ಆಂಗ್ಲರ ಪ್ರಧಾನಿಯ ಹುಟ್ಟೂರು ಭಾರತ
Team Udayavani, Oct 25, 2022, 6:15 AM IST
ಚರ್ಚೆಗಳು ನಡೆಯುತ್ತಿದ್ದಂತೆ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿ ಹುದ್ದೆ ಅಲಂಕರಿಸಲು ಸಿದ್ಧರಾಗಿದ್ದಾರೆ. ಸುನಕ್ ಅವರ ಮೂಲ ಭಾರತ ಹೌದಾದರೂ ಅವರ ಬಗ್ಗೆ ಹೆಚ್ಚಿನ ಪರಿಚಯ ಇಲ್ಲಿದೆ. ಬ್ರಿಟನ್ ರಾಜಕಾರಣದಲ್ಲಿ ಅವರ ನೆಲೆಗಟ್ಟು ಎಂತದ್ದು ಎಂಬೆಲ್ಲ ಚರ್ಚೆಗಳು ವಿಶ್ವದಾದ್ಯಂತ ನಡೆದಿದೆ. ಅಲ್ಲದೆ ತಮ್ಮ ವಿದ್ಯಾರ್ಥಿ ಜೀವನ ಮತ್ತು ವೃತ್ತಿ ಜೀವನದಲ್ಲಿ ಎದುರಿಸಿದ ಸವಾಲುಗಳು ಇಲ್ಲಿವೆ.
ಸುನಕ್ ಭಾರತೀಯ ಮೂಲದವರು. ಅವರ ಅಜ್ಜಿ- ಅಜ್ಜಂದಿರು ಪಂಜಾಬ್‌ನಿಂದ ಪೂರ್ವ ಆಫ್ರಿಕಾಕ್ಕೆ ವಲಸೆ ಹೋದರು. ಆಫ್ರಿಕಾದ ಕೀನ್ಯಾದಲ್ಲಿ ಅವರ ತಂದೆ ಯಶ್‌ವೀರ್ ಸುನಕ್ ಜನಿಸಿದರು. 1960ರ ದಶಕದಲ್ಲಿ ಆಫ್ರಿಕಾದಿಂದ ದಕ್ಷಿಣ ಇಂಗ್ಲೆಂಡ್‌ನ ಸೌತಾಂಪ್ಟನ್‌ಗೆ ಯಶ್‌ವೀರ್ ವಲಸೆ ಬಂದಿದ್ದರು. ಅಲ್ಲಿ ಯಶ್‌ವೀರ್ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ವೈದ್ಯರಾಗಿ ವೃತ್ತಿ ಆರಂಭಿಸಿದರು. ಆ ವೇಳೆಗಾಗಲೇ ಸೌತಾಂಪ್ಟನ್‌ಗೆ ಆಗಮಿಸಿದ್ದ ಉಷಾ ಸಣ್ಣ ಔಷಧಾಲಯ ನಡೆಸುತ್ತಿದ್ದರು. ಅಲ್ಲಿ ಅವರ ಪರಿಚಯವಾಗಿ ವಿವಾಹವಾದರು. ಅವರಿಗೆ 1980 ಮೇ 12ರಂದು ಜನಿಸಿದ ಪುತ್ರನೇ ರಿಷಿ ಸುನಕ್.
ಸುನಕ್ ಪ್ರಾಥಮಿಕ ಹಂತ: ಇಂಗ್ಲೆಂಡಿಗೆ ಬಂದು ನೆಲೆನಿಂತ ರಿಷಿ ಸುನಕ್ ಪೋಷಕರ ಜೀವನ ನಿರ್ವಹಣೆ ಸುಲಭ ಸಾಧ್ಯವಾಗಿರ ಲಿಲ್ಲ. ಈ ವೇಳೆಯಲ್ಲಿಯೂ ಅವರು ತನ್ನ ಮಗನ ವಿದ್ಯಾಭ್ಯಾಸ ಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದಾರೆ. ಇದರ ಫಲವಾಗಿ ರಿಷಿ ವಿಂಚೆಸ್ಟರ್ ಕಾಲೇಜಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದರು. ಸ್ಟಾನ್ ಫೋರ್ಡ್ ವಿವಿಯಲ್ಲಿ ಎಂಬಿಎ ಪದವಿ, 2001ರಲ್ಲಿ ಆಕ್ಸ್ ಫರ್ಡ್ ವಿವಿಯಲ್ಲಿ ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಮತ್ತು ಅರ್ಥಶಾಸ್ತ್ರ ಅಧ್ಯಯನ ಪೂರೈಸಿದರು. 2001ರಿಂದ 2004ರ ವರೆಗೆ ಹೂಡಿಕೆ ಬ್ಯಾಂಕಿಂಗ್ ಕಂಪೆನಿಯೊಂದರಲ್ಲಿ ಸೇವೆ ಸಲ್ಲಿಸಿದರು.
