ಪಾಕ್ ವಿರುದ್ಧ ಯುದ್ದದಲ್ಲಿ ಭಾರತ ಗೆಲ್ಲಬಹುದು ಆದರೆ ಪರಿಣಾಮ ಎದುರಿಸಬೇಕಾಗುತ್ತದೆ
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೊಸ ವರಸೆ
Team Udayavani, Sep 15, 2019, 8:33 AM IST
ಇಸ್ಲಮಾಬಾದ್: ಪದೇ ಪದೇ ಯುದ್ಧದ ಬಗ್ಗೆ ಮಾತನಾಡುತ್ತಿರುವ ಪಾಕಿಸ್ಥಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮತ್ತೆ ಯುದ್ದೋನ್ಮಾದದಲ್ಲಿದ್ದಾರೆ. ಅದರಲ್ಲೂ ಪರಮಾಣು ಯುದ್ದದ ಬಗ್ಗೆ ತೀವ್ರ ಆಸಕ್ತಿ ತೋರ್ಪಡಿಸುತ್ತಿರುವ ಇಮ್ರಾನ್, ಭಾರತದೆದುರು ಯುದ್ಧವಾದರೆ ಪಾಕಿಸ್ಥಾನ ಬಹುಶಃ ಸೋಲಬಹುದು. ಆದರೆ ಭಾರತ ಅದರ ಪರಿಣಾಮ ಎದರುರಿಸಬೇಕಾಗುತ್ತದೆ ಎಂದಿದ್ದಾರೆ.
ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, ಜಮ್ಮು ಕಾಶ್ಮೀರದಲ್ಲಿ ಅನುಚ್ಛೇಧ 370ನ್ನು ರದ್ದುಗೊಳಿಸಿರುವುದು ಭಾರತದ ‘ಅಕ್ರಮ ಸ್ವಾಧೀನ’ ಎಂದು ಬಣ್ಣಿಸಿದ್ದಾರೆ.
ಭಾರತದ ವಿರುದ್ಧ ಪರಮಾಣು ಯುದ್ದದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಇಮ್ರಾನ್, “ ನಾನು ಹಿಂದೆ ಏನು ಹೇಳಿದ್ದೆ ಅದೇ ಮಾತಿಗೆ ಬದ್ಧನಾಗಿದ್ದೇನೆ. ಅದರಲ್ಲಿ ಯಾವ ಸಂದೇಹವೂ ಇಲ್ಲ. ನಾವು ಮೊದಲು ಪರಮಾಣು ಅಸ್ತ್ರ ಉಪಯೋಗಿಸುವುದಿಲ್ಲ. ನನಗೆ ಯುದ್ದದಲ್ಲಿ ಆಸಕ್ತಿ ಇಲ್ಲ. ಯುದ್ಧದಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂದು ನಾನು ನಂಬುವುದಿಲ್ಲ. ವಿಯೆಟ್ನಾಮ್, ಇರಾಖ್ ನಲ್ಲಿ ನಡೆದ ಯುದ್ಧಗಳನ್ನು ಗಮನಿಸಿದರೆ ಯಾವ ಕಾರಣಗಳಿಗಾಗಿ ಯುದ್ಧವಾಗಿತ್ತೋ ಅದಕ್ಕಿಂತ ಹೆಚ್ಚಿನ ಸಮಸ್ಯೆಗಳು ಯುದ್ದದಿಂದ ಸೃಷ್ಟಿಯಾಗಿದೆ ಎಂದರು.
ಎರಡು ಪರಮಾಣು ಬಾಂಬ್ ಹೊಂದಿದ ದೇಶಗಳು ಸಾಂಪ್ರದಾಯಿಕ ಯುದ್ದ ಆರಂಭಿಸಿದರೂ ಅದು ಅಣು ಯುದ್ಧದದಲ್ಲಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚು. ಒಂದು ವೇಳೆ ಯುದ್ಧದಲ್ಲಿ ಪಾಕ್ ಸೋಲುವ ಹಂತಕ್ಕೆ ಬಂದರೆ ಆಗ ನಮ್ಮೆದುರು ಎರಡು ಸಾಧ್ಯತೆಗಳಿರುತ್ತದೆ. ಒಂದು ಶರಣಾಗಬೇಕು ಅಥವಾ ಕೊನೆಯ ಉಸಿರಿರುವರೆಗೆ ಹೋರಾಡಬೇಕು. ನಾವು ಎರಡನೇ ಸಾಧ್ಯತೆಯನ್ನೇ ಪರಿಗಣಿಸುತ್ತೇವೆ. ಅಣ್ವಸ್ತ್ರ ಹೊಂದಿದ ದೇಶ ಸಾಯುವ ಹಂತದಲ್ಲಿ ಹೋರಾಟ ನಡೆಸುವಾಗ ಖಂಡಿತ ಸುಮ್ಮನಿರುವುದಿಲ್ಲ ಎಂದು ಇಮ್ರಾನ್ ಅಣು ಯುದ್ಧದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.