ಚೀನ ಜತೆ ‘ಉಗ್ರ’ ಪ್ರಸ್ತಾವ
ಜಿನ್‌ಪಿಂಗ್, ಪುತಿನ್ ಜತೆಗೆ ಪ್ರಧಾನಿ ಮೋದಿ ಮಾತುಕತೆ
Team Udayavani, Jun 14, 2019, 6:00 AM IST
ಬಿಷ್ಕೆಕ್: ಉಗ್ರರನ್ನು ಪೋಷಿಸುತ್ತಿರುವ ನೆರೆರಾಷ್ಟ್ರ ಪಾಕಿಸ್ಥಾನದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮತ್ತೆ ಗುಡುಗಿ ದ್ದಾರೆ. ಕಿರ್ಗಿಸ್ಥಾನದ ಬಿಷ್ಕೆಕ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟ ಸಮ್ಮೇಳನದ ಮಧ್ಯೆಯೇ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್‌ರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಪಾಕಿಸ್ಥಾನವು ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಕುರಿತು ಚೀನ ಅಧ್ಯಕ್ಷ ಜಿನ್‌ಪಿಂಗ್ ಜತೆಗಿನ ಮಾತುಕತೆ ವೇಳೆ ಮೋದಿ ಪ್ರಸ್ತಾವಿಸಿದ್ದಾರೆ.
ಪಾಕ್ ಜತೆಗೆ ಸಂಬಂಧ ಸುಧಾರಣೆಗೆ ನಾವು ಪ್ರಯತ್ನ ನಡೆಸಿದೆವು. ಪಾಕಿಸ್ಥಾನವು ಉಗ್ರರಿಂದ ಮುಕ್ತವಾದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಸದ್ಯದ ಸ್ಥಿತಿಯಲ್ಲಿ ಇದು ಸಾಧ್ಯವಾಗುವಂತೆ ಕಾಣುತ್ತಿಲ್ಲ. ಹೀಗಾಗಿ ಭಾರತ ಪ್ರಸ್ತಾಪಿಸಿದ ವಿಚಾರಗಳ ಕುರಿತು ಕಠಿನ ಕ್ರಮಗಳನ್ನು ಪಾಕಿಸ್ಥಾನ ತೆಗೆದುಕೊಳ್ಳುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ ಎಂದಿದ್ದಾರೆ ಮೋದಿ.
ಪ್ರಧಾನಿ ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಅನಂತರ ಇದೇ ಮೊದಲ ಭಾರಿಗೆ ಚೀನ ಹಾಗೂ ರಷ್ಯಾ ಅಧ್ಯಕ್ಷರನ್ನು ಭೇಟಿ ಮಾಡಿದ್ದು, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಭಾರತ ಮತ್ತು ಚೀನ ಸಂಬಂಧ ಸುಧಾರಣೆ ಹಾಗೂ ಇತರ ಹಲವು ವಿಚಾರಗಳ ಕುರಿತು ಜಿನ್‌ಪಿಂಗ್ ಜತೆ ಮಾತುಕತೆ ನಡೆಸಲಾಗಿದ್ದು, ಇದು ಅತ್ಯಂತ ಫಲಪ್ರದವಾಗಿತ್ತು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತ ಮತ್ತು ಚೀನ ಸಂಬಂಧಕ್ಕೆ 70 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 20 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಚೀನ ಬ್ಯಾಂಕ್ ಶಾಖೆಯನ್ನು ಭಾರತದಲ್ಲಿ ತೆರೆಯುವ ಹಲವು ದಿನಗಳ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ ಎಂದೂ ಮೋದಿ ಹೇಳಿದ್ದಾರೆ.
ವುಹಾನ್‌ನಲ್ಲಿ ಭೇಟಿ ಮಾಡಿದ ಅನಂತರ ಉಭಯ ದೇಶಗಳ ಸಂಬಂಧದಲ್ಲಿ ಸುಧಾರಣೆ ಕಂಡಿದೆ. ಎರಡೂ ದೇಶಗಳ ಮಧ್ಯದ ಸಂವಹನಗಳಲ್ಲೂ ಉತ್ತಮ ಪ್ರಗತಿಯಿದೆ. ಇದರಿಂದಾಗಿ ಎರಡೂ ದೇಶಗಳ ಕಾಳಜಿ ಮತ್ತು ಹಿತಾಸಕ್ತಿಗಳ ಕುರಿತು ಸಂವೇದನೆ ಮೂಡಿದೆ ಎಂದು ಮೋದಿ ಹೇಳಿದ್ದಾರೆ. ಡೋಕ್ಲಾಂ ಸಂಘರ್ಷದ ಅನಂತರದಲ್ಲಿ ಮೋದಿ ಹಾಗೂ ಜಿನ್‌ಪಿಂಗ್‌ರ ವುಹಾನ್ ಭೇಟಿ ಅತ್ಯಂತ ಮಹತ್ವದ್ದು ಎಂದು ಪರಿಗಣಿಸಲಾಗಿದೆ.
ಸಂಬಂಧ ಸುಧಾರಣೆಗೆ ಮೋದಿ ಯತ್ನಿಸಲಿ
ರಷ್ಯಾಗೆ ಮೋದಿ
ಜಿನ್‌ಪಿಂಗ್‌ಗೆ ಆಹ್ವಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.