ಅಮೆರಿಕ ಸಂಸದೆ ಪ್ರಮೀಳಾ ವಿರುದ್ಧ ಭಾರತೀಯ ಸಮುದಾಯ ಆಕ್ರೋಶ
Team Udayavani, Dec 10, 2019, 10:56 PM IST
ನ್ಯೂಯಾರ್ಕ್: ಅಮೆರಿಕದ ಭಾರತೀಯ ಸಮುದಾಯ, ಡೆಮಾಕ್ರಾಟ್ ಪಕ್ಷದ ಸಂಸದೆ ಪ್ರಮೀಳಾ ಜಯಪಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಜಮ್ಮು-ಕಾಶ್ಮೀರದ ಸಂವಹನ ವ್ಯವಸ್ಥೆ ನಿರ್ಬಂಧ ಸಂಬಂಧ ಭಾರತ ಸರ್ಕಾರದ ವಿರುದ್ಧ, ಅವರು ಅಮೆರಿಕ ಸಂಸತ್ತಿನಲ್ಲಿ ನಿಲುವಳಿ ಮಂಡಿಸಿದ್ದಾರೆ. ಇದರಿಂದ ಅವರಿಗೆ ಮತ ನೀಡಿರುವ ತಮಗೆ ಬಹಳ ನೋವಾಗಿದೆ. ಹೀಗೆ ಮಾಡಬಾರದೆಂದು ಆಗ್ರಹಿಸಿದ್ದರೂ, ಅವರು ನಿಲುವಳಿ ಮಂಡಿಸುವ ಮೂಲಕ ದ್ರೋಹ ಬಗೆದಿದ್ದಾರೆ ಎಂದು ಭಾರತೀಯ ಸಮುದಾಯ ಹೇಳಿಕೊಂಡಿದೆ.
ಕಾಶ್ಮೀರವು ಭಾರತದ ಆಂತರಿಕ ವಿಚಾರ. ಅಮೆರಿಕ ಸಂಸತ್ತಿನಲ್ಲಿ ಆದ ನಿರ್ಣಯಗಳಿಗೆ ತಕ್ಕಂತೆ ಭಾರತವನ್ನು ನಡೆಸಲು ಸಾಧ್ಯವಿಲ್ಲ. ಇಷ್ಟಾದರೂ ಪ್ರಮೀಳಾ ಅದರಲ್ಲಿ ಮಧ್ಯಪ್ರವೇಶಿಸಿದ್ದಾರೆ. ಅವರು ಅಮೆರಿಕ ವಿರೋಧಿ, ಹಿಂದೂ ವಿರೋಧಿ, ಹಾಗೆಯೇ ಭಯೋತ್ಪಾದನೆಯ ಬೆಂಬಲಿಗರಂತೆ ಕಾಣುತ್ತಿದ್ದಾರೆಂದು ವಕೀಲ ರವಿ ಬಾತ್ರಾ ಹೇಳಿದ್ದಾರೆ.
ಪ್ರಮೀಳಾರಂಥ ಎಡಪಂಥೀಯ ವ್ಯಕ್ತಿಗಳಿಂದ ನಮಗೆ ಬೇಸರವಾಗಿದೆ. ನಾವು ಈವರೆಗೆ ಡೆಮಾಕ್ರಾಟ್ ಪಕ್ಷವನ್ನು ಬೆಂಬಲಿಸುತ್ತಿದ್ದೆವು. ಇನ್ನು ರಿಪಬ್ಲಿಕನ್ ಪಕ್ಷ ಬೆಂಬಲಿಸುವ ಬಗ್ಗೆ ಚಿಂತಿಸುತ್ತಿದ್ದೇವೆ ಎಂದು ದೇಬದತ್ತ ದಾಸ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.