“ನಾನು ಶಾಲೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕನಾಗಿದ್ದೆ. ಬಳಿಕ ಕಾಲೇಜಿನಲ್ಲಿ ಯೂತ್ ಕ್ಲಬ್ ಆಡಳಿತ ಮಂಡಳಿ ಸದಸ್ಯರನಾಗಿದ್ದೆ. ಹೊಸ ಆಡಳಿತಾತ್ಮಕ ಅವಕಾಶಗಳನ್ನು ಸದ್ಬಳಕೆ ಮಾಡಿ ಕೊಂಡ ಫಲವಾಗಿ ನಾಯಕತ್ವ ಗುಣ ಬೆಳೆ ಯಿತು’ ಎಂದು ಬ್ರಿಟನ್ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಹಿಂದೊಮ್ಮೆ ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದರು.
ರಾಜಕೀಯ ಪ್ರವೇಶ ಹೇಗಾ ಯಿತು?: 2010ರಲ್ಲಿಯೇ ಅವರು ಕನ್ಸರ್ವೇಟಿವ್ ಪಕ್ಷದ ಸದಸ್ಯರಾಗಿ ಸೇರ್ಪಡೆಯಾಗಿದ್ದರು. ಬೆಕ್ಸಿಟ್‌ನ ಬೆಂಬಲಿಗರಾಗಿರುವ ರಿಷಿ ಸುನಕ್ ಅವರು ಕನ್ಸರ್ವೇಟಿವ್ ಪಕ್ಷದಿಂದ ಬ್ರಿಟನ್‌ನ ರಿಚ್‌ಮಂಡ್, ಯಾರ್ಕ್‌ಶೈರ್‌ನ ಸಂಸತ್ ಸದಸ್ಯರಾಗಿ 2015ರಾಗಿ ಆಯ್ಕೆಯಾದರು. ಥೆರೆಸಾ ಮೇ ನೇತೃತ್ವದ ಸರಕಾರದಲ್ಲಿ ಅವರು ಸಹಾಯಕ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2019ರಲ್ಲಿ ಬೋರಿಸ್ ಜಾನ್ಸನ್ ಅವರನ್ನು ಟೋರಿ ಸಮಿತಿಯ ಸದಸ್ಯರಾಗಿ ಪ್ರಧಾನಿ ಹುದ್ದೆಗೆ ಬೆಂಬಲಿಸಿದ್ದರು. ಹೀಗಾಗಿಯೇ ಅವರಿಗೆ 2020ರ ಫೆಬ್ರವರಿಯಲ್ಲಿ ವಿತ್ತ ಖಾತೆಯ ಸಚಿವರಾಗಿ ನೇಮಕಗೊಂಡರು.
ಕೊರೊನಾಗೆ ರಿಷಿ ಸುನಕ್ ಸೆಡ್ಡು: ಕೊರೊನಾ ಸಂದರ್ಭದಲ್ಲಿ ಜಾಗತಿಕ ಅನಾರೋಗ್ಯ ಒಂದೆಡೆಯಾದರೆ ಆರ್ಥಿಕವಲಯದಲ್ಲಿ ಆದ ತಲ್ಲಣಗಳು ಬ್ರಿಟನ್ ಸರಕಾರಕ್ಕೆ ಅನೇಕ ಸವಾಲುಗಳನ್ನು ತಂದೊಡ್ಡಿದವು. ಬ್ರಿಟಿಷ್ ಅಧಿಕಾರಿಗಳು, ರಾಜ ಮನೆತನ ಸಿಬಂದಿ ಯನ್ನು ಆವರಿಸಿತು. ಅನೇಕ ಕಷ್ಟ-ನಷ್ಟಗಳು ಎದುರಾದವು.
