ಪಾಸ್‌ಪೋರ್ಟ್ ರ್‍ಯಾಂಕಿಂಗ್ ಪ್ರಕಟ: ಭಾರತಕ್ಕೆ 85ನೇ ಸ್ಥಾನ
Team Udayavani, Jan 12, 2023, 7:40 AM IST
ಇಸ್ಲಾಮಾಬಾದ್: ಪ್ರಸಕ್ತ ವರ್ಷದ ಪಾಸ್‌ಪೋರ್ಟ್ ಶ್ರೇಯಾಂಕ ಪ್ರಕಟವಾಗಿದೆ. ಅದರಲ್ಲಿ ಪಾಕಿಸ್ಥಾನ ಅತ್ಯಂತ ದುರ್ಬಲ ಪಾಸ್‌ಪೋರ್ಟ್ ಹೊಂದಿರುವ ರಾಷ್ಟ್ರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದು, ಕಳೆದ ವರ್ಷದ ಶ್ರೇಯಾಂಕದಲ್ಲಿಯೇ ಮುಂದುವರಿದಿದೆ. ಭಾರತದ ಪಾಸ್‌ಪೋರ್ಟ್‌ಗೆ 85ನೇ ಸ್ಥಾನ ಸಿಕ್ಕಿದೆ. 2019, 2020, 2021 ಮತ್ತು 2022ನೇ ಸಾಲಿನಲ್ಲಿ ಕ್ರಮವಾಗಿ 82, 84, 85 ಮತ್ತು 83 ನೇ ಸ್ಥಾನ ಪಡೆದಿತ್ತು.
ವಿಶ್ವದ ಬೇರೆ-ಬೇರೆ ತಾಣಗಳಿಗೆ ವೀಸಾ ಮುಕ್ತ ಪ್ರವೇಶಕ್ಕೆ ಅನುಮತಿಸುವ ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಿ ಹೆನ್ಲಿ ಪಾಸ್‌ಪೋರ್ಟ್ ತನ್ನ ಸೂಚ್ಯಂಕವನ್ನು ಬಿಡುಗಡೆಗೊಳಿಸಿದೆ. ಈ ಪೈಕಿ 193 ಜಾಗತಿಕ ತಾಣಗಳಿಗೆ ವೀಸಾ ಮುಕ್ತ ಪ್ರಯಾಣ ಅವಕಾಶ ಹೊಂದುವ ಮೂಲಕ ಜಪಾನ್ ಪಾಸ್‌ಪೋರ್ಟ್ ಸತತ 5ನೇ ವರ್ಷ ಅತ್ಯಂತ ಪ್ರಭಾವ ಶಾಲಿಯಾಗಿದೆ.
ಅಗ್ರ 5ರ ಪಟ್ಟಿಯಲ್ಲಿ ಸಿಂಗಾಪುರ, ದಕ್ಷಿಣ ಕೊರಿಯಾ, ಜರ್ಮನಿ ಹಾಗೂ ಸ್ಪೇನ್ ಸೇರಿವೆ. ವಿಶ್ವದ ದೊಡ್ಡಣ್ಣ ಅಮೆರಿಕ ಮೊದಲ 22 ರಾಷ್ಟ್ರಗಳ ಸಾಲಿನಲ್ಲಿ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.