Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
ಕೆನಡಾದ ಭದ್ರತಾ ವೈಫಲ್ಯ ಜಗತ್ತಿನ ಮುಂದೆ ಬಯಲು
Team Udayavani, Nov 8, 2024, 7:45 AM IST
ಟೊರೊಂಟೊ: ಬ್ರಾಂಪ್ಟನ್ ಮತ್ತು ಸರ್ರೆನಲ್ಲಿ ನಡೆಯುತ್ತಿದ್ದ ಭಾರತದ ಕಾನ್ಸುಲರ್ ಕ್ಯಾಂಪ್‌ಗ್ಳ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದರೂ ಕೈಕಟ್ಟಿ ಕುಳಿತಿದ್ದ ಕೆನಡಾ ಸರ್ಕಾರಕ್ಕೆ ಭಾರತ ಈಗ ರಾಜತಾಂತ್ರಿಕವಾಗಿ ತಿರುಗೇಟು ನೀಡಿದೆ.
ಕೆನಡಾದಲ್ಲಿ ನಡೆಯಬೇಕಿದ್ದ ಎಲ್ಲಾ ಕಾನ್ಸುಲರ್ ಕ್ಯಾಂಪ್ ಗಳನ್ನೂ ರದ್ದು ಮಾಡಿ, ಸಾಮಾನ್ಯ ಭದ್ರತೆಯನ್ನೂ ಒದಗಿಸದ ಕೆನಡಾದ ಪೊಲೀಸ್ ವ್ಯವಸ್ಥೆಯೇ ಇದಕ್ಕೆ ಕಾರಣ ಎಂದು ಬೊಟ್ಟು ಮಾಡಿದೆ. ಈ ಮೂಲಕ ಕೆನಡಾವು ವಿದೇಶಗಳ ರಾಯಭಾರಿಗಳಿಗೆ, ವಿದೇಶಿ ಸಮುದಾಯಗಳಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಜಗತ್ತಿನ ಮುಂದೆ ತೆರೆದಿಟ್ಟಂತಾಗಿದೆ.
ಕೆನಡಾದಲ್ಲಿರುವ ಭಾರತೀಯ ಪ್ರಜೆಗಳಿಗೆ ಭಾರತದಲ್ಲಿನ ಪಿಂಚಣಿ, ಜೀವ ವಿಮೆ ಸೇರಿದಂತೆ ಕೆಲ ಸೇವಾ ಸೌಲಭ್ಯಗಳಿಗೆ ಪೂರಕವಾದ ದಾಖಲೆಗಳನ್ನು ಒದಗಿಸುವ, ಅದರ ಬಗ್ಗೆ ಮಾಹಿತಿ ನೀಡುವ ಕೆಲಸಗಳನ್ನು ರಾಯಭಾರ ಕಚೇರಿಗಳು ಕಾನ್ಸುಲರ್ ಕ್ಯಾಂಪ್‌ಗ್ಳ ಮೂಲಕ ನಡೆಸುತ್ತಿದ್ದವು. ನ.2 ಮತ್ತು 3ರಂದು ಈ ಕ್ಯಾಂಪ್‌ಗ್ಳ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರು. ಈ ಬಗ್ಗೆ ಭಾರತ ಆಕ್ಷೇಪ ವ್ಯಕ್ತ ಪಡಿಸಿದಾಗಲೂ ಕೆನಡಾ ಸರ್ಕಾರ ಕೈ ಕಟ್ಟಿ ಕುಳಿತಿತ್ತು. ಈ ಹಿನ್ನೆಲೆಯಲ್ಲಿ ಭಾರತ ಕ್ಯಾಂಪ್‌ಗ್ಳ ನ್ನೇ ರದ್ದುಗೊಳಿಸಿ, ರಾಜತಾಂತ್ರಿಕ ತಿರುಗೇಟು ನೀಡಿದೆ. ವಿದೇಶಾಂಗ ಕಾರ್ಯದರ್ಶಿ ರಣದೀರ್ ಜೈಸ್ವಾಲ್ ಅವರು ಕ್ಯಾಂಪ್ ರದ್ದತಿಯನ್ನು ದೃಢಪಡಿಸಿದ್ದಾರೆ.
ಬ್ರಾಂಪ್ಟನ್ ದೇಗುಲದ ಅರ್ಚಕ ವಜಾ
ಖಲಿಸ್ತಾನಿಗಳು ದಾಳಿ ನಡೆಸಿದ ಬ್ರಾಂಪ್ಟನ್‌ನ ಹಿಂದೂ ಸಭಾ ದೇವಾಲಯದ ಅರ್ಚಕನನ್ನೇ ದೇಗುಲ ಆಡಳಿತ ವಜಾಗೊಳಿಸಿದೆ. ದಾಳಿ ಸಂದರ್ಭದಲ್ಲಿ ಹಿಂದೂಗಳನ್ನು ಉದ್ರೇಕಿಸುವಂಥ ದ್ವೇಷ ಭಾಷಣವನ್ನು ಅರ್ಚಕ ಮಾಡಿದ್ದರು. ಹೀಗಾಗಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದೇವೆ ಎಂದಿದೆ.
ಜೈಶಂಕರ್ ಭಾಷಣ ಪ್ರಸಾರ
ಮಾಡಿದ ಮಾಧ್ಯಮಕ್ಕೆ ನಿಷೇಧ
ಭಾರತದ ಮೇಲೆ ನಿರಾಧಾರ ಆರೋಪ ಎಸಗಿ ನುಣುಚಿಕೊಳ್ಳಲು ಯತ್ನಿಸುತ್ತಿರುವ ಕೆನಡಾ ಈಗ ಜಾಗತಿಕ ಮಟ್ಟದಲ್ಲಿ ತನ್ನ ಗುಟ್ಟು ಬಯಲಾಗಿದ್ದಕ್ಕೆ ಸಿಟ್ಟಾಗಿದೆ. ವಿದೇಶಾಂಗ ಸಚಿವ ಜೈಶಂಕರ್ ಮಾಡಿದ ಭಾಷಣ ಪ್ರಸಾರ ಮಾಡಿದ “ಆಸ್ಟ್ರೇಲಿಯಾ ಟುಡೇ’ ಮಾಧ್ಯಮವನ್ನು ಕೆನಡಾದಲ್ಲಿ ನಿಷೇಧಿಸಲಾಗಿದೆ. ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವೋಂಗ್ ಮತ್ತು ಜೈಶಂಕರ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜೈ ಶಂಕರ್, ಭಾರತದ ವಿರುದ್ಧ ಕೆನಡಾದ ಆಧಾರರಹಿತ ಆರೋಪ, ಭಾರತೀಯ ರಾಯಭಾರಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಹಾಗೂ ಭಾರತ ವಿರೋಧಿ ಕೃತ್ಯಗಳಿಗೆ ಅಲ್ಲಿನ ರಾಜಕೀಯ ಬೆಂಬಲವನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಕೆನಡಾ ನಿರ್ಬಂಧ ವಿಧಿಸಿದೆ. ಇದು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಎಂದು ಭಾರತ ಕಿಡಿಕಾರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.