ಭಾರತದ ಭವಿಷ್ಯತ್ತಿನ ಆರ್ಥಿಕ ಬೆಳವಣಿಗೆ ಅತ್ಯಂತ ಸದೃಢ: IMF
Team Udayavani, Jul 18, 2018, 11:18 AM IST
ವಾಷಿಂಗ್ಟನ್ : ಏರಿದ ತೈಲ ಬೆಲೆ ಮತ್ತು ಬಿಗಿ ಹಣಕಾಸು ನೀತಿಯಿಂದಾಗಿ ಭಾರತದ ಆರ್ಥಿಕ ಪ್ರಗತಿಯ ಅಂದಾಜನ್ನು 2018-19ರ ಸಾಲಿಗೆ ಸ್ವಲ್ಪ ಮಟ್ಟಿಗೆ ಇಳಿಸಿರುವ ಹೊರತಾಗಿಯೂ ಭಾರತದ ಭವಿಷ್ಯತ್ತಿನ ಆರ್ಥಿಕ ಬೆಳವಣಿಗೆ ಅತ್ಯಂತ ಸದೃಢವಾಗಿದೆ ಎಂದು IMF ಹೇಳಿದೆ.
2018ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.7.3 ಆಗಲಿದ್ದು 2019ರಲ್ಲಿ ಇದು ಶೇ.7.5 ಆಗಲಿದೆ; ಈ ವರ್ಷ ಎಪ್ರಿಲ್‌ನಲ್ಲಿ ಅಂದಾಜಿಸಲಾಗಿರುವುದಕ್ಕಿಂತ ಇದು ಅನುಕ್ರಮವಾಗಿ ಶೇ.0.1 ಮತ್ತು ಶೇ.0.3ರಷ್ಟು ಕಡಿಮೆ ಎಂದು ಇಂಟರ್‌ನ್ಯಾಶನಲ್ ಮಾನಿಟರಿ ಫಂಡ್ (IMF) ಇಂದು ಸೋಮವಾರ ಹೇಳಿದೆ.
ಭಾರತದ ಆರ್ಥಿಕತೆಯು ಅತ್ಯಂತ ಬಲಿಷ್ಠವಾಗಿದ್ದು ಇದು ಭವಿಷ್ಯದಲ್ಲಿ ಇನ್ನಷ್ಟು ಸದೃಢವಾಗಲಿದೆ ಎಂದು IMF ಆರ್ಥಿಕ ಸಲಹೆಗಾರ ಮತ್ತು ಸಂಶೋಧನ ವಿಭಾಗದ ನಿರ್ದೇಶ ಮೌರೀಸ್ ಆಬ್‌ಸ್‌ಫೆಲ್ಡ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಭಾರತದ ಆರ್ಥಿಕ ಪ್ರಗತಿಗೆ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಏರುತ್ತಿರುವ ತೈಲಬೆಲೆ. ಭಾರತ ತನ್ನ ತೈಲ ಆವಶ್ಯಕತೆಯ ಶೇ.80ರಷ್ಟು ಪ್ರಮಾಣವನ್ನು ಆಮದಿಸಿಕೊಳ್ಳುತ್ತದೆ. ಇದಲ್ಲದೆ ಪ್ರಕೃತ ಜಾಗತಿಕ ಹಣಕಾಸು ಸ್ಥಿತಿಗತಿ ಬಿಗಿಯಾಗಿರುವುದು ಭಾರತಕ್ಕೆ ಸವಾಲಾಗಿ ಪರಿಣಮಿಸಿದೆ. ಇವೇ ಕಾರಣಗಳಿಂದಾಗಿ ಎರಡು ಹಣಕಾಸು ವರ್ಷಗಳಲ್ಲಿನ ಭಾರತದ ಆರ್ಥಿಕ ಪ್ರಗತಿಯ ಅಂದಾಜನ್ನು ಸ್ವಲ್ಪಮಟ್ಟಿಗೆ ಇಳಿಸಲಾಗಿದೆ ಎಂದು ಮೌರೀಸ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್
Sandalwood: ಶ್ರೀರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ಪ್ರಕಟ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.