PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ
ಮೋದಿಗೆ ನೈಜೀರಿಯಾದ 2ನೇ ಅತ್ಯುನ್ನತ ಗೌರವ
Team Udayavani, Nov 17, 2024, 11:47 PM IST
ಅಬುಜಾ: “ವಿಶ್ವದಲ್ಲಿ ಎಲ್ಲೇ ಸಮಸ್ಯೆ ಕಾಣಿಸಿ ಕೊಂಡರೂ ಅವರು ಮೊದಲು ಭಾರತದತ್ತ ನೋಡು ತ್ತಾರೆ. ಏಕೆಂದರೆ ಎಲ್ಲ ಸಮಸ್ಯೆಗಳಿಗೂ ಭಾರತವೇ ಮೊದಲು ಸ್ಪಂದಿಸುವ ರಾಷ್ಟ್ರವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ಹೇಳಿದ್ದಾರೆ.
ನೈಜೀರಿಯಾ ಪ್ರವಾಸದಲ್ಲಿರುವ ಮೋದಿ, ಅಲ್ಲಿನ ಭಾರತೀಯ ಸಮುದಾಯದವರನ್ನುದ್ದೇಶಿಸಿ ರವಿವಾರ ಭಾಷಣ ಮಾಡಿದರು. “ಸನ್ನು ನೈಜೀರಿಯಾ’ (ನಮಸ್ತೆ) ಎಂದು ಭಾಷಣ ಆರಂಭಿಸಿದ ಅವರು, ಇತ್ತೀಚಿನ ವರ್ಷಗಳಲ್ಲಿ ಭಾರತ ಸಾಧಿಸಿರುವ ಅಭಿವೃದ್ಧಿ ಮತ್ತು ಭಾರತ ಹಾಗೂ ಆಫ್ರಿಕಾ ದೇಶಗಳ ನಡುವಿನ ಸಂಬಂಧದ ಬಗ್ಗೆ ಮಾತನಾಡಿದರು.
ಆಫ್ರಿಕಾದ ರಾಷ್ಟ್ರಗಳಿಗೆ ಜಾಗತಿಕ ಮನ್ನಣೆ ದೊರಕಿಸಿ ಕೊಡುವಲ್ಲಿ ಭಾರತದ ಪಾತ್ರ ದೊಡ್ಡದಿದೆ. ಭಾರತ ಅಭಿವೃದ್ಧಿ, ಶಾಂತಿ, ಸಮೃದ್ಧಿ ಮತ್ತು ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿ ಸಾಧಿಸಿದೆ. ಹೀಗಾಗಿಯೇ ಇಡೀ ವಿಶ್ವ ಈಗ ಭಾರತದತ್ತ ದೃಷ್ಟಿ ನೆಟ್ಟಿದೆ.
ವಿಶ್ವದ ರಾಷ್ಟ್ರಗಳಿಗೆ ಭಾರತ ಈಗ ಹೊಸ ದಾರಿಯನ್ನು ಸೃಷ್ಟಿಸಿಕೊಡುತ್ತಿದೆ ಎಂದು ಅವರು ಹೇಳಿದರು.
ವಿಶ್ವವೇ ಒಂದು ಕುಟುಂಬ: ಇಡೀ ಜಗತ್ತೇ ಒಂದು ಕುಟುಂಬ ಎನ್ನುವ ರೀತಿಯಲ್ಲಿ ಭಾರತ ನಡೆದು ಕೊಳ್ಳುತ್ತಿದ್ದು, ಇದನ್ನು ಜಿ20 ಶೃಂಗಸಭೆಗೆ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಮಯದಲ್ಲಿ ಭಾರತ ನಿರೂಪಿಸಿದೆ ಎಂದು ಅವರು ಹೇಳಿದರು.
ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾ ಡುವ ಮೊದಲು ನೈಜಿರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಕೃಷಿ, ಸಾರಿಗೆ, ಔಷಧ, ಮರುಬಳಕೆ ಇಂಧನ ಮತ್ತು ಡಿಜಿಟಲ್ ಪರಿವರ್ತನೆಗೆ ಸಹಕಾರ ನೀಡುವುದಾಗಿ ಘೋಷಿಸಿದ್ದಾರೆ. ಸೋಮ ವಾರ ಪ್ರಧಾನಿ ಬ್ರೆಜಿಲ್‌ಗೆ ಪ್ರಯಾಣ ಕೈಗೊಳ್ಳಲಿದ್ದಾರೆ. ಬಳಿಕ ನ.19ರಿಂದ ಗಯಾನಕ್ಕೆ ಪ್ರಯಾಣಿಸಲಿದ್ದಾರೆ.
ಮೋದಿಗೆ ನೈಜೀರಿಯಾದ
2ನೇ ಅತ್ಯುನ್ನತ ಗೌರವ
ನೈಜೀರಿಯಾದ 2ನೇ ಅತ್ಯುನ್ನದ ನಾಗರಿಕ ಗೌರವ ಎನಿಸಿಕೊಂಡಿರುವ “ದ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದ ನೈಗರ್’ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ. ಇದರೊಂದಿಗೆ ಮೊದಿ ಅವರು ಈ ಗೌರವ ಸ್ವೀಕರಿಸಿದ 2ನೇ ವಿದೇಶಿ ನಾಯಕ ಎನಿಸಲಿದ್ದಾರೆ.
1969ರಲ್ಲಿ ಬ್ರಿಟನ್ ರಾಣಿ ಎಲಿಜಬೆತ್ ಈ ಪುರಸ್ಕಾರಕ್ಕೆ ಭಾಜನರಾಗಿದ್ದರು. ಈ ಪುರಸ್ಕಾರ ಸ್ವೀಕರಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಯಾವುದೇ ದೇಶದಿಂದ ಮೋದಿ ಅವರಿಗೆ ದೊರೆತ ಅತ್ಯುನ್ನತ ನಾಗರಿಕ ಪ್ರಶಸ್ತಿಗಳ ಸಂಖ್ಯೆ 17ಕ್ಕೇರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.