ವೈದ್ಯ ವಿದ್ಯಾರ್ಥಿಗಳಿಗೆ ಉಕ್ರೇನ್ ಅಚ್ಚುಮೆಚ್ಚು
Team Udayavani, Feb 26, 2022, 7:50 AM IST
ಜಗತ್ತಿನ ನಿರೀಕ್ಷೆಯನ್ನೂ ಮೀರಿ ರಷ್ಯಾ ಉಕ್ರೇನ್ ವಿರುದ್ಧ ದಾಳಿ ಮಾಡಿದೆ. ಭಾರತ ಸೇರಿ ಹಲವಾರು ರಾಷ್ಟ್ರಗಳ ರಾಜತಾಂತ್ರಿಕರು ಮತ್ತು ವಿದ್ಯಾರ್ಥಿಗಳು ಆ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ, ಕಲಿಯುತ್ತಿದ್ದಾರೆ. ಕರ್ನಾಟಕದ 346 ಮಂದಿ ಸೇರಿ ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 18,095 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಪೈಕಿ ಕೆಲವರು ಸ್ವದೇಶಕ್ಕೆ ಆಗಮಿಸಿದ್ದರೆ, ಇನ್ನೂ ಕೆಲವರು ಆ ದೇಶದಲ್ಲಿಯೇ ಇದ್ದಾರೆ. ಅವರನ್ನು ಪಾರು ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಉಕ್ರೇನ್‌ನಲ್ಲಿ ಅತ್ಯುತ್ತಮ ವಿವಿಗಳಿವೆ ಮತ್ತು ಕೈಗೆ ಎಟಕುವ ರೀತಿಯ ಶುಲ್ಕ ಉಂಟು. ಹೀಗಾಗಿ, ದೇಶದಿಂದ ಸಾವಿರಾರು ವಿದ್ಯಾರ್ಥಿಗಳು ಆ ದೇಶದಲ್ಲಿ ಕಲಿಯುತ್ತಿದ್ದಾರೆ.
ಉಕ್ರೇನ್‌ನಲ್ಲಿ ಅಧ್ಯಯನ ಅವಕಾಶಗಳು
ವೈದ್ಯಕೀಯ ಶಿಕ್ಷಣ, ಕಂಪ್ಯೂಟರ್ ಸೈನ್ಸ್, ನರ್ಸಿಂಗ್ ಕೋರ್ಸ್, ನಾಗರಿಕ ವಿಮಾನಯಾನ, ಎಂಜಿನಿಯರಿಂಗ್, ಅರ್ಥಶಾಸ್ತ್ರ, ಎಂಬಿಎ ಮತ್ತು ಪಿಎಚ್.ಡಿ.
ವೈದ್ಯಕೀಯ ಶಿಕ್ಷಣಕ್ಕೆ ಬೆಸ್ಟ್
ವೈದ್ಯ ಶಿಕ್ಷಣಕ್ಕೆ ಜಗತ್ತಿನಲ್ಲಿಯೇ ಅತ್ಯಂತ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳು ಬೇರೆ ರಾಷ್ಟ್ರಗಳಲ್ಲಿ ಇದ್ದರೂ, ಉಕ್ರೇನ್‌ನಲ್ಲಿರುವ ಸಂಸ್ಥೆಗಳೂ ಕಡಿಮೆ ಏನಲ್ಲ. ಅಂತಾರಾಷ್ಟ್ರೀಯವಾಗಿ ಇರುವಂಥ ಮಾನದಂಡಗಳಿಗೆ ಅನುಗುಣವಾಗಿ ಅವುಗಳು ಕಾರ್ಯನಿರ್ವಹಿಸುತ್ತಿವೆ. ಎಂಬಿಬಿಎಸ್ ಮತ್ತು ಎಂ.ಡಿ. ಕೋರ್ಸ್‌ಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಕಲಿಸಲಾಗುತ್ತದೆ. ಅಲ್ಲಿ ಒಟ್ಟು ಆರು ವರ್ಷಗಳು ಬೇಕಾಗುತ್ತವೆ. ಮೊದಲ ಎರಡು ವರ್ಷಗಳಲ್ಲಿ ರಷ್ಯನ್, ಉಕ್ರೇನಿಯನ್ ಭಾಷೆಯನ್ನು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಆ ಮೂಲಕ ಸ್ಥಳೀಯರ ಜತೆಗೆ ಮಾತುಕತೆ ನಡೆಸಲು ಅನುಕೂಲವಾಗಲಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ.
