ಭಾರತ-ಶ್ರೀಲಂಕಾ ನಡುವೆ 6 ಒಪ್ಪಂದ; ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಕ್ರಮ

ಉಗ್ರವಾದ, ತೀವ್ರವಾದದ ವಿರುದ್ಧ ಸಂಘಟಿತ ಹೋರಾಟ ಬೇಕು; ಬಿಮ್‌ಸ್ಟೆಕ್‌ ರಾಷ್ಟ್ರಗಳ 18ನೇ ಸಚಿವರ ಸಮ್ಮೇಳನದಲ್ಲಿ ಸಚಿವ ಜೈಶಂಕರ್‌

Team Udayavani, Mar 30, 2022, 8:05 AM IST

ಭಾರತ-ಶ್ರೀಲಂಕಾ ನಡುವೆ 6 ಒಪ್ಪಂದ; ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಕ್ರಮ

ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ಧಿ ನಿಟ್ಟಿನಲ್ಲಿ 6 ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ.

ಶ್ರೀಲಂಕಾ ರಾಜಧಾನಿ ಕೊಲೊಂಬೋದಲ್ಲಿ 18ನೇ ಬಂಗಾಲ ಕೊಲ್ಲಿ ಬಹು ಕ್ಷೇತ್ರೀಯ ತಾಂತ್ರಿಕ ಮತ್ತು ಆರ್ಥಿಕ ಸಹ ಕಾರ ಒಕ್ಕೂಟ (ಬಿಮ್‌ಸ್ಟೆಕ್‌)ರಾಷ್ಟ್ರಗಳ ಸಚಿವರ ಸಭೆಯ ವೇಳೆ ಈ ಒಪ್ಪಂದಗಳು ನಡೆದಿವೆ.

ಮೂರು ದ್ವೀಪಗಳಲ್ಲಿ ಹೈಬ್ರಿಡ್‌ ವಿದ್ಯುತ್‌ ಯೋಜನೆಗಳು, ಮೀನುಗಾರಿಕೆಗೆ ಅನುಕೂಲವಾಗುವಂಥ ಬಂದರುಗಳ ಅಭಿವೃದ್ಧಿ, ಗಾಲೆ ಜಿಲ್ಲೆಯಲ್ಲಿನ 200 ಶಾಲೆಗಳಿಗೆ ಆಧುನಿಕ ಕಂಪ್ಯೂಟರ್‌ ಲ್ಯಾಬ್‌ಗಳು ಮತ್ತು ಪಠ್ಯಕ್ರಮ ಅಭಿವೃದ್ಧಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇದಲ್ಲದೆ ವಿದೇಶಾಂಗ ಸಚಿವಾಲಯ ಭಾಗವೇ ಆಗಿರುವ ಸುಷ್ಮಾ ಸ್ವರಾಜ್‌ ಇನ್‌ಸ್ಟಿಟ್ಯೂಟ್‌ ಆಫ್ ಫಾರಿನ್‌ ಸರ್ವಿಸ್‌ ಮತ್ತು ದ್ವೀಪರಾಷ್ಟ್ರದ ಭಂಡಾರ ನಾಯಕೆ ಇಂಟರ್‌ನ್ಯಾಶನಲ್‌ ಡಿಪ್ಲೊಮ್ಯಾ ಟಿಕ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ ನಡುವೆ ಪ್ರತ್ಯೇಕ ಒಪ್ಪಂದವೂ ನಡೆದಿವೆ. ಭಾರತದ ವಿದೇ ಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜ ಪಕ್ಸ, ಪ್ರಧಾನಿ ಮಹಿಂದಾ ರಾಜಪಕ್ಸ ವಿವಿಧ ಸಚಿವರ ಜತೆಗೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ:ಪಂಜಾಬ್‌: ಅಧಿಕಾರಿಗಳನ್ನು ಒತ್ತೆಯಾಳು ಮಾಡಿಕೊಂಡ ರೈತರು

ಸಂಘಟಿತ ಹೋರಾಟಕ್ಕೆ ಕರೆ: ಉಗ್ರವಾದ, ಹಿಂಸಾತ್ಮಕವಾಗಿರುವ ತೀವ್ರಗಾಮಿತ್ವದ ವಿರುದ್ಧ ಬಿಮೆಸ್ಟೆಕ್‌ ರಾಷ್ಟ್ರಗಳು ಸಂಘಟಿತ ವಾಗಿ ಹೋರಾಟ ನಡೆಸಬೇಕು ಎಂದು ಜೈಶಂಕರ್‌ ಅಭಿಪ್ರಾಯಪಟ್ಟಿದ್ದಾರೆ. ಸಭೆ ಯಲ್ಲಿ ಮಾತನಾಡುತ್ತಾ, ಭಯೋತ್ಪಾದನೆ ಮತ್ತು ತೀವ್ರಗಾಮಿತ್ವವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅದನ್ನು ತಡೆಯಲು ಒಕ್ಕೂ ಟದ ಸದಸ್ಯ ರಾಷ್ಟ್ರಗಳು, ಒಗ್ಗೂಡಿ ದುಡಿಯಬೇಕಾಗಿದೆ ಎಂದಿದ್ದಾರೆ.

