ಬಾಲಕ ರಚಿಸಿದ ಸ್ಟೆನ್ಸಿಲ್ ಭಾವಚಿತ್ರಕ್ಕೆ ಪ್ರಧಾನಿಯಿಂದ ಭಾವನಾತ್ಮಕ ಪತ್ರ..!
ಬಾಲಕ ಶರಣ್ ಕಲಾಕೃತಿಗೆ ಪ್ರಧಾನಿಯಿಂದ ಶ್ಲಾಘನೆ
Team Udayavani, Feb 23, 2021, 6:49 PM IST
ದುಬೈ : ದುಬೈನಲ್ಲಿ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ 14 ವರ್ಷದ ಬಾಲಕ ಶರಣ್ ಶಶಿಕುಮಾರ್ ರಚಿಸಿದ ಮೋದಿಯವರ ಸ್ಟೆನ್ಸಿಲ್ ಕಲಾಕೃತಿಗೆ ಪ್ರಧಾನಿ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ.
ತನ್ನ ಸ್ಟೆನ್ಸಿಲ್ ಕಲಾಕೃತಿಯನ್ನು ಕಂಡು ಪ್ರಧಾನಿ ಬಾಲಕನ ಬಗ್ಗೆ ಹರ್ಷ ವ್ಯಕ್ತ ಪಡಿಸಿವುದರೊಂದಿಗೆ ಭಾವನಾತ್ಮಕವಾಗಿ ಧನ್ಯವಾದವನ್ನು ಹೇಳಿದ್ದಾರೆ.
ಓದಿ : ಅಪ್ಪ ಮಗ ಸುಳ್ಳು ಸುದ್ದಿ ಹಬ್ಬಿಸಿ ಅಪಪ್ರಚಾರ ಮಾಡ್ತಿದ್ದಾರೆ : ಶಾಸಕ ಯತ್ನಾಳ್ ವಾಗ್ದಾಳಿ
ಭಾರತೀಯ ಮೂಲದ ದುಬೈ ವಾಸಿ ಶರಣ್ ಶಶಿಕುಮಾರ್ ಗಣರಾಜ್ಯೋತ್ಸವದಂದು ಆರು ಪದರದ ಪ್ರಧಾನಿ ನರೇಂದ್ರ ಮೋದಿಯವರ ಸ್ಟೆನ್ಸಿಲ್ ಕಲಾಕೃತಿ(ಕೊರೆಯಚ್ಚು ಕಲಾಕೃತಿ) ರಚಿಸಿದ್ದರು.
ಶರಣ್ ಶಶಿಕುಮಾರ್ ಭಾರತದ ಕೇರಳ ಮೂಲದವರು. ಜನವರಿಯಲ್ಲಿ ಯುಎಇ ಗೆ ಆಗಮಿಸಿದ್ದ ಕೇಂದ್ರ ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವ ವಿ ಮುರುಳೀಧರನ್ ಅವರಿಗೆ ತಾವು ರಚಿಸಿದ ಕಲಾಕೃತಿಯನ್ನು ನೀಡಿ, ಅದನ್ನು ಪ್ರಧಾನಿ ಮೋದಿಯವರಿಗೆ ತಲುಪಿಸುವಂತೆ ಕೇಳಿಕೊಂಡಿದ್ದರು.
ಶರಣ್ ಕಲಾಕೃತಿಯನ್ನು ಪಡೆದ ಪ್ರಧಾನಿ, ಹರ್ಷ ವ್ಯಕ್ತ ಪಡಿಸಿದ್ದಾರೆ. ಮಾತ್ರವಲ್ಲದೇ ಬಾಲಕನಿಗೆ ಪತ್ರ ಬರೆಯುವುದರ ಮೂಲಕ ಅಭಿನಂದನೆ ತಿಳಿಸಿದ್ದಾರೆ.
“ಕಲೆಯೆನ್ನುವುದು ನಮ್ಮ ಭಾವನೆಗಳನ್ನು ಸೃಜನಾತ್ಮಕವಾಗಿ ಹೊರ ಹಾಕುವ ಉತ್ತಮ ಮಾಧ್ಯಮ. ನೀವು ಮಾಡಿರುವ ಈ ಕಲಾಕೃತಿಯ ಮೇಲೆ ನಿನಗಿರುವ ಪ್ರೀತಿ ಹಾಗೂ ದೇಶದ ಬಗ್ಗೆ ನಿನಗಿರುವ ಗೌರವದ ಎದ್ದು ಕಾಣಿಸುತ್ತದೆ” ಮುಂದಿನ ದಿನಗಳಲ್ಲಿ ನಿಮ್ಮ ಕಲಾತ್ಮಕ ಕೌಶಲ್ಯಗಳನ್ನು ನೀವು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತೀರಿ ಎಂದು ನನಗೆ ಭರವಸೆಯಿದೆ. ಇನ್ನೂ ಹೀಗೆ ಕಲಾಕೃತಿಯನ್ನು ರಚಿಸುವುದನ್ನು ಕರಗತ ಮಾಡಿಕೊಳ್ಳಿ, ಜೊತೆಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ಕೃಷ್ಟರಾಗಿರಿ. ಉಜ್ವಲ ಮತ್ತು ಯಶಸ್ವಿ ಭವಿಷ್ಯಕ್ಕಾಗಿ ಶುಭಾಶಯಗಳು” ಎಂದು ಮೋದಿಯವರ ಸಹಿಯನ್ನು ಹೊಂದಿರುವ ಪತ್ರದ ಸ್ಕ್ಯಾನ್ ಮಾಡಿದ ಪ್ರತಿಯನ್ನು ಶರಣ್ ಶಶಿಕುಮಾರ್ ಅವರು ಟ್ವೀಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
“ಈ ಪತ್ರದಲ್ಲಿ ನನ್ನ ಕಲೆಗೆ ಮೆಚ್ಚುಗೆಯನ್ನು ನೀಡಿದ ಗೌರವಾನ್ವಿತ @ @PMOIndia , @narendramodi ಅವರಿಗೆ ಧನ್ಯವಾದಗಳು. ಇದು ನನ್ನಂತಹ ಉದಯೋನ್ಮುಖ ಕಲಾವಿದರಿಗೆ ಒಂದು ದೊಡ್ಡ ಪ್ರೇರಣೆ ಮತ್ತು ಸ್ಫೂರ್ತಿಯಾಗಿದೆ” ಎಂದು ಮೋದಿಯವರ ಭಾವನಾತ್ಮಕ ಪತ್ರಕ್ಕೆ ಶರಣ್ ಟ್ವೀಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಓದಿ : ಭಾರತದಲ್ಲಿ 5 ಜಿ ಸೇವೆಗಳನ್ನು ಒದಗಿಸಲು ಭಾರ್ತಿ ಏರ್ ಟೆಲ್, ಕ್ವಾಲ್ಕಾಮ್ ಟೈ ಅಪ್..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.