![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 13, 2019, 8:27 PM IST
ವಿಶ್ವಸಂಸ್ಥೆ: ಪ್ರತಿಯೊಂದು ಅಂತಾರಾಷ್ಟ್ರೀಯ ಭಯೋತ್ಪಾದನಾ ಕೃತ್ಯದ ಹಿಂದೆ ಪಾಕಿಸ್ತಾನದ ಕೈವಾಡವಿರುತ್ತದೆ ಎಂದು ಭಾರತ ಹರಿಹಾಯ್ದಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರ ವಿವಾದ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಪ್ರಸ್ತಾಪಿಸಿ ಹಿನ್ನೆಲೆಯಲ್ಲಿ ವಾಗ್ಧಾಳಿ ನಡೆಸಿರುವ ಭಾರತ, ಪಾಕಿಸ್ತಾನ ಉಗ್ರಗಾಮಿಗಳ ಸ್ವರ್ಗ. ಅಮಾಯಕರ ಜೀವ ತೆಗೆಯುವ ನಿಟ್ಟಿನಲ್ಲಿ ಇಲ್ಲಿ ಉಗ್ರಗಾಮಿಗಳಿಗೆ ನಿರಂತವಾಗಿ ತರಬೇತಿ ನೀಡಲಾಗುತ್ತದೆ. ಅಲ್ಲದೆ, ಪ್ರಪಂಚದ ಯಾವುದೇ ಮೂಲೆಯಲ್ಲಿ ನಡೆಯುವ ಭಯೋತ್ಪಾದನಾ ಕೃತ್ಯದ ಮೂಲ ಪಾಕಿಸ್ತಾನವೇ ಆಗಿರುತ್ತದೆ ಎಂದು ಆರೋಪಿಸಿದೆ.
ಸಾಮಾನ್ಯ ಸಭೆಯಲ್ಲಿ “ಶಾಂತಿಯ ಸಂಸ್ಕೃತಿ’ ಕುರಿತು ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಪ್ರಥಮ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ ಅವರು, ಪಾಕಿಸ್ತಾನದಲ್ಲಿ ಮಕ್ಕಳು, ಯುವಕರ ಕೈಗೆ ಪುಸ್ತಕದ ಬದಲು ಬಂದೂಕು ನೀಡಲಾಗುತ್ತಿದೆ. ಈ ದೇಶದಿಂದ ಹೊರಹೊಮ್ಮುತ್ತಿರುವ ತೀವ್ರ ಸ್ವರೂಪದ ಉಗ್ರವಾದದಿಂದಾಗಿ ಜಾಗತಿಕ ಶಾಂತಿಗೆ ಭಂಗ ಉಂಟಾಗುತ್ತಿದೆ ಎಂದರು.
ಪಾಕಿಸ್ಥಾನ ತನ್ನ ರಾಜಕೀಯ ಲಾಭಕ್ಕಾಗಿ ಭಾರತದ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದೆ ಎಂದ ಪೌಲೋಮಿ, ಪಾಕಿಸ್ತಾನದ ಪಾತಕ ಕೃತ್ಯಗಳನ್ನು ಜಾಗತಿಕ ಸಮುದಾಯ ಗಂಭೀರತವಾಗಿ ಪರಿಗಣಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.