ಈ ವೇಳೆಯಲ್ಲಿ ರಿಷಿ ಸುನಕ್ ದೇಶದ ಆರ್ಥಿಕ ಭದ್ರತೆಗಾಗಿ ಶ್ರಮಿಸಿದರು. ಆರ್ಥಿಕ ನೆರವು ನೀಡಬಲ್ಲ ಕಾರ್ಯಕ್ರಮಗಳನ್ನು ಸೃಜಿಸಿದರು. ತುರ್ತು ನಿಧಿಯಲ್ಲಿ ಕೊರೊನಾ ನಿರ್ವಹಣೆಗೆ 400 ಶತಕೋಟಿ ಡಾಲರ್ ಹಣವನ್ನು ಮೀಸಲಿಟ್ಟರು. ಲಾಕ್‌ಡೌನ್ ಹೊರೆ ತಪ್ಪಿಸಲು ಕಂಪೆನಿಗಳಿಗೆ ಆರ್ಥಿಕ ನೆರವನ್ನು ಘೋಷಿಸಿದರು. ಉದ್ಯೋಗಿಗಳಿಗೆ ಸಂಬಳದ ಸಬ್ಸಿಡಿಗಳ ಭರವಸೆ ನೀಡಿದರು. ಸುನಕ್ ಅವರ ಈಟ್ ಔಟ್‌ಟು ಹೆಲ್ಪ್ ಔಟ್ ಯೋಜನೆ ರೆಸ್ಟೊರೆಂಟ್ ಮತ್ತು ಪಬ್‌ಗಳ ಭದ್ರತೆಗೆ ಕಾರಣವಾಯಿತು. ಈ ಎಲ್ಲ ಕಾರ್ಯಕ್ರಮಗಳು ಬ್ರಿಟನ್‌ನಲ್ಲಿ ಸುನಕ್ ಪ್ರಸಿದ್ಧಿಗೆ ಕಾರಣವಾ ಯಿತು. ಸಾಮಾಜಿಕ ಮಾಧ್ಯಮದಲ್ಲಿ ಡಿಶಿ ರಿಷಿ-2020, ಬ್ರಿಟನ್ ಸೆಕ್ಸಿಯಸ್ಟ್ ಎಂಪಿ ಎಂಬೆಲ್ಲ ಮಾತುಗಳು ಕೇಳಿ ಬಂದವು.
ರಾಜಕೀಯ ಜೀವನ
– 2010ರಲ್ಲಿ ಸುನಕ್ ಕನ್ಸರ್ವೇಟಿವ್ ಪಕ್ಷಕ್ಕಾಗಿ ಕಾರ್ಯನಿರ್ವಹಣೆ
– 2014ರಲ್ಲಿ ಕಪ್ಪು ಮತ್ತು ಅಲ್ಪಸಂಖ್ಯಾಕರ ಜನಾಂಗೀಯ(ಬಿಎಂಇ) ಸಂಶೋಧನ ಘಟಕದ ಮುಖ್ಯಸ್ಥರಾದರು.
– 2014-15ರಲ್ಲಿ ಸಾರ್ವತ್ರಿಕ ಚುನಾವಣೆ ಹೌಸ್‌ಆಫ್ ಕಾಮನ್ಸ್‌ನಲ್ಲಿ ನಾರ್ತ್ ಯಾರ್ಕ್‌ಷೈರ್ – ರಿಚ್‌ಮಂಡ್(ಯಾರ್ಕ್ಸ್) ಅನ್ನು ಪ್ರತಿನಿಧಿಸುವ ಹೌಸ್ ಆಫ್ ಕಾಮನ್ಸ್‌ಗೆ ಕನ್ಸರ್ವೇಟಿವ್ ಅಭ್ಯರ್ಥಿಯಾಗಿ ಆಯ್ಕೆ ಮತ್ತು ಕಮಾಂಡಿಂಗ್‌ಗೆ ಬಹುಮತದಿಂದ ಆಯ್ಕೆ
– 2015-17ರವರೆಗೆ ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಆಯ್ಕೆ ಸಮಿತಿ ಸದಸ್ಯರಾಗಿದ್ದರು ಮತ್ತು ವ್ಯಾಪಾರ- ಇಂಧನ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಸಂಸದೀಯ ಖಾಸಗಿ ಕಾರ್ಯದರ್ಶಿಯಾಗಿದ್ದರು.
