5ಜಿ ತಂತ್ರಜ್ಞಾನ ಪೂರ್ಣವಾಗಿ ಭಾರತದ್ದೇ: ನಿರ್ಮಲಾ ಸೀತಾರಾಮನ್
Team Udayavani, Oct 15, 2022, 7:30 AM IST
ವಾಷಿಂಗ್ಟನ್: 5ಜಿ ತರಂಗಾಂತರವನ್ನು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಇತರೆ ಯಾರ ಪಾತ್ರವೂ ಇಲ್ಲ, ಯಾರಿಂದಲೂ ಏನನ್ನೂ ಪಡೆದುಕೊಂಡಿಲ್ಲ. ಇತರೆ ದೇಶಗಳಿಗೆ ಅದನ್ನು ಪೂರೈಸಲೂ ಸಿದ್ಧ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅವರು ಜಾನ್ ಹಾಪಿನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುವಾಗ ಮೇಲಿನಂತೆ ನುಡಿದರು. ದ.ಕೊರಿಯದಿಂದ ನೆರವು ಪಡೆಯಲಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಈ ತಂತ್ರಜ್ಞಾನವನ್ನು ಯಾರಿಂದಲೂ ಪಡೆದುಕೊಂಡಿಲ್ಲ. ಇದು ಸಂಪೂರ್ಣ ಭಾರತದ್ದೇ ಉತ್ಪನ್ನ ಎಂದು ನಿರ್ಮಲಾ ಹೇಳಿದ್ದಾರೆ.
ಜಾಗತಿಕವಾಗಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಭಾರತ ಹೊರಬರಲಿದೆ. ವೇಗವಾಗಿ ಡಿಜಿಟೈಸ್ ಆಗುತ್ತಿದೆ, ಕೇಂದ್ರ ಸರ್ಕಾರ ಅದಕ್ಕೆ ಪೂರಕವಾಗಿ ಎಲ್ಲ ವ್ಯವಸ್ಥೆಯನ್ನು ಸಿದ್ಧಗೊಳಿಸುತ್ತಿದೆ. ಡಿಜಿಟೈಸೇಶನ್ ವಿಚಾರದಲ್ಲಿ ಭಾರತ ಒಂದು ಮೈಲುಗಲ್ಲನ್ನೇ ನಿರ್ಮಿಸಲಿದೆ ಎನ್ನುವುದು ನಿರ್ಮಲಾ ಅವರ ವಿಶ್ವಾಸದ ನುಡಿಗಳು. ಇದೇ ವೇಳೆ ಐಎಂಎಫ್ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ನಿರ್ಮಲಾ, ಆಸ್ಟ್ರೇಲಿಯ, ಈಜಿಪ್ಟ್ ವಿತ್ತಸಚಿವರೊಂದಿಗೆ ಸಭೆಯನ್ನೂ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.