ಮಾನವ ಅಭಿವೃದ್ಧಿ ಸೂಚ್ಯಂಕ; ಭಾರತಕ್ಕೆ 129ನೇ ಸ್ಥಾನ
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಬಿಡುಗಡೆ ಮಾಡಿದ ಅಂಕಿ-ಅಂಶ
Team Udayavani, Dec 9, 2019, 7:16 PM IST
ವಿಶ್ವಸಂಸ್ಥೆ: ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕ (HDI)ದಲ್ಲಿ ಭಾರತ 129ನೇ ಸ್ಥಾನ ಪಡೆದಿ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಒಟ್ಟು 189 ದೇಶಗಳನ್ನು ಮೂಲವಾಗಿಟ್ಟುಕೊಂಡು ಈ ವರದಿಯನ್ನು ತಯಾರಿಸಲಾಗುತ್ತದೆ. ಕಳೆದ ವರ್ಷ ಭಾರತ 130ನೇ ಸ್ಥಾನದಲ್ಲಿತ್ತು. ಈ ವರ್ಷ ಒಂದು ಸ್ಥಾನ ಏರಿಕೆ ಕಂಡಿದೆ. ಇದೀಗ 3 ದಶಕಗಳ ಬಳಿಕ ಇದೇ ಮೊದಲ ಬಾರಿ ಭಾರತ ಕ್ಷಿಪ್ರವಾಗಿ ಒಂದು ಅಂಕ ಏರಿಕೆ ಕಂಡಿದೆ. 2005-06ರಿಂದ 2015-16ನೇ ಸಾಲಿನಲ್ಲಿ ಸುಮಾರು 27.1 ಕೋಟಿ ಮಂದಿಯನ್ನು ಬಡತನದಿಂದ ಮೇಲೆತ್ತಲಾಗಿದೆ ಎಂದು ವರದಿ ಹೇಳಿದೆ.
ಸುಮಾರು ಮೂರು ದಶಕಗಳ ಕ್ಷಿಪ್ರ ಅಭಿವೃದ್ಧಿಯ ಕಾರಣದಿಂದಾಗಿ ಭಾರತದ ಸ್ಥಿರ ಪ್ರಗತಿಗೆ ಕಾರಣವಾಗಿದೆ. ಇದು ಸಂಪೂರ್ಣ ಬಡತನದಲ್ಲಿ ಭಾರಿ ಇಳಿಕೆ ಕಾಣಲು ಸಹಕಾರಿಯಾಗಿದೆ. ಜೀವಿತಾವಧಿ, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಮೊದಲಾದ ಕಡೆಗಳಲ್ಲಿಯೂ ಗಮನಾರ್ಹ ಪ್ರಗತಿ ದಾಖಲಾಗಿದೆ. ಬೇರೆ ಯಾವುದೇ ರಾಷ್ಟ್ರ ಭಾರತದಂತೆ ಕ್ಷಿಪ್ರವಾಗಿ ಮಾನವ ಅಭಿವೃದ್ಧಿ ಪ್ರಗತಿಯನ್ನು ದಾಖಲಿಸಿಲ್ಲ.
1990-2018ರ ಅವಧಿಯಲ್ಲಿ ದಕ್ಷಿಣ ಏಷ್ಯಾ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ. ಭಾರತ ಬಡತನವನ್ನು ಮೇಲೆತ್ತಲು ಹಲವು ವರ್ಷಗಳಿಂದ ಸತತವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದರ ಪರಿಣಾಮವಾಗಿ ಈ ಬೆಳವಣಿಗೆಗಳನ್ನು ನಾವು ಕಾಣಬಹುದು ಎಂದು ಯುಎನ್‌ಡಿಪಿ ಭಾರತೀಯ ಪ್ರತಿನಿಧಿ ಶಾಕೋ ನೋಡ ಹೇಳಿದ್ದಾರೆ.
ದಕ್ಷಿಣ ಏಷ್ಯಾವು ಜೀವಿತಾವಧಿಯಲ್ಲಿ ಏರಿಕೆಯನ್ನು ಕಂಡಿದೆ. 1990 ಮತ್ತು 2018ರ ನಡುವೆ, ಜನನದ ಮತ್ತು ಜೀವಿತಾವಧಿ 11.6 ವರ್ಷಗಳು ಹೆಚ್ಚಾಗಿದೆ.
