ಲಂಡನ್‌ನಲ್ಲಿ ಭಾರತೀಯ ವ್ಯಕ್ತಿಯ ಕೊಲೆ
ವೆಲ್ಲಿಂಗ್ಟನ್ ಸ್ಟ್ರೀಟ್‌ನಲ್ಲಿರುವ ಟೆಸ್ಕೋ ಸೂಪರ್ ಮಾರ್ಕೆಟ್‌ನಲ್ಲಿ ನಡೆದ ಘಟನೆ
Team Udayavani, May 11, 2019, 6:59 AM IST
ಲಂಡನ್: ವೆಲ್ಲಿಂಗ್ಟನ್ ಸ್ಟ್ರೀಟ್‌ನಲ್ಲಿರುವ ಟೆಸ್ಕೋ ಸೂಪರ್ ಮಾರ್ಕೆಟ್‌ನಲ್ಲಿ ನೌಕರಿಯಲ್ಲಿದ್ದ ಭಾರತದ ಹೈದರಾಬಾದ್ ಮೂಲದ ಮೊಹಮ್ಮದ್ ನದೀಮುದ್ದೀನ್ (24) ಎಂಬವರು ಕೊಲೆಯಾಗಿರುವ ಘಟನೆ ಗುರುವಾರ ನಡೆದಿದೆ.
ಎಂದಿನಂತೆ ಗುರುವಾರ ನೌಕರಿಗೆ ಹೋಗಿದ್ದ ಮೊಹಮ್ಮದ್, ರಾತ್ರಿ ಎಷ್ಟು ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ತಂದೆ, ಸೂಪರ್ ಮಾರ್ಕೆಟ್‌ಗೆ ಫೋನಾಯಿಸಿ ಮಗನ ಬಗ್ಗೆ ವಿಚಾರಿಸಿದ್ದಾರೆ. ಹೀಗಾಗಿ, ಸಿಬಂದಿಯು ಅವರಿಗಾಗಿ ಹುಡುಕಾಟ ನಡೆಸಿದಾಗ, ಸೂಪರ್ ಮಾರ್ಕೆಟ್‌ನ ಕೆಳಗಿನ ಪಾರ್ಕಿಂಗ್ ಲಾಟ್‌ನಲ್ಲಿ ಮೊÖಮ್ಮದ್ ಮೃತದೇಹ ಪತ್ತೆಯಾಗಿದೆ. ಮೊಹಮ್ಮದ್ ಸಹೋದ್ಯೋಗಿಯಾದ ಪಾಕ್ ಮೂಲದ ಯುವಕನೊಬ್ಬನ ಮೇಲೆ ಶಂಕೆಗೊಂಡಿರುವ ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ. ಹಳೇ ಹೈದರಾಬಾದ್‌ನ ಕಾಲೇಜೊಂದರಲ್ಲಿ ಪದವಿ ಪಡೆದಿದ್ದ ಇವರು 2012ರಲ್ಲಿ ಬರ್ಕ್‌ಶೈರ್‌ನಲ್ಲಿನ ನೌಕರಿ ಪಡೆದಿದ್ದರಿಂದ ಲಂಡನ್‌ಗೆ ತೆರ ಳಿದ್ದ ಅವರು, ಆನಂತರ ತಮ್ಮ ತಾಯಿ- ತಂದೆಯನ್ನು ಅಲ್ಲಿಗೇ ಕರೆಸಿಕೊಂಡಿದ್ದರು. 25 ದಿನಗಳ ಹಿಂದಷ್ಟೇ ಇವರ ಪತ್ನಿ (ಈಗ 3 ತಿಂಗಳ ಗರ್ಭಿಣಿ) ಲಂಡನ್‌ಗೆ ತೆರಳಿ ಇವರ ಕುಟುಂಬ ಸೇರಿಕೊಂಡಿದ್ದರು.