ಪರಿಸರ ರಕ್ಷಣೆಗೆ ಭಾರತ ಬದ್ಧ
Team Udayavani, Aug 27, 2019, 5:25 AM IST
ಬಿಯಾರಿಜ್: ಹವಾಮಾನ ವೈಪರೀತ್ಯ ತಡೆ ಹಾಗೂ ಪರಿಸರ ರಕ್ಷಣೆಗಾಗಿ ಭಾರತ ಕೈಗೊಂಡ ಹಲವು ಕ್ರಮಗಳನ್ನು ಜಿ7 ಶೃಂಗದಲ್ಲಿ ಪ್ರಧಾನಿ ಮೋದಿ ಉಲ್ಲೇಖೀಸಿದ್ದಾರೆ. ಜಿ7 ಶೃಂಗದ ಪರಿಸರದ ಮೇಲಿನ ಸಮ್ಮೇಳನದಲ್ಲಿ ಮಾತನಾಡಿದ ಅವರು, ಒಮ್ಮೆಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ನಿರ್ಮೂಲನೆ, ಜಲ ಸಂರಕ್ಷಣೆ, ಸೌರಶಕ್ತಿಯ ಬಳಕೆ ಮತ್ತು ಪಶುಪಕ್ಷಿಗಳ ರಕ್ಷಣೆ ಕುರಿತ ಭಾರತ ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಫ್ರಾನ್ಸ್‌ನ ಬಿಯಾರೆಜ್‌ನಲ್ಲಿ ನಡೆದ ಜಿ7 ಶೃಂಗಕ್ಕೆ ಫ್ರಾನ್ಸ್ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರನ್‌ರವರ ವಿಶೇಷ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ತೆರಳಿದ್ದು, ಅಲ್ಲಿ ಜೈವಿಕ ವೈವಿಧ್ಯ, ಸಮುದ್ರ, ಪರಿಸರ ಕುರಿತು ಮಾತನಾಡಿದರು. ಕಳೆದ ವಾರ ಪ್ಯಾರಿಸ್‌ನಲ್ಲಿ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದಾಗ 2030ಕ್ಕೆ ನಿಗದಿಸಲಾಗಿರುವ ಬಹುತೇಕ ಹವಾಮಾನ ವೈಪರೀತ್ಯ ಗುರಿಗಳನ್ನು ಮುಂದಿನ ಒಂದೂವರೆ ವರ್ಷದಲ್ಲಿ ಪೂರೈಸುವುದಾಗಿ ಹೇಳಿದ್ದರು. ಅಲ್ಲದೆ, ಒಮ್ಮೆಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ನಿಯಂತ್ರಣಕ್ಕೆ ಪಣತೊಟ್ಟಿದ್ದರು. ಈ ಎಲ್ಲ ವಿಚಾರಗಳನ್ನೂ ಮೋದಿ ಜಿ7 ಶೃಂಗದಲ್ಲಿ ಪುನರುಚ್ಚರಿಸಿದ್ದು, ಹವಾಮಾನ ವೈಪರೀತ್ಯ ಕುರಿತ ದೇಶದ ನಿಲುವಿನಲ್ಲಿ ಬದ್ಧತೆ ಪ್ರದರ್ಶಿಸಿದರು.
ಈ ಮಧ್ಯೆ ಇದೇ ಸಂವಾದದಲ್ಲಿ ಅಮೆಜಾನ್ ಕಾಡ್ಗಿಚ್ಚು ಹಾಗೂ ಇಂಗಾಲ ಹೊರಸೂಸುವಿಕೆ ತಗ್ಗಿಸುವ ಕುರಿತ ಚರ್ಚೆ ಪ್ರಮುಖವಾಗಿ ನಡೆದಿದೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದರಲ್ಲಿ ಭಾಗವಹಿಸಲಿಲ್ಲ. ಟ್ರಂಪ್ ಬದಲಿಗೆ ಅವರ ಪ್ರತಿನಿಧಿ ಭಾಗವಹಿಸಿದ್ದಾರೆ ಎಂದು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಹೇಳಿದರು.
ಡಿಜಿಟಲ್ ರೂಪಾಂತರ: ಇದೇ ವೇಳೆ ಡಿಜಿಟಲ್ ರೂಪಾಂತರದ ಸಂವಾದದಲ್ಲೂ ಮಾತನಾಡಿದ ಮೋದಿ, ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಲು ಡಿಜಿಟಲ್ ತಂತ್ರಜ್ಞಾನವನ್ನು ಭಾರತ ಬಳಸಿಕೊಳ್ಳುತ್ತಿರುವ ಬಗ್ಗೆ ವಿವರಿಸಿದರು. ಸೆನೆಗಲ್, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ಮುಖಂಡರ ಜೊತೆಗೂ ಪ್ರಧಾನಿ ಮಾತುಕತೆ ನಡೆಸಿದ್ದು, ಉಭಯ ದೇಶಗಳ ವ್ಯಾಪಾರ ವಹಿವಾಟು ಹಾಗೂ ಸಂಬಂಧ ಸುಧಾರಣೆ ಕುರಿತು ಚರ್ಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.