ಭಾರತೀಯನ ಹತ್ಯೆ: ಸುಳಿವು ಕೊಟ್ಟವರಿಗೆ 89 ಲಕ್ಷ
Team Udayavani, Jun 3, 2017, 3:45 AM IST
ಲಂಡನ್: ಅಪರಿಚಿತ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿದ್ದ ಭಾರತೀಯ ಮೂಲಕ ಸತ್ನಾಮ್ ಸಿಂಗ್(45) ಲಂಡನ್‌ನಲ್ಲಿ ಶುಕ್ರವಾರ ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾಗಿದ್ದಾರೆ.
ಮಾ.6ರಂದು ಸತ್ನಾಮ್ ಸಿಂಗ್ ಸ್ನೇಹಿತನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಅಡ್ಡಗಟ್ಟಿದ್ದ ಅಪರಿಚಿತರು, ಅವರಿಗೆ ಬೇಸ್‌ಬಾಲ್ ಬ್ಯಾಟ್‌ನಿಂದ ಥಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಿಂಗ್ ಕೊಲೆ ಕುರಿತು ತನಿಖೆ ನಡೆಸುತ್ತಿರುವ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು, ಕೊಲೆಗಾರರ ಬಗ್ಗೆ ಸುಳಿವು ನೀಡಿದವರಿಗೆ 10,000 ಪೌಂಡ್(89 ಲಕ್ಷ ರೂ.) ಬಹುಮಾನ ಘೋಷಿಸಿದ್ದಾರೆ.