BBC Chairman: ಬಿಬಿಸಿ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಡಾ.ಸಮೀರ್ ಶಾ ಆಯ್ಕೆ
Team Udayavani, Dec 7, 2023, 12:37 PM IST
ಲಂಡನ್: ಬಿಬಿಸಿಯ ನೂತನ ಅಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಡಾ. ಸಮೀರ್ ಶಾ ಅವರ ಹೆಸರನ್ನು ಬ್ರಿಟಿಷ್ ಸರ್ಕಾರ ಅಂತಿಮಗೊಳಿಸಿದೆ.
40 ವರ್ಷಗಳಿಗೂ ಹೆಚ್ಚು ಕಾಲ ಪ್ರಸಾರ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಭಾರತೀಯ ಮೂಲದ ಮಾಧ್ಯಮ ಕಾರ್ಯನಿರ್ವಾಹಕ ಡಾ. ಸಮೀರ್ ಶಾ ಅವರನ್ನು ರಿಷಿ ಸುನಕ್ ಸರ್ಕಾರವು ಹುದ್ದೆಯನ್ನು ವಹಿಸಿಕೊಳ್ಳಲು ಆದ್ಯತೆಯ ಅಭ್ಯರ್ಥಿ ಎಂದು ಘೋಷಿಸಿದೆ.
ಮಾಧ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಶಾ ಅವರನ್ನು ಬಿಬಿಸಿಯ ಹೊಸ ಅಧ್ಯಕ್ಷರಾಗಿ ಆಯ್ಕೆ ಮಾಡಲು ಹೌಸ್ ಆಫ್ ಕಾಮನ್ಸ್ನ ಸಂಸದರು ಗ್ರೀನ್ ಸಿಗ್ನಲ್ ನೀಡಿದ್ದಾರೆ.
71 ವರ್ಷದ ಸಮೀರ್ ಶಾ ಅವರು ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಳಿಗಾಗಿ 2019 ರಲ್ಲಿ ರಾಣಿ ಎಲಿಜಬೆತ್ II ಅವರಿಂದ ಉನ್ನತ ಗೌರವಕ್ಕೆ ಪಾತ್ರರಾಗಿದ್ದರು.
ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರೊಂದಿಗಿನ ಸಂಭಾಷಣೆ ಸೋರಿಕೆಯಾದ ನಂತರ ಬಿಬಿಸಿ ಅಧ್ಯಕ್ಷ ಸ್ಥಾನಕ್ಕೆ ರಿಚರ್ಡ್ ಶಾರ್ಪ್ ರಾಜೀನಾಮೆ ನೀಡಬೇಕಾಯಿತು.
ಬಿಬಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತು ಹೇಳಿಕೆ ನೀಡಿದ ಬ್ರಿಟನ್‌ನ ಸಂಸ್ಕೃತಿ ಸಚಿವೆ ಲೂಸಿ ಫ್ರೇಸರ್, ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ ಆಯ್ಕೆಯನ್ನು ದೃಢೀಕರಿಸುವ ಸಂದರ್ಭದಲ್ಲಿ, ಟಿವಿ ನಿರ್ಮಾಣ ಮತ್ತು ಪತ್ರಿಕೋದ್ಯಮದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಡಾ. ಶಾ ಅವರು ಬಿಬಿಸಿ ಅಧ್ಯಕ್ಷ ಹುದ್ದೆಗೆ ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.
ವೇಗವಾಗಿ ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ಬಿಬಿಸಿಯನ್ನು ಯಶಸ್ವಿಯಾಗಿಸುವ ಸಮೀರ್ ಶಾ ಅವರ ಮಹತ್ವಾಕಾಂಕ್ಷೆಯು ತುಂಬಾ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ಬಿಬಿಸಿ ತನ್ನ ಭವಿಷ್ಯದ ಸವಾಲುಗಳನ್ನು ಜಯಿಸಲು ಸಹಾಯ ಮಾಡುವಲ್ಲಿ ಅವರು ತಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಜಾಗತಿಕ ಸಂಸ್ಕೃತಿಗೆ ಬಿಬಿಸಿ ನಮ್ಮ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಶಾ ಹೇಳಿದರು.
ನನ್ನ ಕೌಶಲ್ಯ, ಅನುಭವ ಮತ್ತು ಸಾರ್ವಜನಿಕ ಸೇವಾ ಪ್ರಸಾರದ ತಿಳುವಳಿಕೆಯೊಂದಿಗೆ, ಮುಂಬರುವ ವಿವಿಧ ಸವಾಲುಗಳಿಗೆ ಈ ಸಂಸ್ಥೆಯನ್ನು ಸಜ್ಜುಗೊಳಿಸಲು ಸಾಧ್ಯವಾದರೆ ಅದು ನನಗೆ ಸಲ್ಲುವ ಗೌರವವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Tragedy: ಮದುವೆಗೂ ಮುನ್ನ ಚಿನ್ನ, ಜಾಗ, ಕಾರಿಗೆ ಬೇಡಿಕೆ… ಮನನೊಂದ ಯುವ ವೈದ್ಯೆ ಆತ್ಮಹತ್ಯೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.