ಪಾಕ್‌ನಲ್ಲಿ ಸಿಂಹಗಳ ಬೆಲೆ 57 ಸಾವಿರ ರೂ.
Team Udayavani, Jul 29, 2022, 7:50 AM IST
ಇಸ್ಲಾಮಾಬಾದ್: ಪಾಕಿಸ್ಥಾನವು ಅತಿ ದೊಡ್ಡ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಅಲ್ಲಿನ ಮೃಗಾ ಲಯಗಳು, ಮೃಗಾಲಯದ ನಿರ್ವಹಣೆ ಗಾಗಿ ಪ್ರಾಣಿಗಳನ್ನು ಮಾರಾಟ ಮಾಡಲಾರಂಭಿಸಿವೆ. ವಿಚಿತ್ರವೆಂದರೆ ಅಲ್ಲೀಗ ಸಿಂಹಗಳ ಬೆಲೆ ಎಮ್ಮೆ ಬೆಲೆಗಿಂತಲೂ ಕಡಿಮೆ!
ಲಾಹೋರ್ ಸಫಾರಿ ಜೂ ತನ್ನಲ್ಲಿರುವ 12 ಸಿಂಹಗಳನ್ನು ಆಗಸ್ಟ್ ಮೊದಲ ವಾರದಲ್ಲಿ ಮಾರಾಟ ಮಾಡುವುದಾಗಿ ಹೇಳಿದೆ. ಒಂದು ಸಿಂಹಕ್ಕೆ 1.5 ಲಕ್ಷ ಪಾಕಿಸ್ಥಾನಿ ರೂ. (ಭಾರತದ 57,700 ರೂ.) ಬೆಲೆಯನ್ನೂ ನಿಗದಿಪಡಿಸಿದೆ. ಮೃಗಾಲಯಗಳಲ್ಲಿ 40 ಸಿಂಹಗಳಿದ್ದು ಅವುಗಳನ್ನು ಮಾರಾಟ ಮಾಡಿ, ಅದ ರಿಂದ ಬಂದ ಹಣದಲ್ಲಿ ಮೃಗಾಲಯದ ನಿರ್ವಹಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದತ್ತ ಅಲ್ಲಿನ ಎಮ್ಮೆಗಳ ದರ 3.5 ಲಕ್ಷ ಪಾಕಿಸ್ಥಾನಿ ರೂ. (1.34 ಲಕ್ಷ ರೂ.)ನಿಂದ 10 ಲಕ್ಷ ಪಾಕಿಸ್ಥಾನಿ ರೂ. (3.84 ಲಕ್ಷ ರೂ.) ವರೆಗೆ ತಲುಪಿದೆ. ಹಾಗಾಗಿ ಅಲ್ಲೀಗ ಸಿಂಹಗಳ ಬೆಲೆಗಿಂತ ಎಮ್ಮೆಗಳ ಬೆಲೆಯೇ ಅಧಿಕವಾಗಿದೆ.
ಪಾಕ್ ರೂಪಾಯಿ ಸಾರ್ವಕಾಲಿಕ ಗರಿಷ್ಠ ಕುಸಿತ: ಪಾಕಿಸ್ಥಾನಿ ರೂಪಾಯಿ ಮೌಲ್ಯ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕುಸಿದಿದೆ. ಬುಧವಾರ ಡಾಲರ್ ಎದುರು 236.02 ರೂ. ಇದ್ದ ಮೌಲ್ಯ ಗುರುವಾರ 240.5 ರೂ.ಗೆ ಕುಸಿದಿದೆ. ಅರ್ಥಾತ್ 4.48 ರೂ. ಕುಸಿತ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.