ಗೌರಿ ಲಂಕೇಶ್ ಹತ್ಯೆ ಪ್ರತಿಧ್ವನಿ
Team Udayavani, Oct 17, 2017, 7:10 AM IST
ವಾಷಿಂಗ್ಟನ್: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಎಂ.ಎಂ. ಕಲಬುರಗಿ ಹತ್ಯೆ ಪ್ರಕರಣಗಳು ಅಮೆರಿಕದ ಸಂಸತ್ತಿನಲ್ಲಿಯೂ ಪ್ರತಿಧ್ವನಿಸಿದೆ. ಸೋಮವಾರ ನಡೆದ ಕಲಾಪದ ವೇಳೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯ ಬಂದೊದಗಿರುವ ವಿಚಾರವಾಗಿ ಮಾತನಾಡಿದ ಅರಿಝೋನಾದ ರಿಪಬ್ಲಿಕನ್ ಸಂಸದ ಹೆರಾಲ್ಡ್ ಟ್ರೆಂಟ್ ಫ್ರಾಕ್ಸ್, ಇದಕ್ಕೆ ಉದಾಹರಣೆಯಾಗಿ ಗೌರಿ ಲಂಕೇಶ್ ಹತ್ಯೆ ವಿಚಾರವನ್ನು ಪ್ರಸ್ತಾಪಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ಲೋಪ-ದೋಷಗಳನ್ನು ಎತ್ತಿ ತೋರುವವರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದ ಅವರು, ಸಮಾಜದ ಓರೆ ಕೋರೆಗಳನ್ನು ನಿಷ್ಠುರವಾಗಿ ಹೇಳುವವರು ಹತ್ಯೆಗೆ ಒಳಗಾಗುವಂಥ ಕೆಟ್ಟ ಸಂಪ್ರದಾಯ ವೊಂದು ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಆರಂಭವಾಗಿರುವುದು ದುರ ದೃಷ್ಟಕರ ಎಂದರು.
ಇದೇ ವೇಳೆ, ಗೌರಿ ಹತ್ಯೆಗೂ ಮುನ್ನಾ ವರ್ಷಗಳಲ್ಲಿ ಎಂ.ಎಂ. ಕಲಬುರಗಿ ಎಂಬ ಸಾಹಿತಿಯನ್ನೂ ಹತ್ಯೆ ಮಾಡಲಾಗಿತ್ತು. ಇದಲ್ಲದೆ, ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್ ಎಂಬ ವಿಚಾರವಾದಿಗಳ ಹತ್ಯೆಗಳೂ ಭಾರತದಲ್ಲಿ ನಡೆದಿವೆ. ಇತ್ತೀಚೆಗೆ, ಆಂಧ್ರಪ್ರದೇಶದ ವಿಚಾರವಾದಿ, ದಲಿತ ಲೇಖಕ ಪ್ರೊ. ಕೆಂಚ ಐಲಯ್ಯ ಅವರಿಗೆ, ಭಾರತದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಮಿತ್ರಪಕ್ಷದ ಸಂಸದರೊಬ್ಬರು ಜೀವ ಬೆದರಿಕೆ ಹಾಕಿರುವ ಬಗ್ಗೆ ವರದಿಯಾಗಿದೆ. ಇದು ನಿಜಕ್ಕೂ ಆತಂಕಕಾರಿ ಎಂದು ಫ್ರಾಕ್ಸ್ ಕಳವಳ ವ್ಯಕ್ತಪಡಿಸಿದರು.
ಭಾರತದಂತಹ ಮಿತ್ರರಾಷ್ಟ್ರದಲ್ಲಿ ನಿರ್ಭೀಡೆ ಬರಹಗಾರರ ಸೌಖ್ಯಕ್ಕೆ ಕಿಂಚಿತ್ತೂ ಕುತ್ತು ಬಾರದಂತೆ ಅಮೆರಿಕವು ಅಂತಾರಾಷ್ಟ್ರೀಯ ಸ್ತರದಲ್ಲಿ ಆಗ್ರಹಿಸುವ ಅವಶ್ಯಕತೆಯಿದೆ ಎಂದು ಫ್ರಾಕ್ಸ್ ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.