ಭಾರತ ಆದ್ಯತೆ ರಾಷ್ಟ್ರವಲ್ಲ
ಸೌಲಭ್ಯವನ್ನು ಹಿಂಪಡೆದ ಟ್ರಂಪ್
Team Udayavani, Jun 2, 2019, 6:00 AM IST
ವಾಷಿಂಗ್ಟನ್: ಭಾರತಕ್ಕೆ ಅಮೆರಿಕ ನೀಡಿದ ಆದ್ಯತೆಯ ರಾಷ್ಟ್ರ ಎಂಬ ಪಟ್ಟವನ್ನು ಹಿಂಪಡೆಯಲು ನಿರ್ಧರಿಸಿದ್ದು, ಇದ ರಿಂದಾಗಿ ಅಮೆರಿಕದೊಂದಿಗಿನ ಭಾರತದ ವ್ಯಾಪಾರ ವಹಿ ವಾಟಿನ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಅಮೆರಿಕಕ್ಕೆ ಸದ್ಯ ರಫ್ತಾಗುವ ಸ್ಟೀಲ್, ಪೀಠೊ ಪಕರಣ, ಅಲ್ಯೂಮಿನಿಯಂ ಮತ್ತು ಎಲೆಕ್ಟ್ರಿಕ್ ಸಾಮಗ್ರಿಗಳ ಉತ್ಪಾದನೆಯಲ್ಲಿ ತೊಡಗಿರುವ ಭಾರತೀಯ ಕಂಪನಿಗಳಿಗೆ ಭಾರಿ ಹೊಡೆತ ಬೀಳಲಿದೆ.
ಅಷ್ಟೇ ಅಲ್ಲ, ಈ ಕ್ಷೇತ್ರದಲ್ಲಿ ಭಾರತದ ಸ್ಪರ್ಧಾತ್ಮಕತೆಗೂ ಹೊಡೆತ ಬೀಳಲಿದೆ. ಜಿಎಸ್‌ಪಿ (ಜನರಲೈಸ್ಡ್ ಸಿಸ್ಟಂ ಆಫ್ ಪ್ರಿಫರೆನ್ಸಸ್) ಎಂದು ಈ ಯೋಜನೆಯನ್ನು ಕರೆಯಲಾಗಿ ದ್ದು, ಇದರ ಅಡಿಯಲ್ಲಿ ಸುಮಾರು 3 ಸಾವಿರ ಸಾಮಗ್ರಿಗಳನ್ನು ತೆರಿಗೆ ಇಲ್ಲದೇ ಅಮೆರಿಕ ಆಮದು ಮಾಡಿಕೊಳ್ಳುತ್ತದೆ.
ಜೂನ್ 5 ರಿಂದ ಜಾರಿಗೆ ಬರುವಂತೆ ಈ ಸೌಲಭ್ಯವನ್ನು ಹಿಂಪಡೆಯಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಈ ಬಗ್ಗೆ ಭಾರತ ತನ್ನ ಆಕ್ಷೇಪಣೆಯನ್ನು ಸಲ್ಲಿಸಿದೆಯಾದರೂ, ಅಮೆರಿಕ ಇದನ್ನು ಮನ್ನಿಸಿಲ್ಲ. 1976 ರಿಂದಲೂ ಈ ಯೋಜನೆ ಚಾಲ್ತಿಯಲ್ಲಿದ್ದು, ಹಲವು ಬಾರಿ ಇದರ ರದ್ದತಿ ಪ್ರಸ್ತಾವ ಬಂದಿತ್ತು. ಆದರೆ, ಮಾತುಕತೆಯ ಬಳಿಕ ಇದಕ್ಕೆ ಪರಿಹಾರ ಕಂಡುಕೊಂಡು, ಸೌಲಭ್ಯವನ್ನು ಮುಂದುವರಿಸಲಾಗಿತ್ತು. ಆದರೆ ಈಗ ಟ್ರಂಪ್ ಅಧಿಕಾರಕ್ಕೆ ಬಂದ ನಂತರ, ಅಮೆರಿಕ ಫರ್ಸ್ಡ್ ಎಂಬ ನೀತಿಯನ್ನು ಅಳವಡಿಸಿಕೊಂಡಿದ್ದು, ಆಮದು ಹಾಗೂ ರಫ್ತಿನ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುತ್ತಿದ್ದಾರೆ. ಹೀಗಾಗಿ ಈ ಬಾರಿ ವಾಣಿಜ್ಯ ಇಲಾಖೆ ವಿವಿಧ ಪರ್ಯಾಯ ಕ್ರಮಗಳ ಪ್ರಸ್ತಾಪ ಮಾಡಿದ್ದರೂ ಅಮೆರಿಕ ಒಪ್ಪಿಲ್ಲ ಎನ್ನಲಾಗಿದೆ.
ಟ್ರಂಪ್ ಹೇಳಿದ್ದೇನು?: ಸಮಾನ ಮತ್ತು ಸೂಕ್ತ ಪಾಲುದಾರಿಕೆಯನ್ನು ಅಮೆರಿಕಕ್ಕೆ ತನ್ನ ಮಾರುಕಟ್ಟೆಯಲ್ಲಿ ಭಾರತ ಒದಗಿಸಿಕೊಡುತ್ತಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ಹೀಗಾಗಿ ಜೂನ್ 5 ರಿಂದ ಜಾರಿಯಾಗುವಂತೆ ವಿಶೇಷ ಸೌಲಭ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಜಾರಿಗೆ ಇನ್ನೂ ಇದೆ ಅವಕಾಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Syria ಸರ್ವಾಧಿಕಾರಿ ಬಶರ್ ಅಸಾದ್ ಪತ್ನಿಗೆ ಲ್ಯುಕೇಮಿಯಾ: ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.