– 2017-18ರಲ್ಲಿ ಸಂಸತ್ತಿಗೆ ಸುನಕ್ ಮರು ಆಯ್ಕೆ
– 2018ರಲ್ಲಿ ಕ್ಯಾಬಿನೆಟ್ ಶೇಕಾಫ್ನಲ್ಲಿ ಥೆರೆಸಾ ಮೇ ಅವರ 2ನೇ ಆಡಳಿತದಲ್ಲಿ ಸ್ಥಳೀಯ ಸರಕಾರದ ಸಂಸದೀಯ ಅಧೀನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
– 2018ರಲ್ಲಿಯೇ ವಸತಿ, ಸಮುದಾಯ, ಸ್ಥಳೀಯ ಸರಕಾರಗಳ ಸಚಿವಾಲಯದಲ್ಲಿ ರಾಜ್ಯ ಅಧೀನ ಕಾರ್ಯದರ್ಶಿಯಾಗಿ ತಮ್ಮ ಮೊದಲ ಮಂತ್ರಿ ಹುದ್ದೆ ಅಲಂಕರಿಸಿದರು.
– 2018-19 ರಿಷಿ ಅವರು ಥೆರೆಸಾ ಮೇ ಅವರ ಬ್ರೆಕ್ಸಿಟ್ ವಾಪಸಾತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೇ ಪರವಾರಿ ಮೂರು ಮತ ಚಲಾಯಿಸಿದರು.
– 2019ರಲ್ಲಿ ಥೆರೆಸಾ ಮೇ ಅವರ ಬಳಿಕ ಕನ್ಸರ್ವೆಟೀವ್ ಪಕ್ಷದಲ್ಲಿ ಬೋರಿಸ್ ಜಾನ್ಸನ್ ಪ್ರಧಾನಿಯಾದರು. ಈ ಅವಧಿಯಲ್ಲಿ ಸುನಕ್ ಬ್ರಿಟನ್ ವಿತ್ತ ಸಚಿವರಾಗಿ ನೇಮಕಗೊಂಡರು.
-2020ರಲ್ಲಿ ಬ್ರಿಟನ್ ವಿತ್ತ ಸಚಿವರಾಗಿ ನೇಮಕ. (ಆಗ ಅವರಿಗೆ 39 ವರ್ಷಕ್ಕೆ ಚಾನ್ಸಲರ್ ಆದ ನಾಲ್ಕನೇ ವ್ಯಕ್ತಿ ಸುನಕ್) ರಿಷಿ ಸುನಕ್ ಬಯಾಗ್ರಫಿ
ಜನನ: ಮೇ. 12. 1980
ವಯಸ್ಸು: 42
ತಂದೆ: ಯಶ್‌ವೀರ್ ಸುನಕ್
ತಾಯಿ: ಉಷಾ ಸುನಕ್
ಪತ್ನಿ: ಅಕ್ಷತಾ ಮೂರ್ತಿ
ಮಕ್ಕಳು: ಅನುಷ್ಕಾ, ಕೃಷ್ಣಾ
ವಿದ್ಯಾಭ್ಯಾಸ: ವಿಂಚೆಸ್ಟರ್ ಕಾಲೇಜಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಸ್ಟಾನ್ ಫೋರ್ಡ್ ವಿವಿಯಲ್ಲಿ ಎಂಬಿಎ ಪದವಿ, ಆಕ್ಸ್ ಫರ್ಡ್ ವಿವಿಯಲ್ಲಿ ತತ್ವಶಾಸ್ತ್ರ, ರಾಜ್ಯಶಾಸ್ತ್ರ, ಮತ್ತು ಅರ್ಥಶಾಸ್ತ್ರ ಅಧ್ಯಯನ
ಅನುಭವ: ರಾಜಕಾರಣಿ, ವ್ಯಾಪರಸ್ಥ, ಹೂಡಿಕೆ ತಜ್ಞ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.