ಚೀನ ವಾಯು ಪ್ರದೇಶ ಅತಿಕ್ರಮಿಸಿದ ಭಾರತೀಯ ಡ್ರೋನ್ ಪತನ ?
Team Udayavani, Dec 7, 2017, 11:17 AM IST
ಬೀಜಿಂಗ್: ಭಾರತೀಯ ಡ್ರೋನ್ ಒಂದು (ಚಾಲಕನಿಲ್ಲದ ದೂರ ನಿಯಂತ್ರಿತ ವಾಯು ವಾಹನ) ತನ್ನ ವಾಯು ಪ್ರದೇಶವನ್ನು ಅತಿಕ್ರಮಿಸಿ ಒಳಗೆ ಬಂದು ಪತನಗೊಂಡಿರುವುದಾಗಿ ಚೀನ ಮಾಧ್ಯಮ ವರದಿ ಮಾಡಿದೆ. ಆದರೆ ಈ ಘಟನೆ ಯಾವಾಗ, ಎಲ್ಲಿ ನಡೆಯಿತು ಎಂಬಿತ್ಯಾದಿ ಅಗತ್ಯ ಮಾಹಿತಿಗಳನ್ನು ಅದು ನೀಡಿಲ್ಲ.
ಭಾರತೀಯ ಡ್ರೋನ್ ಒಂದು ಚೀನ ವಾಯು ಗಡಿಯನ್ನು ಅತಿಕ್ರಮಿಸಿ ಒಳಬಂದು ಪತನಗೊಂಡಾಗ ಚೀನೀ ಸೈನಿಕರು ವೃತ್ತಿಪರ ಹಾಗೂ ಹೊಣೆಯರಿತ ದೃಷ್ಟಿಕೋನದಿಂದ ಪತನಗೊಂಡ ವಾಯು ವಾಹನದ ಗುರುತು ಪರಿಶೀಲಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಚೀನ ಸೇನೆಯ ಹಿರಿಯಕ ಅಧಿಕಾರಿಯೋರ್ವರು ಹೇಳಿರುವುದನ್ನು ಚೀನದ ಸರಕಾರಿ ಒಡೆತನದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಆರೋಪಿತ ಕ್ರಮದಿಂದಾಗಿ ಭಾರತವು ಚೀನದ ಭೌಗೋಳಿಕ ಸಾರ್ವಭೌಮತೆಯ ಉಲ್ಲಂಘನೆ ಮಾಡಿದಂತಾಗಿದೆ ಎಂದು ಚೀನದ ಹಿರಿಯ ರಕ್ಷಣಾ ಅಧಿಕಾರಿ ಹೇಳಿದ್ದು ಘಟನೆಯ ಬಗ್ಗೆ ಅತೃಪ್ತಿ ಮತ್ತು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ನಿನ್ನೆ ಬುಧವಾರವಷ್ಟೇ ಚೀನದ ಗ್ಲೋಬಲ್ ಟೈಮ್ಸ್, “ಭಾರತವು ಚೀನದ ಹೆಚ್ಚುತ್ತಿರುವ ನೌಕಾ ಸಾಮರ್ಥ್ಯವನ್ನು ತಡೆಯುವ ದುರುದ್ದೇಶದಲ್ಲಿ ಅಮೆರಿಕವನ್ನು ಎತ್ತಿ ಕಟ್ಟುತ್ತಿದೆ’ ಎಂದು ಆಪಾದಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.