ಜನಪ್ರಿಯ ಮೆಡಿಕಲ್ ಕೋರ್ಸ್‌ಗಳು
ದಂತ ವೈದ್ಯಕೀಯ ಕೋರ್ಸ್‌ಗಳು
ಮಕ್ಕಳ ತಜ್ಞರ ವಿಭಾಗ
ನರ್ಸಿಂಗ್ ಕೋರ್ಸ್‌ಗಳು- ಅದರ ಅವಧಿ ಎರಡು ವರ್ಷಗಳು
ಆಥೋìಪೆಡಿಕ್ ಡೆಂಟಿಸ್ಟ್ರಿ- 2 ವರ್ಷದ ಕೋರ್ಸ್. ಕೋರ್ಸ್ ಮುಕ್ತಾಯದಲ್ಲಿ ಬ್ಯಾಚೆಲರ್ ಡೆಂಟಲ್ ಆಥೊìಪೆಡಿಕ್
ವೈದ್ಯ ಸ್ನಾತಕೋತ್ತರ ಪದವಿಗಳು- 2-3 ವರ್ಷದ ಅವಧಿ
ಆಯ್ಕೆ ಏಕೆ?
– ಯು.ಕೆ., ಅಮೆರಿಕ ಮತ್ತು ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚ
– ಯು.ಕೆ ಮತ್ತು ಅಮೆರಿಕದ ವಿವಿಗಳ ಜತೆಗೆ ವಿನಿಮಯ ಯೋಜನೆಯಲ್ಲಿ ಭಾಗವಹಿಸಲು ಅವಕಾಶ
– ಜಗತ್ತಿನ ವಿವಿಧ ದೇಶಗಳ ಸರ್ಕಾರಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಮನ್ನಣೆ
– ಐಇಎಲ್‌ಟಿಎಸ್, ಟಿಒಇಎಫ್ಎಲ್‌ನಂಥ ಇಂಗ್ಲಿಷ್ ಭಾಷಾ ಪ್ರಾವೀಣ್ಯತೆ ಸಾಬೀತು ಮಾಡುವ ಪರೀಕ್ಷೆ ಅಗತ್ಯವಿಲ್ಲ
ವೆಚ್ಚವೆಷ್ಟು?
ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ನಾಲ್ಕೂವರೆ ವರ್ಷದ ಎಂಬಿಬಿಎಸ್ ಕಲಿಯಲು ಪ್ರತಿ ವರ್ಷ 10-12 ಲಕ್ಷ ರೂ.ಶುಲ್ಕವನ್ನೇ ಪಾವತಿ ಮಾಡಬೇಕಾಗುತ್ತದೆ. ಖಾಸಗಿ ಕಾಲೇಜುಗಳ ಲೆಕ್ಕಾಚಾರ ನೋಡುವುದಿದ್ದರೆ 50 ಲಕ್ಷ ರೂ. ಮೊತ್ತವನ್ನು ವಿದ್ಯಾರ್ಥಿಗಳು ಭರಿಸಬೇಕಾಗುತ್ತದೆ. ಆದರೆ, ಉಕ್ರೇನ್‌ನ ಕಾಲೇಜುಗಳಲ್ಲಿ ವಾರ್ಷಿಕವಾಗಿ 4 ಲಕ್ಷ ರೂ.ಗಳಿಂದ 5 ಲಕ್ಷ ರೂ. ಇದ್ದರೆ ಸಾಕು.
– ಭಾರತದಿಂದ ಸರಿ ಸುಮಾರು 20 ಸಾವಿರ ಮಂದಿ ವಿದ್ಯಾರ್ಥಿಗಳು ಆ ದೇಶದಲ್ಲಿ ಕಲಿಯುತ್ತಿದ್ದಾರೆ. ಈ ಪೈಕಿ ನಾಲ್ಕು ಸಾವಿರ ಮಂದಿ ವೈದ್ಯಕೀಯ ಕೋರ್ಸ್ ಕಲಿಯುತ್ತಿದ್ದಾರೆ. 2020ರಲ್ಲಿ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ 18 ಸಾವಿರ ಮಂದಿ ಭಾರತೀಯರು ಇದ್ದಾರೆ. ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ನಡೆಸಿದ ಅಧ್ಯಯನದ ಪ್ರಕಾರ 20 ಸಾವಿರ ಮಂದಿ ಇದ್ದಾರೆ.
ಅಲ್ಲಿನ ಕಾಲೇಜುಗಳಲ್ಲಿ ಪ್ರವೇಶ ಹೇಗೆ?
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ದೇಶದಲ್ಲಿನ ಎಂಬಿಬಿಎಸ್ ಕೋರ್ಸ್ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ)ಯಲ್ಲಿ ಉತ್ತೀರ್ಣರಾದರೆ ಸಾಕಾಗುತ್ತದೆ. ದೇಶದಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಸಿಗಲು ಅಸಾಧ್ಯವಾದರೆ, ಹೇಗಿದ್ದರೂ, ಕೈಗೆಟಕುವ ದರದಲ್ಲಿ ವೈದ್ಯಕೀಯ ಕೋರ್ಸ್ ಸಿಗುವ ಉಕ್ರೇನ್‌ನ ವಿವಿಗಳನ್ನು ಕೆಲವರು ಆಯ್ಕೆ ಮಾಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.