India-born ಸುನೀತಾ ವಿಲಿಯಮ್ಸ್ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!
Team Udayavani, May 7, 2024, 7:00 AM IST
ವಾಷಿಂಗ್ಟನ್: ಭಾರತ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ 3ನೇ ಬಾರಿಗೆ ಅಂತರಿಕ್ಷಕ್ಕೆ ಹಾರಲು ಸಜ್ಜಾಗಿದ್ದಾರೆ. ಮಂಗಳವಾರ ಬೋಯಿಂಗ್ ಸಂಸ್ಥೆಯ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯ ಮೊದಲ ಮಾನವಸಹಿತ ಯಾನದಲ್ಲಿ ಸುನೀತಾ ಗಗನಯಾನ ಕೈಗೊಳ್ಳಲಿದ್ದಾರೆ.
ಫ್ಲೋರಿಡಾದ ಕೇಪ್ ಕೆನಾವೆರಾಲ್ ಉಡಾವಣ ಕೇಂದ್ರದಿಂದ ಸುನೀತಾ, ಬುಚ್ ವಿಲ್ಮೋರ್ ಎಂಬ ಗಗನಯಾನಿಗಳನ್ನು ಹೊತ್ತು ಸ್ಟಾರ್ಲೈನರ್ ಸ್ಪೇಸ್ಕ್ರಾಫ್ಟ್ ನಭಕ್ಕೆ ಚಿಮ್ಮಲಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರತಲುಪಲಿದೆ. ಇದು ಮಾನವ ಸಹಿತ ಗಗನಯಾನ ಕೈಗೊಳ್ಳಬಲ್ಲ ಬೋಯಿಂಗ್ನ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿ ಸಲಿದೆ ಎಂದು ಸಂಸ್ಥೆ ಹೇಳಿದೆ.
ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!
ಸುನೀತಾ ತಮ್ಮ ಜತೆಗೆ ಗಣೇಶನ ಮೂರ್ತಿಯನ್ನು ಕೊಂಡೊ ಯ್ಯಲಿದ್ದಾರೆ. ಸುದ್ದಿ ವಾಹಿನಿ ಯೊಂದಿಗಿನ ಸಂದರ್ಶನ ದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಧಾರ್ಮಿಕತೆ ಗಿಂತ ಹೆಚ್ಚು ಆಧ್ಯಾತ್ಮಿಕೆ ಯನ್ನು ನಂಬುತ್ತೇನೆ. ಗಣಪತಿ ವಿಗ್ರಹ ನನಗೆ ಅದೃಷ್ಟದ ಸಂಕೇತ. ಇದನ್ನು ಈ ಬಾರಿ ನನ್ನೊಂದಿಗೆ ಕೊಂಡೊಯ್ಯುತ್ತಿದ್ದೇನೆ. ಹಿಂದಿನ ಬಾರಿ ಭಗವದ್ಗೀತೆ ಕೊಂಡೊಯ್ದಿದ್ದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.