ತಲಾ ಆದಾಯವು ಶೇ. 250ಕ್ಕಿಂತ ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವರದಿಯ ಪ್ರಕಾರ, ಬಹು ಆಯಾಮದ ಬಡತನದವು ಭಾರತ ಸೇರಿದಂತೆ ಇತರ ದೇಶಗಳಲ್ಲೂ ಕಂಡು ಬರುತ್ತಿದೆ. 1.3 ಬಿಲಿಯನ್ ಬಹು ಆಯಾಮದ ಬಡವರಲ್ಲಿ, 661 ಮಿಲಿಯನ್ ಜನರು ಏಷ್ಯಾ ಮತ್ತು ಪೆಸಿಫಿಕ್‌ನಲ್ಲಿದ್ದಾರೆ. ಇದು ವಿಶ್ವದ 101 ದೇಶಗಳಲ್ಲಿ ವಾಸಿಸುವ ಬಡವರ ಅರ್ಧದಷ್ಟು ಭಾಗವನ್ನು ಹೊಂದಿದೆ.
ಜಗತ್ತಿನ ಒಟ್ಟು ಬಡವರ ಶೇ. 41ಕ್ಕಿಂತ ಹೆಚ್ಚು ಪಾಲನ್ನು ದಕ್ಷಿಣ ಏಷ್ಯಾ ಹೊಂದಿದೆ. ಭಾರತ ಗಮನಾರ್ಹ ಪ್ರಗತಿಯ ಹೊರತಾಗಿಯೂ, ಇದು 1.3 ಬಿಲಿಯನ್ ಬಡವರಲ್ಲಿ ಶೇಕಡಾ 28ರಷ್ಟು ಪಾಲನ್ನು ಹೊಂದಿದೆ. ಭಾರತ ಪ್ರಗತಿಯ ಹೊರತಾಗಿಯೂ ಗುಂಪು ಆಧಾರಿತ ಅಸಮಾನತೆಗಳು ಮುಂದುವರಿದಿದೆ. ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ.
ಲಿಂಗ ಅಭಿವೃದ್ಧಿ ಸೂಚ್ಯಂಕದಲ್ಲಿ ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ಎರಡನೇ ಸ್ಥಾನದಲ್ಲಿದ್ದರೆ, ಕೊರಿಯಾ ಗಣರಾಜ್ಯ ಪ್ರಥಮ ಸ್ಥಾನದಲ್ಲಿದೆ. ದಕ್ಷಿಣ ಏಷ್ಯಾದಲ್ಲಿ ಲಿಂಗಾನುಪಾತಗಳ ಅಂತರ ಹೆಚ್ಚಾಗಿದೆ. ಸಿಂಗಾಪುರದಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸಾಚಾರದ ಕಡಿಮೆ ಪ್ರಮಾಣದಲ್ಲಿದೆ.
ದಕ್ಷಿಣ ಏಷ್ಯಾದ ಶೇ. 31ರಷ್ಟು ಮಹಿಳೆಯರು ತನ್ನ ಸಂಗಾತಿಯಿಂದ ಹಿಂಸಾಚಾರ ಅನುಭವಿಸಿ¨ªಾರೆ ಎಂದು ವರದಿ ಹೇಳಿದೆ.
ಭಾರತವು ಲಿಂಗ ಅಸಮಾನತೆ ಸೂಚ್ಯಂಕದಲ್ಲಿ 162 ದೇಶಗಳ ಪೈಕಿ 122 ಸ್ಥಾನದಲ್ಲಿದೆ. ಭಾರತದಲ್ಲಿ ಪುರುಷ ಮತ್ತು ಸ್ತ್ರೀ ನಡುವೆ ಅಸಮಾನತೆಗಳು ಹೆಚ್ಚಿವೆ. ಇದು ಪರೋಕ್ಷವಾಗಿ ಮಹಿಳೆಯರು ಸಶಕ್ತ¤ಗೊಳ್ಳಲು ಸಮಸ್ಯೆಯಾಗುತ್ತಿದೆ ಎಂದು ವರದಿ ಹೇಳಿದೆ.
In India, between 1990 and 2018, #HDR2019 finds:
�?�?Life expectancy at birth ⬆ by 11.6 years
�?Expected years of schooling ⬆by 4.7 years
�?Per capita incomes rose by over 250%More: https://t.co/LD65nZJfwD#BeyondIncome #BridgeTheGap pic.twitter.com/0qdyC75vaJ
— UNDP India (@UNDP_India) December 9, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.