ಉಕ್ರೇನ್‌ ಬಿಕ್ಕಟ್ಟಿನ ಕುರಿತು ಪ್ರಸ್ತಾವಿಸಿದ ಅವರು, ಅಂತಾರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವು ದರಲ್ಲಿ ಯಾವುದೇ ರೀತಿ ರಾಜಿ ಮಾಡಿಕೊಳ್ಳಬಾರದು. ಅಂತಾರಾಷ್ಟ್ರೀಯ ವ್ಯವಸ್ಥೆ ಸದ್ಯ ಅತ್ಯಂತ ಸವಾಲಿನ ಸ್ಥಿತಿಯನ್ನು ಎದುರಿಸುತ್ತಿದೆ. ಈಗಷ್ಟೇ ಜಗತ್ತಿನಲ್ಲಿ ಕೊರೊನಾ ಬಿಕ್ಕಟ್ಟು ಕೊನೆಗೊಳ್ಳುತ್ತಿದೆ. ಉಕ್ರೇನ್‌ನಲ್ಲಿ ನಡೆ ಯುತ್ತಿರುವ ಬೆಳವಣಿಗೆ ಗಳು ಅಂತಾ ರಾಷ್ಟ್ರೀಯ ಬಿಕ್ಕಟ್ಟು ಸೃಷ್ಟಿಗೆ ಕಾರಣವಾಗಿದೆ ಎಂದಿದ್ದಾರೆ. ರಾಷ್ಟ್ರಗಳ ನಡುವೆ ಬಹು ಮುಖ್ಯವಾಗಿ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಉತ್ತಮ ರೀತಿಯದ್ದಾಗಿರುವ ಬಾಂಧವ್ಯ ಹೊಂದಿರ ಬೇಕಾದದ್ದೂ ಅಗತ್ಯವೆಂದು ಜೈಶಂಕರ್‌ ಪ್ರತಿಪಾದಿಸಿದ್ದಾರೆ.

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Musk changes Twitter profile to ‘Pepe the Frog’ meme

Pepe the Frog: ಟ್ವೀಟರ್‌ ಪ್ರೊಫೈಲ್‌ ಅನ್ನು “ಪೆಪೆ ದಿ ಫ್ರಾಗ್‌’ ಮೀಮ್‌ಗೆ ಬದಲಿಸಿದ ಮಸ್ಕ್

Indian Workers: ಇಸ್ರೇಲ್‌ ನಲ್ಲಿ ಭಾರತೀಯ ಕಟ್ಟಡ ಕಾರ್ಮಿಕರಿಗೆ ಬೇಡಿಕೆ

Indian Workers: ಇಸ್ರೇಲ್‌ ನಲ್ಲಿ ಭಾರತೀಯ ಕಟ್ಟಡ ಕಾರ್ಮಿಕರಿಗೆ ಬೇಡಿಕೆ

South Korea: ವಿಮಾನ ದುರಂತದಲ್ಲಿ ಬದುಕುಳಿದವನಿಗೆ ಮರೆವು!

South Korea: ವಿಮಾನ ದುರಂತದಲ್ಲಿ ಬದುಕುಳಿದವನಿಗೆ ಮರೆವು!

taliban

Taliban; ಅಫ್ಘಾನ್‌ ಮನೆಗಳಿಗಿನ್ನು ಕಿಟಕಿ ಇರಬಾರದು!

Bangladesh: ಅಲ್ಪಸಂಖ್ಯಾಕರ ರಕ್ಷಿಸಿ: ಡೊನಾಲ್ಡ್‌ ಟ್ರಂಪ್‌ಗೆ ಮನವಿ

Bangladesh: ಅಲ್ಪಸಂಖ್ಯಾಕರ ರಕ್ಷಿಸಿ: ಡೊನಾಲ್ಡ್‌ ಟ್ರಂಪ್‌ಗೆ ಮನವಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.