![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 7, 2019, 7:07 PM IST
ಅಪ್ರಾಪ್ತ ವಯಸ್ಸಿನವರಿಗೆ ವೀಡಿಯೋ ಗೇಮ್ ಆಡಲು ನಿರ್ದಿಷ್ಟ ಸಮಯ ನಿಗದಿ ಪಡಿಸಿ ಚೀನ ಸರಕಾರ ಆದೇಶ ಹೊರಡಿಸಿದೆ. ಆನ್‌ಲೈನ್ ವೀಡಿಯೋ ಗೇಮ್ ದಾಸರಾಗಿರುವುದರಿಂದ 18 ವರ್ಷದೊಳಗಿನ ಮಕ್ಕಳಲ್ಲಿ ವಿವಿಧ ಸಮಸ್ಯೆಗಳು, ದೃಷ್ಟಿಹೀನತೆ, ಮಾನಸಿಕ ಸಮಸ್ಯೆಗಳು ಕಾಡುತ್ತಿದ್ದು, ಈ ಚಟವನ್ನು ದೂರ ಮಾಡಲು ಅಲ್ಲಿನ ಸರಕಾರ ಮುಂದಾಗಿದೆ.
ವಿಶ್ವದ ಅತಿದೊಡ್ಡ ಆನ್‌ಲೈನ್ ಗೇಮಿಂಗ್ ಮಾರುಕಟ್ಟೆಯಾಗಿರುವ ಚೀನಾದಲ್ಲಿ ಆನ್‌ಲೈನ್ ಗೇಮಿಂಗ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಅತೀ ಹೆಚ್ಚು ಮಕ್ಕಳು ವಿಡೀಯೋ ಗೇಮ್ ಗೀಳಿಗೆ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತು ಕೊಂಡಿರುವ ಚೀನ ಸರಕಾರ ಗೇಮ್ ಆಡುವುದರ ಮೇಲೆ ನಿರ್ಬಂಧ ಹೇರಲು ತೀರ್ಮಾನಿಸಿದೆ.
ದಿನದಲ್ಲಿ 90 ನಿಮಿಷ ಮಿತ್ರ
ಹೆಚ್ಚಿನ ಯುವಕರು ದಿನದ ಹೆಚ್ಚು ಸಮಯವನ್ನು ಮೊಬೈಲ್ ಫೋನ್ ಅಲ್ಲಿಯೇ ಕಳೆಯುತ್ತಿದ್ದಾರೆ. ಈ ಹಿನ್ನಲೆ ದಿನದಲ್ಲಿ 18 ವರ್ಷದ ಒಳಗಿನವರು ಕೇವಲ 90 ನಿಮಿಷ ಮಾತ್ರ ವಿಡೀಯೋ ಗೇಮಿಂಗ್ ಆಡಲು ಅನುಮತಿಸಿರುವ ಸರಕಾರ ರಾತ್ರಿ 10 ಗಂಟೆಯ ನಂತರ ಮೊಬೈಲ್ ಬಳಕೆಯನ್ನು ನಿಷೇಧಿಸಿದ್ದು, ರಜಾದ ದಿನಗಳಲ್ಲಿ 3 ಗಂಟೆಗಳ ಕಾಲ ಮಾತ್ರ ಆನ್‌ಲೈನ್ ಗೇಮಿಂಗ್‌ಗೆ ಅವಕಾಶ ನೀಡಿದೆ.
ಶೈಕ್ಷಣಿಕ ಚಟುವಟಿಕೆಯಲ್ಲಿ ಹಿಂದೆ
ದಿನದ 24 ಗಂಟೆ ಮೊಬೈಲ್‌ಗೆ ಅಂಟಿಕೊಂಡಿರುವ ಪರಿಣಾಮ ಮಕ್ಕಳು ಓದಿನಲ್ಲಿ ಹಿಂದೆ ಬೀಳುತ್ತಿದ್ದು, ಶೈಕ್ಷಣಿಕ ಚಟುವಟಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಹಿನ್ನಲೆ ಕಟ್ಟುನಿಟ್ಟಿನ ಕ್ರಮ ಕೈ ಗೊಂಡ ಚೀನ ಸರಕಾರ 18 ವರ್ಷ ವಯೋಮಿತಿ ಒಳಗಿನ ಮಕ್ಕಳ ಮೊಬೈಲ್ ಬಳಕೆ ಮೇಲೆ ಕಡಿವಾಣ ಹಾಕಿದೆ.
ಆರೋಗ್ಯ ಸಮಸ್ಯೆ
ಅತಿಯಾಗಿ ಮೊಬೈಲ್ ಬಳಕೆ ಮಾಡುವುದರಿಂದ ಮೆದುಳು ಹಾಗೂ ನರ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರುತ್ತದೆ. ದೃಷ್ಟಿದೋಷ, ದೃಷ್ಟಿ ಹೀನತೆ ಹಾಗೂ ಕ್ಯಾನ್ಸರ್ ರೋಗದಂತಹ ಪ್ರಕರಣಗಳ ಹೆಚ್ಚಳಕ್ಕೂ ಮೊಬೈಲ್ ಕಾರಣವಾಗಿದೆ ಎಂದು ಅರಿತು ಈ ನಿರ್ಧಾರವನ್ನು ಮಾಡಿದ್ದೇವೆ ಎಂದು ಚೀನ ಸರಕಾರ ತಿಳಿಸಿದೆ.
ಈ ಹಿಂದೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಚೀನಿಯರಲ್ಲಿ ಕೇಳಿಕೊಂಡಿದ್ದರು. ಆದರೆ ಪರಿಸ್ಥಿತಿ ಸುಧಾರಿಸದ ಕಾರಣ ವಿಡೀಯೋ ಗೇಮಿಂಗ್ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಚೀನದಲ್ಲಿ ಇಲಾಖೆಗಳ ಅಧಿಕಾರಿಗಳು ಈಗಾಗಲೇ ಗೇಮಿಂಗ್ ಅಡಿಕr… ಹಾಗೂ ಹಿಂಸಾತ್ಮಕ ರೂಪದ ಗೇಮ್‌ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸುತ್ತಿದೆ ಎಂದು ಚೀನದ ರಾಷ್ಟ್ರೀಯ ವಾರ್ತಾ ಮತ್ತು ಪ್ರಸಾರ ಇಲಾಖೆ ವರದಿ ಮಾಡಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.