ಅಮೆರಿಕ ಪೌರತ್ವ ಭಾರತೀಯರಿಗೇ ಹೆಚ್ಚು
Team Udayavani, Jan 22, 2020, 7:28 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ನ್ಯೂಯಾರ್ಕ್: ಹಾಲಿ ವರ್ಷಾಂತ್ಯಕ್ಕೆ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆದ್ದು ಬರುತ್ತಾರೋ ಇಲ್ಲವೋ ಎಂಬ ವಿಚಾರ ಚರ್ಚೆಯಲ್ಲಿರುವಾಗಲೇ ಅಮೆರಿಕದಲ್ಲಿ 2019ನೇ ಸಾಲಿನಲ್ಲಿ 8.34 ಲಕ್ಷ ವಲಸಿಗರಿಗೆ ಪೌರತ್ವ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಪೌರತ್ವ ನೀಡುವಿಕೆ ಪ್ರಮಾಣದಲ್ಲಿ ಇದು ಹನ್ನೊಂದು ವರ್ಷಗಳಲ್ಲೇ ದಾಖಲೆ. 2018ನೇ ಸಾಲಿಗೆ ಹೋಲಿಸಿದರೆ ಈ ಪ್ರಮಾಣ ಶೇ.9.5ರಷ್ಟು ಹೆಚ್ಚಾಗಿದೆ.
ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ (ಯುಎಸ್‌ಸಿಐಎಸ್) ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ 5.77 ಲಕ್ಷ ಮಂದಿಗೆ ಪೌರತ್ವ ನೀಡಲಾಗಿದೆ. ಇನ್ನು ಅಮೆರಿಕದ ಗೃಹ ಖಾತೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಭಾರತೀಯ ಮೂಲದ 52,194 ಮಂದಿಗೆ ಪೌರತ್ವ ನೀಡಲಾಗಿದೆ. ಅದು ದೇಶವಾರು ಗ್ರೀನ್ ಕಾರ್ಡ್ ನೀಡಿಕೆಯ ಲೆಕ್ಕದ ವಿವರಗಳನ್ನು ಇರಿಸುತ್ತಿದ್ದು, ಈ ಪಟ್ಟಿಯಲ್ಲಿ ಭಾರತದ ಸ್ಥಾನ ನಾಲ್ಕನೆಯದ್ದಾಗಿದೆ.
ಹೊಸತಾಗಿ ಪೌರತ್ವ ಪಡೆದುಕೊಂಡಿರುವ ಪೈಕಿ ಭಾರತೀಯ ಮೂಲದವರ ಪ್ರಮಾಣ ಶೇ.6.9 ಆಗಿದೆ. ಮೆಕ್ಸಿಕೋದಿಂದ ಬಂದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸುಮಾರು 1 ಲಕ್ಷ ಮಂದಿ ಇದ್ದಾರೆ. ಅಮೆರಿಕವು ಗ್ರೀನ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದೆ ಎಂಬ ಸರಣಿ ಟೀಕೆಗಳನ್ನು ತಪ್ಪಿಸಲು ಈ ವರದಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಗ್ರೀನ್‌ಕಾರ್ಡ್‌ಗಾಗಿ ಇರುವ ಅರ್ಜಿ ಪ್ರಮಾಣ ಶೇ.14, ಪೌರತ್ವಕ್ಕಾಗಿ ಕಾಯುತ್ತಿರುವವರ ಪ್ರಮಾಣ ಶೇ.12 ಆಗಿದೆ ಎಂದು ಯುಎಸ್‌ಸಿಐಎಸ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.