ರೋಗಿಗಳಿಗೆ ಕ್ಯಾನ್ಸರ್ ಭಯತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವೈದ್ಯ ಮಹಾಶಯ!
Team Udayavani, Dec 11, 2019, 12:41 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಂಡನ್: ವೈದ್ಯರ ಬಳಿಯಲ್ಲಿ ಹಾಗೂ ವಕೀಲರ ಬಳಿಯಲ್ಲಿ ನಾವು ಯಾವುದೇ ವಿಷಯಗಳನ್ನು ಮುಚ್ಚಿಡಬಾರದು ಎಂಬ ಮಾತೊಂದಿದೆ. ಹಾಗಾಗಿಯೇ ರೋಗಿಗಳು ತಾವು ವೈದ್ಯರಲ್ಲಿಗೆ ಹೋದಾಗ ಎಲ್ಲಾ ವಿಚಾರಗಳನ್ನು ಅವರಿಗೆ ತಿಳಿಸುತ್ತಾರೆ ಮತ್ತು ಅವರು ಮಾಡುವ ಎಲ್ಲಾ ಪರೀಕ್ಷೆಗಳಿಗೂ ಸಮ್ಮತಿಯನ್ನು ಸೂಚಿಸುತ್ತಾರೆ.
ಆದರೆ ಇಲ್ಲೊಬ್ಬ ವೈದ್ಯ ತನ್ನ ಬಳಿಗೆ ಬರುತ್ತಿದ್ದ ರೋಗಿಗಳ ಇದೇ ಮನಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಲೈಂಗಿಕ ಕಿರುಕುಳ ನೀಡಿ ಇದೀಗ ವಿಚಾರಣೆಯನ್ನು ಎದುರಿಸುತ್ತಿರುವ ಘಟನೆ ಇಂಗ್ಲಂಡ್ ದೇಶದಲ್ಲಿ ನಡೆದಿದೆ. ಆದರೆ ವಿಚಿತ್ರವೆಂದರೆ ಇಂಗ್ಲಂಡ್ ನಲ್ಲಿ ಈ ರೀತಿಯ ಕೃತ್ಯ ಎಸಗಿರುವ ವ್ಯಕ್ತಿ ಭಾರತೀಯ ಮೂಲದವನೆಂಬುದೇ ಖೇದಕರ ಸಂಗತಿ.
ಪೂರ್ವ ಲಂಡನ್ ನ ಮೇವ್ನೇ ಮೆಡಿಕಲ್ ಸೆಂಟರ್ ನಲ್ಲಿ ವೈದ್ಯಕೀಯ ವೃತ್ತಿಯನ್ನು ನಿರ್ವಹಿಸುತ್ತಿದ್ದ ಮನೀಶ್ ಶಾ ಎಂಬಾತನೇ ತನ್ನಲ್ಲಿಗೆ ಬರುತ್ತಿದ್ದ ಮಹಿಳಾ ರೋಗಿಗಳ ಕ್ಯಾನ್ಸರ್ ಭಯವನ್ನೇ ದುರುಪಯೋಗಪಡಿಸಿಕೊಂಡು ಅವರನ್ನು ಲೈಂಗಿಕ ಕಿರುಕುಳಕ್ಕೊಳಪಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. 2009 ರಿಂದ 2013ರವರೆಗೆ ಮನೀಶ್ ಶಾ ಸುಮಾರು 23 ಮಹಿಳಾ ರೋಗಿಗಳನ್ನು ಈ ರೀತಿಯಾಗಿ ಲೈಂಗಿಕ ಶೋಷಣೆಗೆ ಒಳಪಡಿಸಿರುವ ಆರೋಪ ಇದೀಗ ಇಲ್ಲಿನ ಓಲ್ಡ್ ಬೈಲೀ ನ್ಯಾಯಾಲಯದಲ್ಲಿ ಸಾಬೀತಾಗಿದೆ.
