ಭಾರತ-ಚೀನ ಮಾತುಕತೆ ಭಂಗ, ದ್ವಿಪಕ್ಷೀಯ ಮಾತುಕತೆ ಸಾಧ್ಯವಿಲ್ಲ
Team Udayavani, Jul 7, 2017, 3:45 AM IST
ಬೀಜಿಂಗ್/ಹೊಸದಿಲ್ಲಿ: ಭಾರತ ಹಾಗೂ ಚೀನ ನಡುವಿನ ಬಿಗು ವಾತಾವರಣದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ನಿರೀಕ್ಷಿತ ಮಾತುಕತೆ ಕೊನೇ ಕ್ಷಣಕ್ಕೆ ಮುರಿದುಬಿದ್ದಿದೆ.
ಉಭಯ ರಾಷ್ಟ್ರಗಳ ನಾಯಕರು ಜಿ20 ಶೃಂಗದ ವೇಳೆ ಮಾತುಕತೆ ನಡೆಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ “ಜಿ20 ಶೃಂಗದಲ್ಲಿ ಭಾರತದೊಂದಿಗೆ ದ್ವಿಪಕ್ಷೀಯ ಮಾತುಕತೆ ಸಾಧ್ಯವಿಲ್ಲ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪ್ರಧಾನಿ ಮೋದಿ ಜತೆ ಯಾವುದೇ ಮಾತುಕತೆ ನಡೆಸಲ್ಲ. ಸದ್ಯದ ಪರಿಸ್ಥಿತಿ ಇದಕ್ಕೆ ಪೂರಕವಾಗಿಲ್ಲ’ ಎಂದು ಚೀನ ವಿದೇಶಾಂಗ ಇಲಾಖೆ ಹೇಳಿದೆ.
ಇದಕ್ಕೆ ಖಡಕ್ ಆಗಿಯೇ ಉತ್ತರಿಸಿರುವ ಭಾರತ, ಮೋದಿ ಹಾಗೂ ಜಿನ್‌ಪಿಂಗ್ ಅವರ ಮಾತುಕತೆ ಬಗ್ಗೆ ನಾವು ಪ್ರಸ್ತಾವಿಸಿಯೇ ಇಲ್ಲ. ಹೀಗಾಗಿ ಸೂಕ್ತ ವಾತಾವರಣದ ಪ್ರಶ್ನೆಯೇ ಮೂಡುವುದಿಲ್ಲ ಎಂದು ಹೇಳಿದೆ.
ಪದೇ ಪದೇ ಒಂದಲ್ಲ ಒಂದು ರೀತಿ ಭಾರತದ ತಾಳ್ಮೆ ಪರೀಕ್ಷಿಸುತ್ತಲೇ ಬಂದಿರುವ ಚೀನ, ಸಿಕ್ಕಿಂ ಗಡಿ ವಿಚಾರದ ಹಿನ್ನೆಲೆಯಲ್ಲಿ ಜಿ20 ಶೃಂಗದ ದ್ವಿಪಕ್ಷೀಯ ಮಾತುಕತೆ ಸಾಧ್ಯತೆಯನ್ನು ತಳ್ಳಿಹಾಕಿ ಬೆದರಿಸಲು ಮುಂದಾದರೆ ಇದಕ್ಕೆ ಭಾರತ ಕೂಡ ರಾಜತಾಂತ್ರಿಕ ನೆಲೆಯಲ್ಲೇ ತಿರುಗೇಟು ನೀಡಿದೆ.
