ಪ್ಯಾಲೆಸ್ತೀನ್ ಶೀಘ್ರ ಸ್ವತಂತ್ರ ದೇಶವಾಗಲಿ
Team Udayavani, Feb 11, 2018, 8:15 AM IST
ರಮಲ್ಲಾ: ಇದೇ ಮೊದಲ ಬಾರಿಗೆ ಪ್ಯಾಲೆಸ್ತೀನ್‌ಗೆ ಭೇಟಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಶನಿವಾರ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಇಲ್ಲಿನ ಅಧ್ಯಕ್ಷ ಮೆಹಮೂದ್ ಅಬ್ಟಾಸ್ ಜತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಮುಂದೊಂದು ದಿನ ಅದು ಸ್ವತಂತ್ರ ಮತ್ತು ಶಾಂತಿಯುತ ರಾಷ್ಟ್ರವಾಗಿ ಉದಯವಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೋದಿಯವರಿಗೆ ಪ್ಯಾಲೆಸ್ತೀನ್‌ನ ಪರಮೋನ್ನತ ನಾಗರಿಕ ಪುರಸ್ಕಾರ “ಗ್ರಾಂಡ್ ಕಾಲರ್ ಆಫ್ ದ ಸ್ಟೇಟ್ ಆಫ್ ಪ್ಯಾಲೆಸ್ತೀನ್’ ಅನ್ನು ಅಧ್ಯಕ್ಷ ಮೆಹಮೂದ್ ಅಬ್ಟಾಸ್ ಪ್ರದಾನ ಮಾಡಿದ್ದಾರೆ. ಅದನ್ನು ವಿನಮ್ರ ಭಾವದಿಂದ ಸ್ವೀಕರಿಸಿದ ಪ್ರಧಾನಿ, “ಈ ಗೌರವ ಭಾರತ ಮತ್ತು ಪ್ಯಾಲೆಸ್ತೀನ್‌ನ ಮಿತ್ರತ್ವಕ್ಕೆ ಸಂದ ಗೌರವ. ನನಗೆ ಈ ಗೌರವ ನೀಡಿದ್ದಕ್ಕಾಗಿ ನನ್ನ ದೇಶದ ಪರವಾಗಿ ಕೃತಜ್ಞತೆ ಸಲ್ಲಿಸುವೆ’ ಎಂದು ತಿಳಿಸಿದ್ದಾರೆ.
ಪ್ಯಾಲೆಸ್ತೀನ್ ಪ್ರಜೆಗಳ ಆಶೋತ್ತರಗಳನ್ನು ಗಮನಿಸುವುದಾಗಿ ವಾಗ್ಧಾನ ನೀಡಿದ್ದಾಗಿ ಹೇಳಿದ ಮೋದಿ, ಈ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಬೇಕು. ಅದಕ್ಕೆ ಮಾತುಕತೆಯೇ ದಾರಿ. ದೂರದೃಷ್ಟಿತ್ವ ಮತ್ತು ಉತ್ತಮ ರಾಜತಾಂತ್ರಿಕತೆ ಮೂಲಕ ಹಿಂದಿನ ಕಹಿ ನೆನಪುಗಳನ್ನು ಮರೆಯಬೇಕು ಎಂದು ಕರೆ ನೀಡಿದ್ದಾರೆ.
ಎರಡೂ ದೇಶಗಳ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ ಅವರು, “ನಮ್ಮ ವಿದೇಶಾಂಗ ನೀತಿಯಲ್ಲಿ ಪ್ಯಾಲೆಸ್ತೀನ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆಯಾ ಸಮಯಕ್ಕೆ ಅನುಗುಣವಾಗಿ ಎರಡೂ ದೇಶಗಳ ನಡುವಿನ ಬಾಂಧವ್ಯ ದೃಢವಾಗುತ್ತಾ ಸಾಗುತ್ತಿದೆ’ ಎಂದಿದ್ದಾರೆ.