ತನ್ನಲ್ಲಿಗೆ ತಪಾಸಣೆಗೆಂದು ಬರುತ್ತಿದ್ದ ಮಹಿಳಾ ರೋಗಿಗಳು ತಮ್ಮ ಸ್ತನ ಪರಿಕ್ಷೆಯನ್ನು ನಡೆಸುವಂತೆ ಅವರ ಮನವೊಲಿಸಲು ಶಾ ಹಾಲಿವುಡ್ ನಟಿಯರು ಮ್ಯಾಸ್ಟೆಕ್ಟಮಿ ಮಾಡಿಸಿಕೊಂಡಿರುವ ಸುದ್ದಿಯನ್ನು ಅವರಿಗೆ ವಿವರಿಸಿ ಬಳಿಕ ಅವರ ಸ್ತನ ಪರೀಕ್ಷೆ ನಡೆಸುವ ನೆಪದಲ್ಲಿ ಅವರಿಗೆ ಕಿರುಕುಳ ನೀಡುತ್ತಿದ್ದ ಎಂಬ ವಿಚಾರವೂ ಸಹ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಬಹಿರಂಗಗೊಂಡಿದೆ.
ಇದೇ ರೀತಿಯಲ್ಲಿ ಮಹಿಳೆಯರ ಗುಪ್ತಾಂಗ ಪರೀಕ್ಷೆಯ ನೆಪದಲ್ಲಿಯೂ ಸಹ ಮನೀಶ್ ಶಾ ಇದೇ ರೀತಿಯ ತಂತ್ರವನ್ನು ಬಳಸುತ್ತಿದ್ದ ಅಂಶವೂ ವಿಚಾರಣೆಯ ಸಂದರ್ಭದಲ್ಲಿ ಹೊರಬಿದ್ದಿದೆ. ಅಗತ್ಯವಿಲ್ಲದಿದ್ದರೂ ಮನೀಶ್ ಶಾ ತನ್ನ ವೃತ್ತಿಯ ಲಾಭವನ್ನು ಪಡೆದುಕೊಂಡು ತನ್ನಲ್ಲಿಗೆ ಬರುತ್ತಿದ್ದ ಮಹಿಳಾ ರೋಗಿಗಳ ಸ್ತನ, ಗುಪ್ತಾಂಗ ಮತ್ತು ಗುದದ್ವಾರ ಪರೀಕ್ಷೆಗಳನ್ನು ನಡೆಸುವ ನೆಪದಲ್ಲಿ ಅವರೊಂದಿಗೆ ಲೈಂಗಿಕವಾಗಿ ಅನುಚಿತ ರೀತಿಯಲ್ಲಿ ವರ್ತಿಸುತ್ತಿದ್ದ ಎಂದು ದೂರುದಾರರ ಪರ ವಕೀಲ ಕೇಟ್ ಬೆಕ್ಸ್ ನ್ಯಾಯಾಲಯದಲ್ಲಿ ತಮ್ಮ ವಾದ ಮಂಡನೆಯಲ್ಲಿ ಹೇಳಿಕೊಂಡಿದ್ದಾರೆ.
ಆದರೆ ತನ್ನ ಮೇಲಿನ ಈ ಎಲ್ಲಾ ಆರೋಪಗಳನ್ನು ವೈದ್ಯ ಮನೀಶ್ ಶಾ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಮನೀಶ್ ಶಾ ಅವರು ವೈದ್ಯಕೀಯ ವೃತ್ತಿಯನ್ನು ಮುಂದುವರಿಸದಂತೆ ಅವರ ಮೇಲೆ 2013ರಲ್ಲೇ ನಿರ್ಬಂಧ ವಿಧಿಸಲಾಗಿತ್ತು. ನ್ಯಾಯಾಧೀಶ ಆ್ಯನ್ನೆ ಮೊಲಿನೆಕ್ಸ್ ಅವರು ವಿಚಾರಣೆಯ ತೀರ್ಪನ್ನು 2020ರ ಫೆಬ್ರವರಿ 07ಕ್ಕೆ ಕಾಯ್ದಿರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.