ಶುಕ್ರವಾರ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಜಿ20 ಶೃಂಗ ಆರಂಭಗೊಳ್ಳಲಿದ್ದು, ಪ್ರಧಾನಿ ಮೋದಿ ಗುರುವಾರ ರಾತ್ರಿ ಇಸ್ರೇಲ್‌ನಿಂದ ನೇರ ಜರ್ಮನಿಗೆ ಪ್ರಯಾಣ ಬೆಳೆಸಿದರು. ಜಿ20 ಶೃಂಗದ ಬಿಡುವಿನ ಸಮಯದಲ್ಲಿ ಬ್ರಿಕ್ಸ್ ನಾಯಕರ ಜತೆ ಮೋದಿ ಮಾತುಕತೆ ನಡೆಸಲಿ ದ್ದಾರೆ ಎಂದು ವಿದೇಶಾಂಗ ಇಲಾಖೆ ಮೂಲ ಗಳು ಸ್ಪಷ್ಟಪಡಿಸಿವೆ. ಸಿಕ್ಕಿಂ ಗಡಿ ವಿಚಾರದಲ್ಲಿ ಈಗಾಗಲೇ ಭಾರತ-ಚೀನ ಸಾಕಷ್ಟು ಬಿರು ಸಾಗಿಯೇ ವಾಕ್ಸಮರ ನಡೆಸಿದ್ದು, ಪ್ರಧಾನಿ ಮೋದಿ ಹ್ಯಾಂಬರ್ಗ್‌ನಲ್ಲಿ ಜಿನ್‌ಪಿಂಗ್ ಅವÃನ್ನು ಹೇಗೆ ಎದುರಿಸುತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಹೆಚ್ಚಿದೆ.
ಭಾರತ-ವಿಯೆಟ್ನಾಂ ಮಾತುಕತೆ
ಕಾಲ್ಕೆರೆದು ಜಗಳಕ್ಕೆ ಬರುತ್ತಿರುವ ಚೀನವನ್ನು ಎದುರಿಸಲು ಭಾರತ ರಾಜತಾಂತ್ರಿಕ ನಡೆಯನ್ನೇ ಅನುಸರಿಸುತ್ತಿರುವುದು ಸಹಜವಾಗಿಯೇ ಚೀನದ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಸಿಕ್ಕಿಂ ಗಡಿ ವಿಚಾರಕ್ಕೆ ಸಂಬಂಧಿಸಿ ಚೀನ ಯುದೊœàನ್ಮಾದದಿಂದ ವರ್ತಿಸುತ್ತಿರುವ ಬೆನ್ನಲ್ಲೇ ಈಗ ಭಾರತ ಹಾಗೂ ವಿಯೆಟ್ನಾಂ ಕೂಡ ಮಾತುಕತೆಗೆ ಮುಂದಾಗಿವೆ.
ಏಷ್ಯಾವಲಯದಲ್ಲಿ ತಾನೇ ಬಲಿಷ್ಠ ಎಂದು ತೋರಿಸಿಕೊಳ್ಳಲು ಹೊರಟಿರುವ ಚೀನಕ್ಕೆ ಉಭಯ ರಾಷ್ಟ್ರಗಳು ಈಗ ತಮ್ಮ ಹಿತಾಸಕ್ತಿ ಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾತು ಕತೆಗೆ ಮುಂದಾಗಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇದರ ಭಾಗವಾಗಿ ವಿಯೆಟ್ನಾಂನ ಉಪಪ್ರಧಾನಿ, ವಿದೇಶಾಂಗ ಸಚಿವ ಫಾಮ್ ಬಿನ್Ø ಮಿನ್Ø ನಾಲ್ಕು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಚೀನ ಬಗ್ಗೆ ಆಗಾಗ ಮುನಿಸಿಕೊಳ್ಳುತ್ತಲೇ ಇರುವ ವಿಯೆಟ್ನಾಂ, ಸುತ್ತಲಿನ ಉಳಿದ ರಾಷ್ಟ್ರ ಗಳಾದ ಫಿಲಿಪ್ಪೆ „ನ್ಸ್ ಹಾಗೂ ಬ್ರೂನಿ ಕೂಡ ಮಾತು ಕತೆಗೆ ಆಸಕ್ತಿ ತೋರಿವೆ ಎಂದು ಹೇಳಲಾಗುತ್ತಿದೆ.
