ಭಾರತ ಅತ್ಯಂತ ದುಬಾರಿ ತೆರಿಗೆ ದೇಶ: ಡೊನಾಲ್ಡ್ ಟ್ರಂಪ್
Team Udayavani, Mar 3, 2019, 4:13 AM IST
ವಾಷಿಂಗ್ಟನ್: ಭಾರತ ಅತ್ಯಂತ ಹೆಚ್ಚಿನ ತೆರಿಗೆ ವಿಧಿಸುವ ದೇಶ. ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ದುಬಾರಿ ತೆರಿಗೆ ವಿಧಿಸುತ್ತದೆ. ಇದಕ್ಕೆ ಬದಲಿಯಾಗಿ ಅಮೇರಿಕಾ ಕೂಡಾ ಭಾರತದಿಂದ ಆಮದು ಮಾಡುವ ವಸ್ತುಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರತಿ ತೆರಿಗೆ ವಿಧಿಸುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಲ್ಲಿನ ಮೇರಿಲ್ಯಾಂಡ್ ನಲ್ಲಿ ನಡೆದ ಕಂನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅಮೇರಿಕಾ ಅಧ್ಯಕ್ಷ, ಹಾರ್ಲೇ ಡೇವಿಡ್ ಸನ್ ಬೈಕ್ ನ ಉದಾಹರಣೆ ನೀಡುತ್ತಾ, ನಾವು ಭಾರತಕ್ಕೆ ಬೈಕ್ ಕಳುಹಿಸುವಾಗ ಭಾರತ 100% ತೆರಿಗೆ ಹಾಕುತ್ತಾರೆ. ಆದರೆ ಭಾರತದಿಂದ ಮೋಟಾರ್ ಬೈಕ್ ಅನ್ನು ಇಲ್ಲಿಗೆ ಕಳುಹಿಸಿದರೆ ಅದಕ್ಕೆ ನಾವು ಯಾವುದೇ ತೆರಿಗೆ ವಿಧಿಸುವುದಿಲ್ಲ. ಭವಿಷ್ಯದಲ್ಲಿ ಭಾರತದ ಅಧಿಕ ತೆರಿಗೆಗೆ ಪ್ರತಿಯಾಗಿ ನಾವು ಕೂಡ ಪ್ರತಿ ತೆರಿಗೆ ವಿಧಿಸಬೇಕು ಎಂದರು.
ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್, ಭಾರತದ ಉದಾಹರಣೆ ನೀಡುತ್ತಾ ಹೇಗೆ ಇತರ ದೇಶಗಳು ಅಮೇರಿಕಾಗೆ ಹೆಚ್ಚಿನ ತೆರಿಗೆ ವಿಧಿಸುತ್ತಿವೆ ಎಂದು ವಿವರಿಸಿದರು. ಇಲ್ಲಿಯವರೆಗೆ ಇತರರು ನಮ್ಮ ಮೇಲೆ ತೆರಿಗೆ ವಿಧಿಸುತ್ತಿದ್ದರು, ಈಗ ನಮ್ಮ ಸಮಯ. ಅಮೇರಿಕಾ ಇನ್ನು ಬದಲಿ ತೆರಿಗೆ (reciprocal tax ) ವಿಧಿಸುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.