ಉಕ್ರೇನ್ ನಾಗರಿಕ ವಿಮಾನವನ್ನು ಉರುಳಿಸಿದ್ದು ನಾವೇ; ತಪ್ಪೊಪ್ಪಿಕೊಂಡ ಇರಾನ್
Team Udayavani, Jan 11, 2020, 11:37 AM IST
ಟೆಹರಾನ್: ಇತ್ತೀಚೆಗಷ್ಟೇ ಸುಮಾರು 176 ಜನರ ಸಾವಿಗೆ ಕಾರಣವಾಗಿದ್ದ ಉಕ್ರೇನ್ ವಿಮಾನ ಪತನವನ್ನು ಮಾಡಿಸಿದ್ದು ನಾವೇ ಎಂದು ಇರಾನ್ ತಪ್ಪೊಪ್ಪಿಕೊಂಡಿದೆ.
ಆದರೆ ವಿಮಾನ ಹೊಡೆದುರುಳಿಸಿದ್ದು ಉದ್ದೇಶ ಪೂರ್ವಕವಾಗಿ ಅಲ್ಲ. ನಮ್ಮ ಸೇನಾಪಡೆಗಳ ತಪ್ಪು ಗ್ರಹಿಕೆಯಿಂದಾಗಿರುವ ಘಟನೆ ಎಂದು ಇರಾನ್ ಒಪ್ಪಿಕೊಂಡಿದೆ.
ಇರಾನ್ ರಾಜಧಾನಿ ಟೆಹರಾನ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಬೋಯಿಂಗ್ 737 ಸರಣಿಯ ಈ ವಿಮಾನ ಪತನವಾಗಿತ್ತು. ಉಕ್ರೇನ್ ಗೆ ಸೇರಿದ್ದ ಈ ವಿಮಾನದಲ್ಲಿದ್ದು ಎಲ್ಲರೂ ಅಸುನೀಗಿದ್ದರು.
ಆದರೆ ಈ ಮೊದಲು ತಾಂತ್ರಿಕ ದೋಷದಿಂದಾಗಿ ವಿಮಾನ ಪತನವಾಗಿದೆ ಎಂದು ಹೇಳಲಾಗಿತ್ತು. ಅಮೇರಿಕಾದ ಮೇಲೆಯೂ ಆರೋಪಿಸಲಾಗಿತ್ತು. ಆದರೆ ತಪ್ಪು ಗ್ರಹಿಕೆಯಿಂದ ಇರಾನ್ ಈ ವಿಮಾನ ಹೊಡೆದುರುಳಿಸಿದೆ ಎಂದು ಅಮೇರಿಕಾ ಹೇಳಿತ್ತು. ಆದರೆ ಮೊದಲು ಇದನ್ನು ತಿರಸ್ಕರಿಸಿದ್ದ ಇರಾನ್, ಸೇನಾಪಡೆಗಳ ತಪ್ಪು ಗ್ರಹಿಕೆಯಿಂದಾಗಿ ತಾವೇ ನಾಗರಿಕ ವಿಮಾನವನ್ನು ಹೊಡೆದುರುಳಿಸಿದೆ ಎಂದು ಒಪ್ಪಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.