ಅಭಿವೃದ್ಧಿಗೆ ನೆರವಾಗಿ: ಪ್ರಧಾನಿ ಮೋದಿಗಿಂತ ಮೊದಲು ಮಾತನಾಡಿದ್ದ ಅಧ್ಯಕ್ಷ ಮೆಹಮೂದ್ ಅಬ್ಟಾಸ್, ಇಲ್ಲಿನ ಶಾಂತಿ ಪ್ರಕ್ರಿಯೆಯಲ್ಲಿ ಭಾರತ ಭಾಗಿಯಾಗಬೇಕೆಂದು ಮನವಿ ಮಾಡಿದ್ದಾರೆ. “ಭಾರತದ ಪ್ರಧಾನಿ ಮೋದಿ ಅವರ ಭೇಟಿ ಚಾರಿತ್ರಿಕವಾದದ್ದು. ಏಕೆಂದರೆ ನಮ್ಮ ದೇಶದ ಪರವಾಗಿಯೇ ಭಾರತದ ನಾಯಕತ್ವ ಬೆಂಬಲ ಸೂಚಿಸಿತ್ತು’ ಎಂದಿದ್ದಾರೆ.
ನ್ಯಾಮ್ ಸದಸ್ಯನಾಗಲಿದೆ: ಅಲಿಪ್ತ ರಾಷ್ಟ್ರಗಳ ಒಕ್ಕೂಟಕ್ಕೆ ಪ್ಯಾಲೆಸ್ತೀನ್ ಸೇರ್ಪಡೆಯಾಗಲಿದೆ ಎಂಬ ಸುಳಿವು ನೀಡಿದ ಅಬ್ಟಾಸ್ ಇಸ್ರೇಲ್ ಜತೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಹೇಳಿದ್ದಾರೆ.
ಅರಾಫತ್ ಮ್ಯೂಸಿಯಂಗೆ ಭೇಟಿ: ಪ್ಯಾಲೆಸ್ತೀನ್‌ಗೆ ಭೇಟಿ ನೀಡಿದ ತಕ್ಷಣ ಪ್ರಧಾನಿ ಮೋದಿ ಅವರು ಮಾಜಿ ಅಧ್ಯಕ್ಷ ದಿ. ಯಾಸರ್ ಅರಾಫತ್ ಅವರ ಸ್ಮಾರಕಕ್ಕೆ ಭೇಟಿ ನೀಡಿ, ಗೌರವ ವಂದನೆ ಸಲ್ಲಿಸಿದರು.
ಸೇನಾ ಕಾಪ್ಟರ್‌ನಲ್ಲಿ ಪ್ರಯಾಣ: ಶುಕ್ರವಾರ ನವದೆಹಲಿಯಿಂದ ಜೋರ್ಡಾನ್‌ಗೆ ಭೇಟಿ ನೀಡಿದ್ದ ಅವರು ಶನಿವಾರ ಸೇನೆಯ ಹೆಲಿಕಾಪ್ಟರ್‌ನಲ್ಲಿ ರಮಲ್ಲಾಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಖುದ್ದಾಗಿ ಅಧ್ಯಕ್ಷ ಅಬ್ಟಾಸ್ ಪ್ರಧಾನಿ ಮೋದಿಯವರನ್ನು ಬರ ಮಾಡಿಕೊಂಡಿದ್ದಾರೆ.
ಆರು ಒಪ್ಪಂದ
ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಅಬ್ಟಾಸ್ ಒಟ್ಟು ಆರು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಮೂರು ಒಪ್ಪಂದಗಳು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವು. ಇದರ ಜತೆಗೆ 1,092 ಕೋಟಿ (30 ಮಿಲಿಯನ್ ಅಮೆರಿಕನ್ ಡಾಲರ್)ರೂ. ವೆಚ್ಚದಲ್ಲಿ ಬೇತ್ ಸಾಹೂರ್ ಎಂಬಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.