ವಿಮಾನ ಪರಿಚಾರಕಿಗೆ ಲೈಂಗಿಕ ಕಿರುಕುಳ: ಭಾರತೀಯನಿಗೆ 3 ವಾರ ಜೈಲು
Team Udayavani, Nov 23, 2018, 11:07 AM IST
ಸಿಂಗಾಪುರ : ಸಿಡ್ನಿಯಿಂದ ಸಿಂಗಾಪುರಕ್ಕೆ ಹೋಗುತ್ತಿದ್ದ ವಿಮಾನದ ಪರಿಚಾರಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಕ್ಕೆ 34ರ ಹರೆಯದ ಭಾರತೀಯ ಮೂಲದ ಮತ್ತು ಆಸ್ಟ್ರೇಲಿಯದಲ್ಲಿ ನೆಲೆಸಿರುವ ಪರಾಂಜಪೆ ನಿರಂಜನ್ ಜಯಂತ್ ಎಂಬಾತನಿಗೆ ಮೂರು ವಾರಗಳ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.
ಕಳೆದ ಆಗಸ್ಟ್ ನಲ್ಲಿ ಸಿಡ್ನಿಯಿಂದ ಸಿಂಗಾಪುರಕ್ಕೆ ಹೋಗುತ್ತಿದ್ದ ವಿಮಾನದ ಎಂಟು ತಾಸುಗಳ ಪ್ರಯಾಣದಲ್ಲಿ ಪರಾಂಜಪೆ ಹಲವು ಬಾರಿ 25ರ ಹರೆಯದ ವಿಮಾನ ಪರಿಚಾರಕಿ ಬಳಿಗೆ ಹೋಗಿ ಆಕೆಯ ಫೋನ್ ನಂಬರ್ ಕೇಳಿದ್ದ. ಆದರೆ ಆಕೆ ನಿರಾಕರಿಸಿದ್ದಳು.
ಬ್ಯುಸಿನೆಸ್ ಕ್ಲಾಸ್ ಪ್ರಯಾಣಿಕನಾಗಿದ್ದ ಪರಾಂಜಪೆ ಒಂದು ಸಂದರ್ಭದಲ್ಲಿ ಪರಿಚಾರಕಿಯ ಪ್ರಷ್ಠವನ್ನು ಸವರಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು “ದ ಸ್ಟ್ರೇಟ್ಸ್ ಟೈಮ್ಸ್’ ವರದಿ ಮಾಡಿದೆ.
ಗಗನ ಪರಿಚಾರಕಿಗೆಯ ಪ್ರಷ್ಠ ಸವರಿದ ಪರಾಂಜಪೆ “ನೀನು ತುಂಬಾ ಬ್ಯೂಟಿಫುಲ್ ಇದ್ದಿಯ’ ಎಂದು ವರ್ಣಿಸಿ ಬಳಿಕ ತನ್ನ ಸೀಟಿಗೆ ಮರಳಿದ್ದ ಎಂದು ಡೆಪ್ಯುಟಿ ಪಬ್ಲಿಕ್ ಪ್ರಾಸಿಕ್ಯೂಟರ್ ಜೇಮ್ಸ್ ಚೂ ನ್ಯಾಯಾಲಯಕ್ಕೆ ಹೇಳಿದರು.
ಪರಿಚಾರಕಿ ಒಡನೆಯೇ ತನಗಾದ ಲೈಂಗಿಕ ಕಿರುಕುಳದ ವಿಷಯವನ್ನು ತನ್ನ ಸೂಪರ್‌ವೈಸರ್ ಗಮನಕ್ಕೆ ತಂದಳಲ್ಲದೆ ಶಾಂಗಿ ವಿಮಾನ ನಿಲ್ದಾಣದ ಟರ್ಮಿನಲ್ 2 ಪೊಲೀಸ್ ಠಾಣೆಗೆ ಪರಾಂಜಪೆ ವಿರುದ್ಧ ದೂರು ನೀಡಿದ್ದಳು.
ತಾನು ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದೆ ಎಂದು ಪರಾಂಜಪೆ ಜಿಲ್ಲಾ ನ್ಯಾಯಾಧೀಶ ಲಿಮ್ ತ್ಸೇ ಅವರ ಮುಂದೆ ತಪ್ಪೊಪ್ಪಿಕೊಂಡ. ನನಗೆ ನನ್ನ ಕುಡಿತದ ಮೇಲೆ ನಿಯಂತ್ರಣ ಇರಲಿಲ್ಲ ಎಂದು ಹೇಳಿದ. ತನಗೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪವಿದೆ; ತನಗೆ ಕಡಿಮೆ ಪ್ರಮಾಣದ ಶಿಕ್ಷೆ ನೀಡಬೇಕು ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡ.
ಇದನ್ನು ಪರಿಗಣಿಸಿದ ನ್ಯಾಯಾಧೀಶರು, ಲೈಂಗಿಕ ಕಿರುಕುಳದ ಅಪರಾಧಕ್ಕೆ ನೀಡಬಹುದಾಗಿದ್ದ ಎರಡು ವರ್ಷಗಳ ಜೈಲು, ದಂಡ ಮತ್ತು ಛಡಿಯೇಟನ್ನು ವಿಧಿಸದೆ ಕೇವಲ ಮೂರು ವಾರಗಳ ಜೈಲು ಶಿಕ್ಷೆಯನ್ನು ವಿಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.