ಸಿಕ್ಕಿಂ ಸ್ವಾತಂತ್ರ್ಯ: ಚೀನ ಮಾಧ್ಯಮ ವಿಷಬೀಜ
ಬೀಜಿಂಗ್: ತನ್ನ ಅಧಿಕೃತ ಮಾಧ್ಯಮಗಳ ಮೂಲಕ ಭಾರತಕ್ಕೆ ಕಳೆದ ಕೆಲವು ದಿನಗಳಿಂದ ನಿರಂತರ ಬೆದರಿಕೆ ಹಾಕುತ್ತಾ ಬಂದಿರುವ ಚೀನ, ಈಗ “ಸಿಕ್ಕಿಂ ಸ್ವಾತಂತ್ರ್ಯ’ದ ಹೆಸರಿನಲ್ಲಿ ವಿಷಬೀಜ ಬಿತ್ತಲು ಮುಂದಾಗಿದೆ.
“ಸಿಕ್ಕಿಂ ರಾಜ್ಯವನ್ನು ಸ್ವತಂತ್ರಗೊಳಿಸುವ ನಿಟ್ಟಿನಲ್ಲಿ ಚೀನ ತನ್ನ ನಿಲುವನ್ನು ಬದಲಾಯಿಸಿಕೊಳ್ಳಲು ಚಿಂತಿಸಬೇಕು’ ಎಂದು ಸರಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ಗುರುವಾರ ತನ್ನ ಸಂಪಾದಕೀಯದಲ್ಲಿ ಬರೆದುಕೊಂಡಿದೆ. ಈ ಮೂಲಕ ಭಾರತಕ್ಕೆ ಇನ್ನೊಂದು ಹೆಜ್ಜೆ ಮುಂದುವರಿದು ಧಮಕಿ ಹಾಕಿರುವ ಚೀನ ಮಾಧ್ಯಮ, “ಸಿಕ್ಕಿಂ ಜನತೆ ಸ್ವಾತಂತ್ರ್ಯವನ್ನೇ ಕಳೆದುಕೊಂಡಿದ್ದಾರೆ.
ಅಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಹೀಗಾಗಿ ಚೀನ ಸಿಕ್ಕಿಂ ರಾಜ್ಯವನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ನಿಟ್ಟಿನಲ್ಲಿ ತನ್ನ ನಿಲುವು ಬದಲಾಯಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು’ ಎಂದಿದೆ. ಇದೇ ವೇಳೆ ಚೀನ ಜನತೆ ಕೂಡ ಸಿಕ್ಕಿಂನ ಸ್ವಾತಂತ್ರ್ಯಕ್ಕಾಗಿ ಬೆಂಬಲಿಸಲಿದ್ದಾರೆ ಎನ್ನುವ ಮೂಲಕ ಸಿಕ್ಕಿಂನಲ್ಲಿ ಅರಾಜಕತೆ ಸೃಷ್ಟಿಸಿ, ರಾಜ್ಯವನ್ನೇ ಇಬ್ಭಾಗ ಮಾಡಲು ಹೊರಟಿದೆ.
ಭೂತಾನ್ ಮೇಲೆ ಹಿಡಿತ: ಭೂತಾನ್ ಜತೆ ಕೈಜೋಡಿಸಿರುವ ಭಾರತ, ಆ ಮೂಲಕ ಹಿಡಿತದಲ್ಲಿ ಇಟ್ಟುಕೊಳ್ಳಲು ಮುಂದಾಗಿದೆ. ಹೀಗಾಗಿಯೇ ಭೂತಾನ್ ಚೀನ ಜತೆ ಯಾವುದೇ ರಾಜತಾಂತ್ರಿಕ ಸಂಬಂಧ ಇರಿಸಿಕೊಂಡಿಲ್ಲ ಎಂದೂ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ
Neuralink; ಮತ್ತೊಬ್ಬನ ಮೆದುಳಿಗೆ ಚಿಪ್ : ಏನಿದು ತಂತ್ರಜ್ಞಾನ?
Wildfires; ಲಾಸ್ ಏಂಜಲೀಸ್ ಬೆಂಕಿಗೆ 10000 ಕೋಟಿ ಬಂಗಲೆ ಭಸ್ಮ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹವಾಮಾನ ಇಲಾಖೆಗೆ 150: ಕಾರ್ಯಕ್ರಮಕ್ಕೆ ಬರಲ್ಲ ಬಾಂಗ್ಲಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.