![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 6, 2020, 1:28 AM IST
37th US President Richard Nixon
ವಾಷಿಂಗ್ಟನ್: ಭಾರತೀಯರ ಬಗ್ಗೆ ಬ್ರಿಟನ್‌ನ ಅಂದಿನ ಪ್ರಧಾನಿ ವಿನ್ಸ್‌ಟನ್ ಚರ್ಚಿಲ್ ಹೇಯವಾಗಿ ಮಾತನಾಡುತ್ತಿದ್ದರು ಎನ್ನುವುದು ಆಗಾಗ ಚರ್ಚೆಯಾಗುವ ವಿಚಾರ. ಭಾರತೀಯರೆಡೆಗಿನ ಅವರ ಪೂರ್ವಗ್ರಹದ ಕಾರಣದಿಂದಾಗಿ, ಭಾರತದೆಡೆಗಿನ ಅವರ ನೀತಿಗಳ ಮೇಲೂ ಪರಿಣಾಮ ಬೀರುತ್ತಿತ್ತು ಎನ್ನುತ್ತಾರೆ ಇತಿಹಾಸಕಾರರು.
ಭಾರತದ ಕುರಿತು ಇಂಥದ್ದೇ ವಿಕೃತ ಭಾವನೆ 1969-1974ರವರೆಗೂ ಅಮೆರಿಕದ ಅಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್ ಅವರಿಗೂ ಇತ್ತು ಎನ್ನುವ ಸತ್ಯ ಈಗ ಬಯಲಾಗಿದೆ. ಅದರಲ್ಲೂ ಭಾರತೀಯ ಹೆಣ್ಣು ಮಕ್ಕಳ ಬಗ್ಗೆ ನಿಕ್ಸನ್ ಅತ್ಯಂತ ಕೀಳಾಗಿ ಮಾತನಾಡುತ್ತಿದ್ದರು ಎನ್ನುವುದು ಅಮೆರಿಕದ ಶ್ವೇತಭವನದಿಂದ ಬಹಿರಂಗಗೊಂಡಿರುವ ಟೇಪ್‌ಗಳಿಂದ, ದಾಖಲೆಗಳಿಂದ ಪತ್ತೆಯಾಗಿದೆ. ಒಂದೆಡೆ ಅಮೆರಿಕದಲ್ಲಿ ಈ ಹೊತ್ತಲ್ಲಿ ಕಪ್ಪುವರ್ಣೀಯರ ವಿರುದ್ಧದ ತಾರತಮ್ಯದ ವಿಚಾರವಾಗಿ ಪ್ರತಿಭಟನೆಗಳು ಹೆಚ್ಚಾಗಿರುವ ವೇಳೆಯಲ್ಲೇ ಈ ಸಂಗತಿ ಹೊರಬಿದ್ದಿದೆ.
ಈ ಕುರಿತು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಲೇಖನ ಬರೆದಿರುವ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಗ್ಯಾರಿ ಬಾಸ್ ಅವರು “” ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಹೆನ್ರಿ ಕಿಸಿಂಜರ್‌ಗೆ ಭಾರತೀಯರ ಬಗ್ಗೆ ಇದ್ದ ವೈಷಮ್ಯ ಹಾಗೂ ಭಾರತೀಯ ಸ್ತ್ರೀಯರ ಬಗ್ಗೆ ಅವರಿಗಿದ್ದ ಹೇವರಿಕೆ, ದ.ಏಷ್ಯಾ ಕುರಿತ ಅಮೆರಿಕದ ನೀತಿಗಳಲ್ಲೂ ಪ್ರತಿಫಲಿಸುತ್ತಿತ್ತು ಎನ್ನುವುದು ನಿಕ್ಸನ್ ಧ್ವನಿಮುದ್ರಿಕೆಯಿಂದ ತಿಳಿಯುತ್ತದೆ” ಎನ್ನುತ್ತಾರೆ.
ರಿಚರ್ಡ್ ನಿಕ್ಸನ್ ಭಾರತೀಯ ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಾ- “”ಜಗತ್ತಿನಲ್ಲೇ ಅತ್ಯಂತ ಕುರೂಪಿಗಳೆಂದರೆ ಭಾರತೀಯ ಮಹಿಳೆಯರು. ಇವರೆಲ್ಲರೂ ಸೆಕ್ಸ್‌ಲೆಸ್ ಆಗಿದ್ದಾರೆ. ಆದರೆ ಭಾರತೀಯರು ನೋಡಲು ದಯನೀಯವಾಗಿ ಇರುತ್ತಾರೆ” ಎಂದಿದ್ದರು ಎನ್ನುವುದು ಈ ಟೇಪ್‌ಗಳಿಂದ ಬಹಿರಂಗಗೊಂಡಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.