ಭಾರತ-ಪಾಕ್ ನಡುವೆ ಸ್ಥಗಿತಗೊಂಡಿದ್ದ ಸೇವೆ : ಅಂಚೆ ಸಂಬಂಧ ಪುನಃ ಸ್ಥಾಪನೆ
Team Udayavani, Nov 24, 2019, 6:53 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲುಧಿಯಾನಾ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದನ್ನು ರದ್ದು ಮಾಡಿದ್ದನ್ನು ಖಂಡಿಸಿ ಪಾಕಿಸ್ತಾನ ಮೂರು ತಿಂಗಳ ಹಿಂದೆ ಸ್ವಯಂ ಪ್ರೇರಿತವಾಗಿ ಭಾರತದ ಜತೆಗೆ ಇದ್ದ ಅಂಚೆ ಸಂಬಂಧ ಕಡಿದುಕೊಂಡಿತ್ತು. ಇದೀಗ ವಾಘಾ ಗಡಿಯ ಮೂಲಕ ಆಂಶಿಕವಾಗಿ ಸಾಮಾನ್ಯ ಅಂಚೆ ಸೇವೆ ಮತ್ತು ಎಕ್ಸ್‌ಪ್ರೆಸ್ ಮೈಲ್ ಸೇವೆಗಳು ಶುರುವಾಗಿವೆ. ಮೂರು ದಿನಗಳ ಹಿಂದೆ ಈ ಬಗ್ಗೆ ಪಾಕಿಸ್ಥಾನದ ಅಂಚೆ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಪಾರ್ಸೆಲ್ ಮತ್ತು ಇತರ ಅಂಚೆ ಸೇವೆಗಳು ಎರಡು ದೇಶಗಳ ನಡುವೆ ಶುರುವಾಗಿಲ್ಲ.
ಪಾಕಿಸ್ಥಾನ ಆಂಶಿಕವಾಗಿ ಅಂಚೆ ಸೇವೆ ಶುರು ಮಾಡಿದ್ದಕ್ಕೆ ಪ್ರತಿಯಾಗಿ ವಿದೇಶಾಂಗ ಇಲಾಖೆ ಕೂಡ ಭಾರತದ ವತಿಯಿಂದ ಅಂಚೆ ಸೇವೆಗಳನ್ನು ಪುನರಾರಂಭಿಸುವುದರ ಬಗ್ಗೆ ಹಸಿರು ನಿಶಾನೆ ತೋರಿಸಿದೆ. ಭಾರತೀಯ ಅಂಚೆಯ ಇಲಾಖೆಯ ಅಂತಾರಾಷ್ಟ್ರೀಯ ವಿಭಾಗದ ಉಪ ಮಹಾನಿರ್ದೇಶಕ ತನ್ವೀರ್ ಖಮರ್ ಮೊಹಮ್ಮದ್ ಕೂಡ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.
ಪಾಕಿಸ್ಥಾನ ಸೇವೆ ಮತ್ತೆ ಆರಂಭಿಸಿದ್ದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಹೀಗಾಗಿ ಭಾರತದ ವತಿಯಿಂದಲೂ ಪೂರಕ ಕ್ರಮಗಳನ್ನು ಕೈಗೊಳ್ಳ ಲಾಗುತ್ತದೆ ಎಂದರು. ಮೂರು ತಿಂಗಳ ಅವಧಿಯಲ್ಲಿ ಪಾಕಿಸ್ಥಾನಕ್ಕೆ ಕಳುಹಿಸಬೇಕಾಗಿದ್ದ ಪತ್ರಗಳನ್ನು ಕಳುಹಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.