ರಾಜೀನಾಮೆ ಕೊಡಲಿಲ್ಲ, ಟ್ರಂಪ್ ಬಿಡಲಿಲ್ಲ!
Team Udayavani, Mar 13, 2017, 3:45 AM IST
ವಾಷಿಂಗ್ಟನ್: ಅಮೆರಿಕದ ಪ್ರಖ್ಯಾತ ಪ್ರಾಸಿಕ್ಯೂಟರ್‌ಗಳಲ್ಲಿ ಒಬ್ಬರಾಗಿದ್ದ, ಭಾರತ ಸಂಜಾತ ಪ್ರೀತ್ ಭರಾರಾರನ್ನು ಟ್ರಂಪ್ ಆಡಳಿತ ಅಧಿಕಾರದಿಂದ ಕಿತ್ತುಹಾಕಿದೆ! ಬರಾಕ್ ಒಬಾಮ ಅವಧಿಯಲ್ಲಿ ನೇಮಕವಾದ 49 ಅಟಾರ್ನಿಗಳಿಗೆ ರಾಜಿನಾಮೆ ಸಲ್ಲಿಸುವಂತೆ ಟ್ರಂಪ್ ಆಡಳಿತ ಶನಿವಾರವಷ್ಟೇ ಆದೇಶ ನೀಡಿತ್ತು.
ಆದರೆ ಭರಾರಾ ಮಾತ್ರ ರಾಜಿನಾಮೆ ನೀಡಲು ನಿರಾಕರಿಸಿದ್ದರು. ಈ ಕಾರಣಕ್ಕಾಗಿ ಅವರನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ತಂಡ ವಜಾ ಮಾಡಿದೆ. ಭ್ರಷ್ಟಾಚಾರ ವಿರೋಧಿ ಆಂದೋಲನದಿಂದ ಅಮೆರಿಕದಲ್ಲಿ ಮನೆಮಾತಾಗಿರುವ 48 ವರ್ಷದ ಭರಾರಾ ಅವರ ವಿಚಾರದಲ್ಲಿ ಟ್ರಂಪ್ ಆಡಳಿತ ನಡೆದುಕೊಂಡಿರುವ ರೀತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗತೊಡಗಿದೆ. ಎಲ್ಲರಿಗೂ ಆಶ್ಚರ್ಯ ಹುಟ್ಟಿಸಿರುವ ಅಂಶವೆಂದರೆ ನವೆಂಬರ್ ತಿಂಗಳಲ್ಲಿ , ಅಂದರೆ ಟ್ರಂಪ್ ವಿಜಯ ಸಾಧಿಸಿದಾಗ ಅವರಿಗೆ ಶುಭಾಶಯ ತಿಳಿಸಲು ಪ್ರೀತ್ ಭರಾರಾ ಟ್ರಂಪ್ ಟವರ್‌ಗೆ ಭೇಟಿ ಕೊಟ್ಟಿದ್ದರು. ಆಗ ನಡೆದ ಸಭೆಯಲ್ಲಿ “ನೀವು ನಮ್ಮ ಆಡಳಿತದ ಭಾಗವಾಗಿ ಉಳಿಯಬೇಕು’ ಎಂದು ಖುದ್ದು ಟ್ರಂಪ್ ಅವರೇ ಭರಾರಾಗೆ ಕೇಳಿಕೊಂಡಿದ್ದರಂತೆ!
ಭಾರತೀಯನ ಅಂಗಡಿಗೆ ಬೆಂಕಿ:
ಇನ್ನೊಂದೆಡೆ, ಅಮೆರಿಕದಲ್ಲಿ ಭಾರತೀಯರ ಮೇಲಿನ ಜನಾಂಗೀಯ ದಾಳಿ ಮುಂದುವರಿದೆ. ಫ್ಲೋರಿಡಾದಲ್ಲಿ ಭಾರತೀಯ- ಅಮೆರಿಕನ್ ವ್ಯಕ್ತಿಯ ಮಳಿಗೆಗೆ 64 ವರ್ಷದ ರಿಚರ್ಡ್ ಎಂಬ ವ್ಯಕ್ತಿಯು ಶನಿವಾರ ಬೆಂಕಿ ಹಚ್ಚಿದ್ದಾನೆ. ಅಂಗಡಿಯ ಬಾಗಿಲು ಮುಚ್ಚಿದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್
Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.