UNGA; ಪಾಕಿಸ್ಥಾನದಿಂದ ಕಾಶ್ಮೀರದ ಕುರಿತು ‘ಆಧಾರರಹಿತ ಮೋಸದ ನಿರೂಪಣೆ: ಭಾರತ ತರಾಟೆ
ಇದರಲ್ಲಿ ಆಶ್ಚರ್ಯವೇನಿಲ್ಲ...
Team Udayavani, Jun 26, 2024, 10:13 AM IST
ವಿಶ್ವಸಂಸ್ಥೆ: ಇಸ್ಲಾಮಾಬಾದ್‌ನ ರಾಯಭಾರಿ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಕಾಶ್ಮೀರದ ಬಗ್ಗೆ ಉಲ್ಲೇಖಿಸಿರುವ ಕುರಿತು ಕೆರಳಿರುವ ಭಾರತ, ”ಪಾಕಿಸ್ಥಾನ ಆಧಾರ ರಹಿತ ಮತ್ತು ವಂಚನೆಯ ನಿರೂಪಣೆ ಮಾಡಿದೆ” ಎಂದು ತರಾಟೆಗೆ ತೆಗೆದುಕೊಂಡಿದೆ.
ಪಾಕಿಸ್ಥಾನದ ಯುಎನ್ ರಾಯಭಾರಿ ಮುನೀರ್ ಅಕ್ರಂ ಚರ್ಚೆಯ ಸಂದರ್ಭದಲ್ಲಿ ಜನರಲ್ ಅಸೆಂಬ್ಲಿ ವೇದಿಕೆಯಲ್ಲಿ ಕಾಶ್ಮೀರದ ಬಗ್ಗೆ ಉಲ್ಲೇಖಗಳನ್ನು ಮಾಡಿದ ನಂತರ ಈ ಪ್ರತ್ಯುತ್ತರ ನೀಡಲಾಗಿದೆ.
ಯುಎನ್ ಭಾರತದ ಖಾಯಂ ಮಿಷನ್‌ನ ಪ್ರತಿನಿಧಿ ಪ್ರತೀಕ್ ಮಾಥುರ್ ಮಂಗಳವಾರ ಪ್ರತಿಕ್ರಿಯಿಸಿ ‘ಒಂದು ನಿಯೋಗವು ಆಧಾರರಹಿತ ಮತ್ತು ಮೋಸದ ನಿರೂಪಣೆಗಳನ್ನು ಹರಡಲು ಈ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದು, ಇದರಲ್ಲಿ ಆಶ್ಚರ್ಯವೇನಿಲ್ಲ”ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಾರ್ಷಿಕ ವರದಿಯ ಮೇಲಿನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚರ್ಚೆಯಲ್ಲಿ ಮಾಥುರ್ ಭಾರತದ ಹೇಳಿಕೆಯನ್ನು ನೀಡುವ ವೇಳೆ “ನಾನು ಈ ಹೇಳಿಕೆಗಳನ್ನು ಯಾವುದೇ ಪ್ರತಿಕ್ರಿಯೆಯೊಂದಿಗೆ ಗೌರವಿಸುವುದಿಲ್ಲ, ಅಮೂಲ್ಯ ಸಮಯವನ್ನು ಉಳಿಸಲು ಬಯಸುತ್ತೇನೆ” ಎಂದು ಪ್ರತೀಕ್ ಮಾಥುರ್ ಹೇಳಿದ್ದಾರೆ.
ಪಾಕಿಸ್ಥಾನ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ವಿವಿಧ UN ವೇದಿಕೆಗಳಲ್ಲಿ ನಿಯಮಿತವಾಗಿ ಪ್ರಸ್ತಾಪಿಸುತ್ತಲೇ ಬಂದಿದೆ. ಚರ್ಚೆಗೊಳಪಡುವ ವಿಷಯ ಅಥವಾ ವೇದಿಕೆಯ ವಿಚಾರವನ್ನು ಲೆಕ್ಕಿಸದೆ ಪ್ರಸ್ತಾಪ ಮಾಡುತ್ತಲೇ ಇದೆ. ಆ ವಿಚಾರದಲ್ಲಿ ಯಾವುದೇ ಬೆಂಬಲವನ್ನು ಪಡೆಯಲು ವಿಫಲವಾಗಿದೆ.
ಭಾರತವು ಈ ಹಿಂದೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ಸಮಸ್ಯೆಯನ್ನು ಎತ್ತುವ ಪಾಕಿಸ್ಥಾನದ ಪ್ರಯತ್ನಗಳನ್ನು ತಿರಸ್ಕರಿಸಿದೆ, “ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗಗಳಾಗಿವೆ ಮತ್ತು ಅವುಗಳು ಯಾವಾಗಲೂ ಭಾರತದೊಂದಿಗೆ ಉಳಿಯುತ್ತವೆ.”ಎಂದು ಬಲವಾಗಿ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.