ ಹುದ್ದೆಗೆ ನೇಮಿಸಿಕೊಳ್ಳುವುದರ ಮೂಲಕ ಆ ಅಭಿಪ್ರಾಯವನ್ನು ತೆಗೆದು ಹಾಕಿದ್ದಾರೆ.
ಹೆಲ್ತ್ ಆ್ಯಂಡ್ ಹ್ಯೂಮನ್ ಸರ್ವಿಸ್ ಡಿಪಾರ್ಟ್ ಮೆಂಟ್ ನ ಸಹಾಯಕ ಕಾರ್ದರ್ಶಿಯಾಗಿ ನೇಮಕಗೊಂಡಿರುವ 63 ವರ್ಷದ ಲೆವಿನ್, ಸದ್ಯಕ್ಕೆ ಅಮೆರಿಕಾದ ಕೋವಿಡ್ 19 ಸೊಂಕಿನ ವಿರುದ್ಧ ಕಾರ್ಯಾಚರಣೆಯನ್ನು ಮಾಡುತ್ತಿರುವ ತಂಡದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.
ಡಾ. ಲೆವಿನ್ ಪೆನ್ ಸ್ಟೇಟ್ ಕಾಲೇಜ್ ಆಫ್ ಮೆಡಿಸಿನ್ ನಲ್ಲಿ ಶೀಶುವೈದ್ಯೆ ಮತ್ತು ಮನೋವೈದ್ಯ ಶಾಸ್ತ್ರದ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ಆಯ್ಕೆಯ ಬಗ್ಗೆ ಬೆಂಬಲ ಸೂಚಿಸಿರುವ ಶ್ವೇತಭವನದ ವಕ್ತಾರ ಮ್ಯಾಟ್ ಹಿಲ್, ಅಮೆರಿಕಾದ ಸೆನೆಟ್ ನ ಉನ್ನತ ಹುದ್ದೆಗೆ ಆಯ್ಕೆಗೊಂಡ ಮೊದಲ ಅಮೆರಿಕಾದ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಡಾ. ಲೆವಿನ್ ಪಾತ್ರರಾಗಿದ್ದಾರೆ. ಇದು ಶ್ವೇತಭವನದ ಐತಿಹಾಸಿಕ ಕ್ಷಣ ಎಂದು ಅವರು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಓದಿ : ದೇಶದಲ್ಲಿ ಕಳೆದ 24ಗಂಟೆಗಳಲ್ಲಿ 53,476 ಕೋವಿಡ್ ಪ್ರಕರಣ ಪತ್ತೆ, 5 ತಿಂಗಳಲ್ಲಿ ಗರಿಷ್ಠ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.