ಅಭಿವೃದ್ಧಿಗಾಗಿ ಕೈ ಜೋಡಿಸಲು ದೊಡ್ಡ ಅವಕಾಶ
Team Udayavani, Apr 28, 2018, 6:00 AM IST
ವುಹಾನ್: ಜಗತ್ತಿನ ಒಟ್ಟು ಜನಸಂಖ್ಯೆ ಯಲ್ಲಿ ಶೇ.40ರಷ್ಟು ಪಾಲು ಹೊಂದಿರುವ ಭಾರತ, ಚೀನ ದೇಶಗಳ ಮುಂದೆ ತಮ್ಮ ಜನತೆಯ ಕಲ್ಯಾಣಕ್ಕಾಗಿ, ಶಾಂತಿ, ಸ್ಥಿರತೆಗಾಗಿ ಪರಸ್ಪರ ಕೈ ಜೋಡಿಸಿ ಕೆಲಸ ಮಾಡುವಂಥ ಬಹುದೊಡ್ಡ ಅವಕಾಶವಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಚೀನಾಕ್ಕೆ ಕಿವಿಮಾತು ಹೇಳಿದ್ದಾರೆ.
ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಜತೆಗೆ ಚೀನದ ವುಹಾನ್‌ನಲ್ಲಿ ನಡೆಯುತ್ತಿರುವ ಅನೌಪಚಾರಿಕ ದ್ವಿಪಕ್ಷೀಯ ಸಭೆಯಲ್ಲಿ ಮಾತನಾಡಿದ ಅವರು, “”ಇಂಥ ಅನೌಪಚಾರಿಕ ಸಭೆಗಳ ಸಂಪ್ರದಾಯ ಮುಂದುವರಿಯ ಬೇಕು. ಸಾಧ್ಯವಾದರೆ, 2019ರಲ್ಲಿ ಇಂಥದ್ದೇ ಸಭೆ ದಿಲ್ಲಿಯಲ್ಲಿ ನಡೆಯಲಿ” ಎಂದು ಆಶಿಸಿದರು.
ಶ್ಲಾಘನೆ: ಕಳೆದ 2000 ವರ್ಷಗಳ ಇತಿಹಾಸದಲ್ಲಿ, ಭಾರತ-ಚೀನಗಳ ಒಟ್ಟು ಆರ್ಥಿಕತೆ, ಜಗತ್ತಿನ ಆರ್ಥಿಕತೆಯ ಶೇ. 50ರಷ್ಟು ಪಾಲು ಹೊಂದಿದ್ದು, 1600 ವರ್ಷಗಳಿಂದಲೂ ಜಾಗತಿಕ ಆರ್ಥಿಕತೆಯಲ್ಲಿ ಎರಡೂ ದೇಶಗಳು ತಮ್ಮದೇ ಆದ ಸಾರ್ವಭೌಮತ್ವವನ್ನು ಹೊಂದಿವೆ ಎಂದು ಮೋದಿ ಶ್ಲಾಘಿಸಿದರು.
ವಿಶೇಷ ಪ್ರಧಾನಿ!: ತಮ್ಮ 2015ರ ಚೀನ ಭೇಟಿಯ ವೇಳೆ, ಜಿನ್‌ಪಿಂಗ್ ಅವರ ತವರೂರಾದ ಕ್ಸಿಯಾನ್‌ನಲ್ಲಿ ತಮಗೆ ಸ್ವಾಗತ ಸಿಕ್ಕಿದ್ದನ್ನು ನೆನಪಿಸಿಕೊಂಡ ಮೋದಿ, “”ಈಗ ನನಗೆ ವುಹಾನ್‌ನಲ್ಲಿ ಸ್ವಾಗತ ನೀಡಲಾಗಿದೆ. ಬೀಜಿಂಗ್ ಹೊರತು ಪಡಿಸಿ ಇತರ ನಗರಗಳಲ್ಲಿ ಸ್ವಾಗತ ಪಡೆದ ಭಾರತದ ಮೊದಲ ಪ್ರಧಾನಿ ನಾನೇ ಇರಬಹುದು”ಎಂದು ಹೆಮ್ಮೆಪಟ್ಟರು. ಈ ವೇಳೆ ಮಾತನಾಡಿದ ಜಿನ್‌ಪಿಂಗ್, “”ಮುಕ್ತ ಅವಕಾಶಗಳುಳ್ಳ ಹೊಸ ವಿಶ್ವವನ್ನು ಕಟ್ಟುವಲ್ಲಿ ಭಾರತ, ಚೀನ ಪ್ರಧಾನ ಪಾತ್ರ ವಹಿಸಲಿವೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.